ಪ್ರಣಾಮ್ ಅಗರಬತ್ತಿಗಳು ಗಮನಿಸಿ: ನಮ್ಮ ಈ Product ಗೆ ಕರ್ನಾಟಕದಾದ್ಯಂತ Distributer ಗಳು ಬೇಕಾಗಿದ್ದಾರೆ.. ಆಸಕ್ತರು ಕಂಪನಿ Customer care no 9686019158 ಗೆ ಸಂಪರ್ಕಿಸಿ...

ಮಂಗಳವಾರ, ಮಾರ್ಚ್ 20, 2018

ದಿನಕ್ಕೊಂದು ಕಗ್ಗ - 01

Bootstrap Case

ಸಂಕೇತಭಾವಮಯ ಲೋಕಜೀವನದ ನಯ ।

ಸಂಖ್ಯೆ ಗುಣ ಹೇತು ಕಾರ್ಯಗಳ ಲಕ್ಷಣದಿಂ- ॥

ದಂಕಿತಂಗಳು ಪದಪದಾರ್ಥ ಸಂಬಂಧಗಳು ।

ಅಂಕೆ ಮೀರ್ದುದು ಸತ್ತ್ವ - ಮಂಕುತಿಮ್ಮ ॥ ೮೯೫ ॥




ಈ ಲೋಕದ ಜೀವನ, ಸಂಕೇತ ಮತ್ತು ಭಾವಗಳಿಂದ ಕೂಡಿದೆ.
ಸಂಖ್ಯೆ,ಗುಣ ಮತ್ತು ಕಾರ್ಯ ಲಕ್ಷಣಗಳಿಂದ ಪದಾರ್ಥಗಳ ಗುರುತು ಮತ್ತು ಅವುಗಳ ಪರಸ್ಪರ ಸಂಬಂಧಗಳಿರುತ್ತವೆ.
ಆದರೆ ಇವುಗಳೆಲ್ಲಕ್ಕೂ ಆಧಾರವಾದ ಆ ಪರತತ್ವ, ಈ ಎಲ್ಲದರಿಂದ ಅತೀತವಾಗಿರುತ್ತದೆ, ಎಂದು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಪ್ರಸ್ತಾಪಮಾಡಿದ್ದಾರೆ.



"In this worldly existence, feelings and names are important.
These have origins in numbers, qualities, actions or other characteristics.
They form the link between the object and the name it is known by.
But the real existence (of the object) is beyond the measuring scale or the name it gets because of it." - Mankutimma

#UttishtaBharata#DVG

ಕೃಪೆ:ಕಗ್ಗರ‌ಸಧಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ