ಗಣಪತಿ ಹಾಡು
ಗಜಮುಖನೆ ಗಣಪತಿಯೆ
ಸಾಹಿತ್ಯ : ವಿಜಯ ನರಸಿಂಹ
ಸಂಗೀತ : ಎಂ. ರಂಗರಾವ್
ಗಾಯಕಿ : ಶಾರದ ಭಗವತುಲ
ಶುಕ್ಲಾಂಬರಧರಂ ವಿಷ್ಣುಂ | ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ | ಸರ್ವ ವಿಘ್ನೋಪಶಾಂತಯೆ ||
ಗಜಮುಖನೇ ಗಣಪತಿಯೇ ನಿನಗೆ ವಂದನೆ |.
ನಂಬಿದವರ ಬಾಳಿನ ಕಲ್ಪತರು ನೀನೆ || ಪ ||
ಭಾದ್ರಪದ ಶುಕ್ಲದ ಚೌತಿಯಂದು |
ನೀ ಮನೆಮನೆಗೂ ದಯಮಾಡಿ ಹರಸು ಎಂದು |
ನಿನ್ನ ಸನ್ನಿಧಾನದಿ ತಲೆಬಾಗಿ ಕೈಯ್ಯ ಮುಗಿದು |
ಬೇಡುವಾ ಭಕ್ತರಿಗೆ ನೀ ದಯಾಸಿಂಧು || ಪ ||
ಈರೇಳು ಲೋಕದ ಅಣುಅಣುವಿನ |
ಇಹಪರದ ಸಾಧನಕೆ ನೀ ಕಾರಣ |
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ |
ನೀಡಿದರೆ ಸಾಕಯ್ಯ ಜನ್ಮ ಪಾವನ || ಪ ||
ಪಾರ್ವತೀ ಪರಶಿವನ ಪ್ರೇಮಪುತ್ರನೇ |
ಪಾಲಿಸುವ ಪರದೈವ ಬೇರೆ ಕಾಣೆ |
ಪಾಪದ ಪಂಕದಲಿ ಪದುಮ ಎನಿಸು ಎನ್ನ |
ಪಾದಸೇವೆಯೊಂದೇ ಧರ್ಮ ಸಾಧನ || ಪ ||
click play button into the video bar
ಗಣಪತಿ ಹಾಡು
ವಂದಿಪೆ ನಿನಗೆ ಗಣನಾಥ
ಸಾಹಿತ್ಯ :ಶ್ರೀಪಾದ ರಾಜರು
ರಾಗ: ಪುತ್ತುರ್ ನರಸಿಂಹ ನಾಯಕ್
ತಾಳ: ಆದಿ
ವಂದಿಪೆ ನಿನಗೆ ಗಣನಾಥಾ, ಮೊದಲೊಂದಿಪೆ ನಿನಗೆ ಗಣನಾಥಾ || ಪ ||
ಬಂದವಿಘ್ನಕಳೆ ಗಣನಾಥ || ಅ.ಪ ||
ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿನ್ನ ಪಾದ
ಸಾಧಿಸಿದ ರಾಜ್ಯ ಗಣನಾಥ || ೧ ||
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥ || ೨ ||
ಮಂಗಳ ಮೂರುತಿ ಸಿರಿ ರಂಗವಿಟ್ಠಲನ್ನ ಪಾದ
ಭೃಂಗನೆ ಪಾಲಿಸೋ ಗಣನಾಥ || ೩ ||
ಗಣಪತಿ ಹಾಡು
ಶರಣು ಶರಣಯ್ಯ ಶರಣು ಬೆನಕ
ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ ನಮಸ್ತೆ ನಮಸ್ತೆ ನಮಃ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ |೨|
ಗರಿಗೆ ತಂದರೆ ನೀನು …..ಅ ಅ ಅ ….
ಗರಿಗೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓದುವುದು ಭೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲಿ ನಿನ್ನಯ ಪ್ರೀತಿ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ
ನಿನಗೆ ಇಪ್ಪತ್ತೊಂದು ನಾಮಸ್ಕಾರಗಳು
click play button into the video bar
ಗಣಪತಿ ಹಾಡು
ಶರಣು ಸಿದ್ದಿ ವಿನಾಯಕ
ಸಾಹಿತ್ಯ : ಶ್ರೀ ಪುರಂದರ ದಾಸರು
ಸಂಗೀತ : ಗುರುರಾಜ್ ಎಂ ಬಿ
ಗಾಯಕಿ : ಸಂಗೀತ ಬಾಲಚಂದ್ರ
ಶರಣು ಸಿದ್ದಿ ವಿನಾಯಕ
ಶರಣು ವಿದ್ಯಾ ಪ್ರದಾಯಕ ||ಅ||
ಶರಣು ಪಾರ್ವತೀತನಯ ಮೂರುತಿ
ಶರಣು ಮೂಷಕವಾಹನ ||ಅಪ||
ನಿಟಿಲ ನೇತ್ರನೆ ವರದಪುತ್ರನೆ
ನಾಗಭೂಷಣ ಪ್ರಿಯನೇ
ಕಟಕಟಾಂಗದ ಕೋಮಲಾಂಗನೆ
ಕರ್ಣ ಕುಂಡಲ ಧಾರನೆ ||೧||
ಬಟ್ಟ ಮುತ್ತಿನ ಹಾರಪದಕನೆ
ಬಾಹುಹಸ್ತ ಚತುಷ್ಟನೆ
ಇಟ್ಟ ತೂಡುಗೆಯ ಹೇಮಕಂಕಣ
ಪಾಶಾಂಕುಶ ಧಾರನೆ ||೨||
ಕುಕ್ಷಿ ಮಹಾಲಂಬೋದರನೆ
ನೀ ಇಕ್ಷುಚಾಪನ ಗೆಲಿದನೆ
ಪಕ್ಷಿವಾಹನ ಸಿರಿ ಪುರಂಧರ
ವಿಠಲನ ನಿಜದಾಸನೆ ||೩||
click play button into the video bar
ಗಣಪತಿ ಹಾಡು
ಗಜವದನ ಬೇಡುವೆ
ಸಾಹಿತ್ಯ : ಶ್ರೀ ಪುರಂದರ ದಾಸರು
ಸಂಗೀತ : ಗುರುರಾಜ್ ಎಂ ಬಿ
ಗಾಯಕಿ : ಸಂಗೀತ ಬಾಲಚಂದ್ರ
ಗಜವದನ ಬೇಡುವೆ |೨|
ಗಜವದನ ಬೇಡುವೆ ಗೌರಿ ತನಯ |೩|
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ!
ಪಾಶಾಂಕುಶಧರ ಪರಮ ಪವಿತ್ರ |೨|
ಮೂಷಕ ವಾಹನ ಮುನಿ ಜನ ಪ್ರೇಮ |೩|
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ!
ಮೋದದಿ ನಿನ್ನಯ ಪಾದವ ತೋರೊ
ಸಾಧುವಂದಿತನೆ ಆದರದಿಂದಲಿ |೨|
ಸರಸಿಜನಾಭ ಶ್ರೀ ಪುರಂದರ ವಿಠ್ಠಲನ |೩|
ನಿರತ ನೆನೆಯುವಂತೆ ವರ ದಯ ಮಾಡೊ |೩|
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ
click play button into the video bar
ಗಣಪತಿ ಹಾಡು
ಅಂಬ ತನಯ ಹೇರಂಬ
ಸಾಹಿತ್ಯ : ಜಗನ್ನಾಥ ದಾಸರು
ಸಂಗೀತ : ಡಾ. ಎನ್ ಆರ್ ರಘು
ಗಾಯಕಿ : ರಾಘವೇಂದ್ರ ಬದಶೇಸಿ
ಅಂಬ ತನಯ ಹೇರಂಬ
ಕರುಣಾಂಬುಧೆ ತವ ಚರಣಾಂಬುಜಕೆ ಎರಗುವೆ
ದಶನ ಮೋದಕ ಪಾಶಾಂಕುಶ ಪಾಣಿ
ಅಸಮಚಾರುದೇಷ್ಣ ಕುಸುಮನಾಭನ ಪುತ್ರ
ಬೃಂದಾರಕ ವೃಂದ ವಂದಿತ ಚರಣ
ಅರವಿಂದಯುಗಳ ದಯದಿಂದ ನೋಡೆನ್ನ
ಯೂಥಪ ವದನ ಪ್ರದ್ಯೋತ ಸನ್ನಿಭ
ಜಗನ್ನಾಥ ವಿಠಲನ ಸಂಪ್ರೀತಿ ವಿಷಯ ಜಯ
click play button into the video bar
ಗಣಪತಿ ಹಾಡು
ಗಜವದನ ಪಾಲಿಸೋ
ಸಾಹಿತ್ಯ : ವಿಜಯ ವಿಠಲ ದಾಸರು
ಸಂಗೀತ : ಬೆಗಡೆ
ಗಾಯಕಿ :ರೋಸ್ ಮುರಳಿ ಕೃಷ್ಣನ್
ಗಜವದನ ಪಾಲಿಸೋ
ತ್ರಿಜಗದೊಡೆಯ ಶ್ರೀ ಭುಜಗ ಭೂಷಣ||
ಏಸು ದಿನಕೆ ನಿನ್ನ ವಾಸವ ಪೊಗಳುವೆ
ಲೇಸ ಪಾಲಿಸೊ ನಿತ್ಯ ವಾಸವನುತನೆ [1]
ಭಕ್ತಿಯೊಳು ಭಜಿಪೆನು ರಕ್ತಾಂಬರಧರ
ಮುಕ್ತಿ ಪಥವೀಯೋ ಶಕ್ತಿ ಸ್ವರೂಪ [2]
ಪೊಡವಿಯೊಳಗೆ ನಿನ್ನ ಬಿಡುವರಾರೋ ರನ್ನ
ಕಡು ಹರುಷದಿ ಕಾಯೋ ವಿಜಯ ವಿಟ್ಟಲ ದಾಸ [3]
click play button into the video bar
ಗಣಪತಿ ಹಾಡು
ಶರಣು ಬೆನಕನೆ ಕನಕರೂಪನೆ
ಸಾಹಿತ್ಯ : ಪುರಂದರ ದಾಸರು
ಶರಣು ಬೆನಕನೆ ಕನಕರೂಪನೆ
ಕಾಮಿನಿ ಸಂಗದೂರನೇ
ಶರಣು ಸಾಂಬನ ಪ್ರೀತಿ ಪುತ್ರನೆ
ಶರಣು ಜನರಿಗೆ ಮಿತ್ರನೆ
ಏಕದಂತನೆ ಲೋಕಖ್ಯಾತನೆ
ಏಕವಾಕ್ಯ ಪ್ರವೀಣನೇ
ಏಕವಿಂಶತಿ ಪತ್ರಪೂಜಿತ
ಅನೇಕ ವಿಘ್ನ ವಿನಾಯಕ [1]
ಲಂಬಕರ್ಣನೆ ನಾಸಿಕಾಧರನೆ
ಗಾಂಭೀರ್ಯಯುತ ಗುಣಸಾರನೇ
ಕಂಬುಕಂಧರ ಇಂದುಮೌಳಿಜ
ಚಂದನಚರ್ಚಿತಾಂಗನೇ [2]
ಚತುರ್ಬಾಹು ಚರಣ ತೊಡಲನೆ
ಚತುರ ಆಯುಧ ಧಾರನೇ
ಮತಿಯವಂತನೆ ಮಲಿನ ಜಲಿತನೆ
ಅತಿಯ ಮಧುರಾಹಾರನೇ [3]
ವಕ್ರತುಂಡನೆ ಮಹಾಕಾಯನೆ
ಅರ್ಕಕೋಟಿ ಪ್ರದೀಪನೇ
ಚಕ್ರಧರ ಹರಬ್ರಹ್ಮಪೂಜಿತ
ರಕ್ತ ವಸ್ತ್ರಾಧಾರನೇ [4]
ಮೂಷಿಕಾಸನ ಶೇಷಭೂಷಣ
ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಟ್ಠಲೇಶನ
ಈಶಗುಣಗಳ ಪೊಗಳುವೆ [5]
click play button into the video bar
ಗಣಪತಿ ಹಾಡು
ಶರಣು ಬೆನಕನೆ ಕನಕರೂಪನೆ
ಸಾಹಿತ್ಯ : ಪುರಂದರ ದಾಸರು
ಗಾಯಕಿ :ಕಾಂಚಣಾ ರಂಜನಿ ಸಹೋದರಿಯರು
ವಂದಿಸುವದಾದಿಯಲಿ ಗಣನಾಥನ ||
ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು ||
ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನು ಕೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು ||
ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ||
ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿಪುರಂದರವಿಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ ||
click play button into the video bar
ಗಣಪತಿ ಹಾಡು
ನಮ್ಮಮ್ಮ ಶಾರದೆ:
ಸಾಹಿತ್ಯ : ಕನಕ ದಾಸರು
ಗಾಯಕಿ :ಕಾಂಚಣಾ ರಂಜನಿ ಸಹೋದರಿಯರು
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ಅನುಪಲ್ಲವಿ:
ಕಮ್ಮ ಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ ಕಣಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ಚರಣ:
ಮೊರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ
ಮೊರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ
ಮೂರು ಕಣ್ಣನ್ನ ಸುತ ಮುರಿದಿಟ್ಟ ಚಂದ್ರನ….ಅ ಅ ಅ ಅ ಅ ಅ
ಮೂರು ಕಣ್ಣನ್ನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೆ ಕಣಮ್ಮಾ ||೧ ||
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ಉಟ್ಟ ಪಚ್ಚೆಯ ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮಾ
ಉಟ್ಟ ಪಚ್ಚೆಯ ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮಾ
ಪಟ್ಟದ ರಾಣಿ ಪಾರ್ವತಿಯ ಕುಮಾರನು ……ಅ ಅ ಅ ಅ ಅ ಅ
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೆ ಕಣಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮಾ
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮಾ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿ…ಅ ಅ ಅ ಅ ಅ ಅ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಾಣೆ ಕಣಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ಕಮ್ಮ ಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ ಕಣಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
click play button into the video bar
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
Menu 6
ಶ್ರೀ ಕೃಷ್ಣನ ಭಕ್ತಿಗೀತೆಗಳು
ಜಯ ಜನಾರ್ಧನ ಕೃಷ್ಣ ರಾಧಿಕಾಪತೇ:
ಜಯ ಜನಾರ್ಧನ ಕೃಷ್ಣ ರಾಧಿಕಾಪತೇ ಜನ ವಿಮೋಚನ ಕೃಷ್ಣ ಜನ್ಮ ಮೋಚನ ಗರುಡ ವಾಹನ ಕೃಷ್ಣ ಗೋಪಿಕಾ ಪತೇ ನಯನ ಮೋಹನ ಕೃಷ್ಣ ನೀರಜೇಕ್ಷಣ
ಸುಜನ ಬಾಂಧವ ಕೃಷ್ಣ ಸುಂದರ ಕೃತೆ ಮದನ ಕೋಮಲ ಕೃಷ್ಣ ಮಾಧವ ಹರೇ ವಸುಮತಿ ಪತೇ ಕೃಷ್ಣ ವಾಸವಾನುಜ ವರಗುಣಾಕರ ಕೃಷ್ಣ ವೈಷ್ಣವಾಕೃತೆ
ಸುರಚಿರಾನನ ಕೃಷ್ಣ ಶೌರ್ಯವಾರಿಧೆ ಮುರಹರ ವಿಭೋ ಕೃಷ್ಣ ಮುಕ್ತಿದಾಯಕ ವಿಮಲಪಾಲಕ ಕೃಷ್ಣ ವಲ್ಲಭಿಪತೆ ಕಮಲಲೋಚನಾ ಕೃಷ್ಣ ಕಾಮ್ಯದಾಯಕ
ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್ ಕುವಲೈಕ್ಷಣ ಕೃಷ್ಣ ಕೋಮಲಾಕೃತೆ ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ
ಭುವನ ನಾಯಕ ಕೃಷ್ಣ ಪಾವನಾಕೃತೆ ಗುಣಗಣೋಜ್ವಲಾ ಕೃಷ್ಣ ನಳಿನಲೋಚನ ಪ್ರಣಯವಾರಿಧೆ ಕೃಷ್ಣ ಗುಣಗಣಾಕರ ದಾಮಸೋದರ ಕೃಷ್ಣ ದೀನ ವತ್ಸಲ
ಕಾಮಸುಂದರ ಕೃಷ್ಣ ಪಾಹಿ ಸರ್ವಾದಾ ನರಕನಾಶನ ಕೃಷ್ಣ ನರಸಹಾಯಕ ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ ಕಂಸಾನಾಶನ ಕೃಷ್ಣ ದ್ವಾರಕಾಸ್ಥಿತ
ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್ ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ
ಭಕ್ತದಾಸ ನಾ ಕೃಷ್ಣ ಹರಸು ನೀ ಸದಾ ಕಾದು ನಿಂತೇನಾ ಕೃಷ್ಣ ಸಲಹೆಯಾ ವಿಭೋ ಗರುಡ ವಾಹನ ಕೃಷ್ಣ ಗೋಪಿಕಾ ಪತೇ ನಯನ ಮೋಹನ ಕೃಷ್ಣ ನೀರಜೇಕ್ಷಣ
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಬಾರೋ ಮುರಾರಿ ಬಾಲಕ ಶೌರಿ:
ಬಾರೋ ಮುರಾರಿ ಬಾಲಕ ಶೌರಿ ಸಾರ ವಿಚಾರಿ ಸಂತೋಷಕಾರಿ
ಆಟ ಸಾಕೇಳೋ ಮೈಯೆಲ್ಲ ಧೂಳೋ ಊಟ ಮಾಡೇಳೊ ಕೃಷ್ಣ ಕೃಪಾಳೊ
ಅರುಣಾಬ್ಜಚರಣ ಮಂಜುಳಾಭರಣ ಪರಮ ವಿತರಣ ಪನ್ನಗಶಯನ ಮನೆಗೆದ್ದು ಬಾರೋ ಕೊನೆಗಯ್ಯ ತೋರೋ ಚಿನ್ಮಯ ಬಾರೋ ನಗೆಮುಗ ತೋರೋ
ವೆಂಕಟರಮಣ ಸಂಕಟಹರಣ ಕಿಂಕರಾಮರಗಣ ವಂದಿತಚರಣ ಅರವಿಂದನಯನ ಶರದೇಂದುವದನ ವರಯದುಸದನ ಸಿರಿ ಹಯವದನ
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಕೃಷ್ಣ ನೀ ಬೇಗನೇ ಬಾರೋ
ಸಾಹಿತ್ಯ : ವ್ಯಾಸರಾಯರು
ತಾಳ : ಮಿಶ್ರ ಛಾಪು
ಪಲ್ಲವಿ ಕೃಷ್ಣ ನೀ ಬೇಗನೇ ಬಾರೋ
ಅನುಪಲ್ಲವಿ ಬೇಗನೆ ಬಾರೋ ಮುಖವನ್ನು ತೋರೋ
ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ ನೀಲವರ್ಣನೆ ನಾಟ್ಯವಾಡುತ್ತ ಬಾರೋ ೧
ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ವೈಜಯಂತಿಮಾಲ ೨
ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಶಿದ ಶ್ರೀ ಗಂಧ ಮೈಯೊಳು ಗಮ್ಮ ೩
ತಾಯಿಗೆ ಬಾಯಲ್ಲಿ ಜಗವನ್ನು ತೋರಿದ ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ ೪
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ವೇಣುನಾದ ಪ್ರಿಯ ಗೋಪಾಲಕೃಷ್ಣ
ಸಾಹಿತ್ಯ : ವಾದಿರಾಜರು
ವೇಣುನಾದ ಪ್ರಿಯ ಗೋಪಾಲಕೃಷ್ಣ ವೇಣುನಾದ ವಿನೋದ ಮುಕುಂದ ಗಾನವಿನೋದ ಶೃಂಗಾರ ಗೋಪಾಲ
ವಂದಿತ ಚರಣ ವಸುಧೆಯ ಆಭರಣ ಇಂದಿರ ರಮಣ ಇನ ಕೋಟಿ ತೇಜ ಮಂದರಧರ ಗೋವಿಂದ ಮುಕುಂದ ಸಿಂಧು ಶಯನ ಹರಿ ಕಂದರ್ಪ ಜನಕ
ನವನೀತ ಚೋರ ನಂದ ಕುಮಾರ ಭುವನೇಕ ವೀರ ಬುದ್ಧಿ ವಿಸ್ತಾರ ರವಿಕೊಟಿ ತೇಜ ರಘುವಂಶ ರಾಜ ದಿವಿಜ ವಂದಿತ ಧನುಜಾರಿ ಗೋಪಾಲ
ಪರಮ ದಯಾಳು ಪಾವನ ಮೂರ್ತಿ ವರಕೀರ್ತಿ ಹಾರ ಶೃಂಗಾರ ಲೋಲ ಉರಗೇಂದ್ರ ಶಯನ ವರಹಯವದನ ಶರಣು ರಕ್ಷಕ ಪಾಹಿ ಕೋದಂಡ ರಾಮ
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಮಾತು ಮಾತಿಗೆ ಕೇಶವ ನಾರಾಯಣ:
ಸಾಹಿತ್ಯ : ವಾದಿರಾಜರು
ಪಲ್ಲವಿ ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ ಹೇ ಜಿಹ್ವೆ ||
ಅನುಪಲ್ಲವಿ ಪ್ರಾತಃಕಾಲದೊಳೆದ್ದು ಪಾರ್ಥಸಾರಥಿಯೆಂದು ಪ್ರೀತಿಲಿ ನೆನೆಯೆ ಸುಪ್ರೀತನಾಗುವ ಹರಿಯ ಏತಕ್ಕೆ ನೆನೆಬಾರದು ಹೇ ಜಿಹ್ವೆ ||
ಚರಣ ಜಲಜನಾಭನ ನಾಮವು ಈ ಜಗಕ್ಕೆಲ್ಲ ಜನನ ಮರಣಹರವು ಸುಲಭವಾಗಿಹುದು ಸುಖಕೆ ಕಾರಣವಿದು ಬಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು ತಿಳಿದು ತಿಳಿಯದಿಹರೇ ಹೇ ಜಿಹ್ವೆ ||೧||
ತರಳೆ ದ್ರೌಪದಿ ಸೀರೆಯ ಸೆಳೆಯುತಿರೆ ಹರಿ ನೀನೆ ಗತಿಯೆನಲು ಪರಮ ಪುರುಷ ಭವಭಂಜನ ಕೇಶವ ದುರುಳರ ಮರ್ದಿಸಿ ತರುಣಿಗೆ ವರವಿತ್ತ ಹರಿನಾಮ ಪ್ರಿಯವಲ್ಲವೇ ಹೇ ಜಿಹ್ವೆ||೨||
ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲ ನಾಮವೇ ಗತಿಯೆನಲು ಪ್ರೇಮದಿಂದಲಿ ಬಂದು ಕಾಮಿತಾರ್ಥಗಳಿತ್ತ ಸ್ವಾಮಿ ಹಯವದನನ ನಾಮವ ನೆನೆಯುತ್ತ ಯಾಮ ಯಮಕೆ ಬಿಡದೆ ಹೇ ಜಿಹ್ವೆ||೩||
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಮನ್ನಾರು ಕೃಷ್ಣಗೆ ಮಂಗಳ
ಸಾಹಿತ್ಯ : ಪುರಂದರ ದಾಸರು
ಮನ್ನಾರು ಕೃಷ್ಣಗೆ ಮಂಗಳ ಜಗವ ಮನ್ನಿಸಿದೊಡೆಯಗೆ ಮಂಗಳ ||ಪಲ್ಲವಿ||
ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆ ಕಮ್ಮಗೋಲನಯ್ಯಗೆ ಮಂಗಳ ಧರ್ಮರಕ್ಷಕನಿಗೆ ದಾನವಶಿಕ್ಷಗೆ ನಮ್ಮ ರಕ್ಷಕನಿಗೆ ಮಂಗಳ ||1||
ತುರುಗಳ ಕಾಯ್ದಗೆ ಕರುಣಾಕರನಿಗೆ ಗಿರಿಯನೆತ್ತಿದವಗೆ ಮಂಗಳ ವರದ ತಿಮ್ಮಪ್ಪಗೆ ವಾರಿಜನಾಭಗೆ ಹರಿ ಸರ್ವೋತ್ತಮನಿಗೆ ಮಂಗಳ||2||
ದೇವಕಿದೇವಿಯ ತನಯಗೆ ಮಂಗಳ ದೇವ ತಿಮ್ಮಪ್ಪಗೆ ಮಂಗಳ ಮಾವನ ಕೊಂದು ಮಲ್ಲರ ಮಡುಹಿದ ಪುರಂದರವಿಠಲಗೆ ಮಂಗಳ||3||
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಯಾದವ ನೀ ಬಾ ಯದುಕುಲನಂದನ:
ಸಾಹಿತ್ಯ : ಪುರಂದರ ದಾಸರು
ಯಾದವ ನೀ ಬಾ ಯದುಕುಲನಂದನ | ಮಾಧವ ಮಧುಸೂಧನ ಬಾರೋ ||ಪಲ್ಲವಿ||
ಸೋದರ ಮಾವನ ಮಧುರೆಲಿ ಮಡುಹಿದ ಯಶೋದೆ ಕಂದ ನೀ ಬಾರೋ ||ಅನುಪಲ್ಲವಿ||
ಚರಣ ಶಂಖಚಕ್ರವು ಕೈಯಲಿ ಹೊಳೆಯುತ | ಬಿಂಕದ ಗೋವಳ ನೀ ಬಾರೋ || ಅಕಳಂಕ ಮಹಿಮನೆ ಆದಿನಾರಾಯಣ | ಬೇಕೆಂಬ ಭಕುತರಿಗೊಲಿಬಾರೋ ||1||
ಕಣಕಾಲಂದುಗೆ ಘಲುಘಲುರೆನುತಲಿ | ಝಣಝಣ ವೇಣುನಾದದಲಿ || ಚಿಣಿಕೋಲು ಚೆಂಡು ಬುಗುರಿಯನಾಡುತ | ಸಣ್ಣ ಸಣ್ಣ ಗೋವಳರೊಡಗೂಡಿ ಬಾರೋ||2||
ಖಗವಾಹನನೇ ಬಗೆಬಗೆ ರೂಪನೇ | ನಗುಮೊಗದರಸನೇ ನೀ ಬಾರೋ || ಜಗದೊಳು ನಿನ್ನಯ ಮಹಿಮೆಯ ಪೊಗಳುವೆ| ಪುರಂದರವಿಠಲ ನೀ ಬಾರೋ ||3||
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಆಡಿದನೋ ರಂಗ ಅದ್ಭುತದಿಂದಲಿ
ತಾಳ : ಆದಿ
ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ [ಪ]
ಪಾಡಿದವರಿಗೆ ಬೇಡಿದ ವರಗಳ ನೀಡುತಲಿ ದಯ ಮಾಡುತಲಿ ನಲಿದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ [ಅ ಪ]
ಅಂಬುರುಹೋದ್ಭವ ಅಖಿಳ ಸುರರು ಕೂಡಿ ಅಂಬರದಲಿ ನಿಂತು ಅವರ ಸ್ತುತಿಸೆ ರಂಭೆ ಊರ್ವಶಿ ರಮಣಿಯರೆಲ್ಲರು ಚಂದದಿಂ ಭರತನಾಟ್ಯವ ನಟಿಸೆ ಝಂತಟ ತಕಧಿಮಿ ತಧಿಗಿಣಿ ತೋಂ ಎಂದು ಝಂಪೆ ತಾಳದಿ ತುಂಬುರುನೊಪ್ಪಿಸೆ ಧಾ ಮ ಪ ಧ ಸ ರೀ ಎಂದು ಧ್ವನಿಯಿಂದ ನಾರದ ತುಂಬುರು ಗಾನವ ಮಾಡಲು ನಂದಿಯು ಮದ್ದಲೆ ಚೆಂದದಿ ಹಾಕಲು[1]
ಫಣವ ಮೆಟ್ಟಿ ಬಾಲವ ಕೈಯಲಿ ಪಿಡಿದು ಫಳಫಳಿಸುತ್ತ ನಾಟ್ಯವನಾಡೆ ಚಂದ್ರಮಂಡಲದಂತೆ ಪೊಳೆಯುವ ಮುಖದೊಳು ಚಲಿಸುವ ನೀಲಕೇಶಗಳಾಡೆ ಕಾಲಲಂದುಗೆ ಗೆಜ್ಜೆ ಘಲು ಘಲು ಘಲುರೆನುತ ಉಡಿಗೆಜ್ಜೆ ಘಂಟೆಗಳಾಡೆ ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ ಪುಟ್ಟ ಪಾದವ ಇಟ್ಟು ಶ್ರೀ ಕೃಷ್ಣನು ಮೆಟ್ಟಿದನು ತಕ ಧಿಮಿ ತಧಿಕೆನುತ[2]
ಸುರರು ಪುಷ್ಪದ ವೃಷ್ಟಿಯ ಕರೆಯಲು ಸುದತಿಯರೆಲ್ಲರು ಪಾಡಲು ನಾಗಕನ್ನಿಕೆಯರು ನಾಥನ ಬೇಡಲು ನಾನಾ ವಿಧದಿ ಸ್ತುತಿ ಮಾಡಲು ರಕ್ಕಸರೆಲ್ಲರು ಕಕ್ಕಸವನೆ ಕಂಡು ದಿಕ್ಕು ದಿಕ್ಕುಗಳಿಗೆ ಓಡಲು ಚಿಕ್ಕವನಿವನಲ್ಲ ಪುರಂದರ ವಿಠ್ಠಲ ವೆಂಕಟರಮಣ ಬೇಗ ಯಶೋದೆ ಬಿಂಕದೊಳೆತ್ತಿ ಮುದ್ದಾಡೆ ಶ್ರೀ ಕೃಷ್ಣನ[3]
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ತೂಗಿರೆ ರಂಗನ ತೂಗಿರೆ ಕೃಷ್ಣನ
ಸಾಹಿತ್ಯ : ಪುರಂದರ ದಾಸರು
ಪಲ್ಲವಿ ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತ ಅನಂತನ
ಅನುಪಲ್ಲವಿ ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ
ಚರಣ ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗಕನ್ನಿಕೆಯರು ತೂಗಿರೇ ನಾಗವೇಣಿಯರು ನೇಣು ಪಿಡಿದುಕೊಂಡು ಬೇಗನೆ ತೊಟ್ಟಿಲ ತೂಗಿರೆ (೧)
ಇಂದ್ರ ಲೋಕದಲ್ಲುಪೇಂದ್ರ ಮಲಗ್ಯಾನೆ ಇಂದು ಮುಖಿಯರೆಲ್ಲ ತೂಗಿರೆ ಇಂದ್ರ ಕನ್ನಿಕೆಯರು ಬಂದು ಮುಕುಂದನ ತೊಟ್ಟಿಲ ತೂಗಿರೆ (೨)
ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ ನೀಲ ಕುಂತಳೆಯರು ತೂಗಿರೆ ವ್ಯಾಳ ಶಯನ ಹರಿ ಮಲಗು ಮಲಗು ಎಂದು ಬಾಲ ಕೃಷ್ಣಯ್ಯನ ತೂಗಿರೆ (೩)
ಸಾಸಿರ ನಾಮದ ಸರ್ವೋತ್ತಮನೆಂದು ಸೂಸುತ್ತ ತೊಟ್ಟಿಲ ತೂಗಿರೆ ಲೇಸಾಗಿ ಮಡುವಿನೊಳು ಶೇಷನ ತುಳಿದಿಟ್ಟ ದೋಷ ವಿದೂರನ ತೂಗಿರೆ (೪)
ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ ತರಳನ ತೊಟ್ಟಿಲ ತೂಗಿರೇ ಸಿರಿದೇವಿ ರಮಣನ ಪುರಂದರ ವಿಠಲನೆ ಕರುಣದಿ ಮಲಗೆಂದು ತೂಗಿರೆ (೫)
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಜಗದೋದ್ಧಾರನ ಆಡಿಸಿದಳೆಶೋದಾ
ಸಾಹಿತ್ಯ : ಪುರಂದರ ದಾಸರು
ಜಗದೋದ್ಧಾರನ ಆಡಿಸಿದಳೆಶೋದಾ ಜಗದೋದ್ಧಾರನ (ಪ)
ಜಗದೋದ್ಧಾರನ ಮಗನೆಂದು ತಿಳಿಯುತ ಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ)
ನಿಗಮಕೆ ಸಿಲುಕದ ಅಗಣಿತ ಮಹಿಮನ ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ (1)
ಅಣೋರಣೀಯನ ಮಹತೋ ಮಹಿಮನ ಅಪ್ರಮೇಯನ ಆಡಿಸಿದಳೆಶೋದಾ (2)
ಪರಮ ಪುರುಷನ ಪರವಾಸುದೇವನ ಪುರಂದರ ವಿಠಲನ ಆಡಿಸಿದಳೆಶೋದಾ (3)
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ನಂದ ತನಯ ಗೋವಿಂದನ
ಸಾಹಿತ್ಯ : ಪುರಂದರ ದಾಸರು
ತಾಳ : ಖಂಡ ಛಾಪು
ಪಲ್ಲವಿ ನಂದ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ
ಅನುಪಲ್ಲವಿ ಬಂಧಗಳನು ಭವ ರೋಗಗಳೆಲ್ಲನು ನಿಂದಿಪುದು ಈ ಮಿಠಾಯಿ
ಚರಣ ದಧಿ ಘೃತ ಕ್ಷೀರಂಗಳಿಗಿಂತಲೂ ಬಹು ಅಧಿಕವಾದ ಮಿಠಾಯಿ ಕದಳೀ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದು ಈ ಮಿಠಾಯಿ ೧
ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ ಕಂಚೀಶನೆ ರಕ್ಷಿಸು ಎಂದುಸಿರುವರ ಅಂಜಿಕೆ ಬಿಡಿಪ ಮಿಠಾಯಿ ೨
ಜಪ ತಪ ಸಾಧನಗಳಿಗಿಂತಲೂ ಬಹು ಅಪರೂಪದ ಮಿಠಾಯಿ ಜಿಪುಣ ಮತಿಗಳಿಗೆ ಸಧ್ಯವಲ್ಲದಿಹ ಪುರಂದರ ವಿಠಲ ಮಿಠಾಯಿ ೩
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಕಂಡೆ ನಾ ಗೋವಿಂದನಾ:
ಸಾಹಿತ್ಯ : ಪುರಂದರ ದಾಸರು
ತಾಳ : ಆದಿ
ಕಂಡೆ ನಾ ಗೋವಿಂದನಾ ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ (ಪ)
ಕೇಶವ ನಾರಾಯಣ ಶ್ರೀಕೃಷ್ಣನ ವಾಸುದೇವ ಅಚ್ಯುತಾನಂತನ ಸಾಸಿರ ನಾಮದ ಶ್ರೀಹೃಷೀಕೇಶನ ಶೇಷಶಯನ ನಮ್ಮ ವಸುದೇವಸುತನ (೧)
ಮಾಧವ ಮಧುಸೂದನ ತ್ರಿವಿಕ್ರಮ ಯಾದವಕುಲವಂದ್ಯನ ವೇದಾಂತವೇದ್ಯನ ಇಂದಿರಾರಮಣನ ಆದಿಮೂರುತಿ ಪ್ರಹ್ಲಾದವರದನ (೨)
ಪುರುಷೋತ್ತಮ ನರಹರಿ ಶ್ರೀಕೃಷ್ಣನ ಶರಣಾಗತರಕ್ಷಕನ ಕರುಣಾಕರ ನಮ್ಮ ಪುರಂದರವಿಠಲನ ನೆರೆ ನಂಬಿದೆನು ಬೇಲೂರ ಚೆನ್ನಿಗನ (೩)
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಕಂಡು ಕಂಡು ನೀ ಎನ್ನ ಕೈ ಬಿಡುವರೇ:
ಸಾಹಿತ್ಯ : ಪುರಂದರ ದಾಸರು
ತಾಳ : ಖಂಡ ಛಾಪು
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ ||
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ್ಷ ತಂದೆತಾಯಿಯು ನೀನೆ ಬಂಧುಬಳಗವು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||1||
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ಕಡುನೊಂದೆ ನಾನು ಸನಕಾದಿಮುನಿವಂದ್ಯ ವನಜಸಂಭವ ಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||2||
ಭಕ್ತವತ್ಸಲನೆಂಬೊ ಬಿರುದು ಪೊತ್ತಾ ಮೇಲೆ ಭಕ್ತರಾಧೀನನಾಗಿರಬೇಡವೆ ಮುಕ್ತಿದಾಯಕ ನೀನು ಹೊನ್ನೂರುಪುರವಾಸ ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||3||
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ
ಪಲ್ಲವಿ ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು ಭರದೊದೆಯಲವನಪಿತ ಕೋಪದಿಂದ
ಸ್ಥಿರವಾದೊಳಿ ಕಂಭದಲಿ ತೋರು ತೋರೆನಲು ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ ೧
ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ ತರುಣಿ ಹಾ ಕೃಷ್ಣ ಎಂದರೆ ಕೇಳ್ದು ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ ಪುರಿಗೆ ದ್ವಾರಾವತಿಯು ಕೂಗಳತೆಯೇ ೨
ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ ಗಣನೆಯಿಲ್ಲದ ಮಹಾಮಹಿಮನೆನಿಪ ಘನ ಕೃಪಾನಿಧಿ ನಮ್ಮ ಪುರಂದರ ವಿಠಲನ ನೆನೆವರ ಮನದೊಳಿಹನೆಂಬ ಬಿರುದುಂಟಾಗಿ ೩
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಮೂರುತಿಯೆನೆ ನಿಲ್ಲಿಸೋ , ಮಾಧವ ನಿನ್ನ
ಸಾಹಿತ್ಯ :ಪುರಂದರ ದಾಸರು
ಮೂರುತಿಯೆನೆ ನಿಲ್ಲಿಸೋ , ಮಾಧವ ನಿನ್ನ ಮೂರುತಿಯೆನೆ ನಿಲ್ಲಿಸೋ ||ಪ||
ಎಳೆ ತುಳಸಿಯ ವನಮಾಲೆಯು ಕೊರಳೊಳು ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ ||
ಮುತ್ತಿನ ಸರ ನವರತ್ನದುಂಗುರವಿಟ್ಟು ಮತ್ತೆ ಶ್ರೀ ಲಕುಮಿಯ ಉರದೊಳೊಪ್ಪುವ ನಿನ್ನ||
ಭಕ್ತರ ಕಲ್ಪತರು ಭಾಗ್ಯದ ಸುರಧೇನು ಮುಕ್ತಿದಾಯಕ ಸಿರಿ ಪುರಂದರ ವಿಠಲ ನಿನ್ನ||
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಜೋ ಜೋ ಶ್ರೀಕೃಷ್ಣ ಪರಮಾನಂದ
ಸಾಹಿತ್ಯ : ಕನಕ ದಾಸರು
ಜೋ ಜೋ ಶ್ರೀಕೃಷ್ಣ ಪರಮಾನಂದ ಜೋ ಜೋ ಗೋಪಿಯ ಕಂದ ಮುಕುಂದ ಜೋಜೋ ||ಪ||
ಪಾಲಗಡಲೊಳು ಪವಡಿಸಿದವನೇ ಆಲದೆಲೆಯ ಮೇಲೆ ಮಲಗಿದ ಶಿಶುವೇ ಶ್ರೀಲತಾಂಗಿಯರ ಚಿತ್ತದೊಲ್ಲಭನೇ ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ ||
ಹೊಳೆವಂಥ ರನ್ನದ ತೊಟ್ಟಿಲ ಮೇಲೆ ಥಳಥಳಿಸುವ ಗುಲಗಂಜಿಯ ಮಾಲೆ ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋಜೋ ||
ಯಾರ ಕಂದ ನೀನಾರ ನಿಧಾನೀ ಆರ ರತ್ನವೊ ನೀನಾರ ಮಾಣಿಕವೋ ಸೇರಿತು ಎನಗೊಂದು ಚಿಂತಾಮಣಿ ಎಂದು ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋಜೋ ||
ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ ಮನೆಯ ಕೆಲಸವಾರು ಮಾಡುವರಯ್ಯ ಮನಕೆ ಸುಖನಿದ್ರೆ ತಂದುಕೋ ಬೇಗ ಫಣಿಶಯನನೆ ನಿನ್ನ ಪಾಡಿ ತೂಗುವೆನು ಜೋಜೋ ||
ಅಂಡಜವಾಹನ ಅನಂತಮಹಿಮ ಪುಂಡರೀಕಾಕ್ಷ ಶ್ರೀ ಪರಮಪಾವನ ಹಿಂಡು ದೈವದ ಗಂಡ ಉದ್ದಂಡನೆ ಪಾಂಡುರಂಗ ಶ್ರೀ ಪುರಂದರ ವಿಠಲ ಜೋಜೋ ||
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ರಾಮ ನಾಮ ಪಾಯಸಕ್ಕೆ
ಸಾಹಿತ್ಯ : ಪುರಂದರ ದಾಸರು
ತಾಳ : ಏಕ
ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ವಿಠಲ ನಾಮ ತುಪ್ಪವ ಕಲಸಿ ಬಾಯ ಚಪ್ಪರಿಸಿರೋ||
ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದು||
ಹೃದಯವೆಂಬೊ ಮಡಕೆಯಲಿ ಭಾವವೆಂಬೊ ಎಸರನಿಟ್ಟು ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು||
ಆನಂದ ಆನಂದವೆಂಬೊ ತೇಗು ಬಂದಿತು ಕಾಣಿರೊ ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೊ||
click play button into the video bar
ಶ್ರೀ ಕೃಷ್ಣನ ಭಕ್ತಿಗೀತೆಗಳು
ಲಾಲಿಸಿದಳು ಮಗನ ಯಶೋದೆ
ಸಾಹಿತ್ಯ : ಪುರಂದರ ದಾಸರು
ಲಾಲಿಸಿದಳು ಮಗನ ಯಶೋದೆ ಲಾಲಿಸಿದಳು ಮಗನ
ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ೧
ಬಾಲಕನೆ ಕೆನೆ ಹಾಲು ಮೊಸರನೀವೇ ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು೨
ಮುಗುಳುನಗೆಯಿಂದ ಮುದ್ದು ತಾತಾರೆಂದು ಜಗದೊಡೆಯನೇ ಶ್ರೀಪುರಂದರ ವಿಠಲನ೩
click play button into the video bar
ಆತ್ಮೀಯ ಓದುಗರೆ, ವಿಶೇಷವಾಗಿ ಭಕ್ತಿ - ಸಾರ ಅನ್ನೋ ಪುಟವೊಂದನ್ನು ತಮಗಾಗಿ ಹೊರತಂದಿದ್ದೇವೆ...
ಉಪಯೋಗ ಹೇಗೆ...
೧) ಮುಖ್ಯ ಟ್ಯಾಬ್ ನಲ್ಲಿ "ಭಕ್ತಿ-ಸಾರ" ಆಯ್ದುಕೊಳ್ಳಿ..೨) ನಂತರ ಉಪ ಟ್ಯಾಬ್ "ಭಕ್ತಿಗೀತೆಗಳು" ಆಯ್ದುಕೊಳ್ಳಿ..
೩) ಅಲ್ಲಿ ನಿಮಗೆ ಯಾವ ದೇವರ ಭಕ್ತಿಗೀತೆಗಳು ಬೇಕು ಎಂಬ "ಡ್ರಾಪ್ ಡೌನ್ ಮೆನು" ತೆರೆದು ಕೊಳ್ಳುತ್ತದೆ.
೪) ಅಲ್ಲಿ ಯಾವುದು ಬೇಕು ಎಂಬುವುದನ್ನು ಆಯ್ದುಕೊಳ್ಳಿ...
೫) ನಂತರ ಅಲ್ಲಿ ಇನ್ನೊಂದು "ಡ್ರಾಪ್ ಡೌನ್ ಮೆನು" ತೆರೆದು ಕೊಳ್ಳುತ್ತದೆ.ಅಲ್ಲಿ ಕ್ಲಿಕ್ ಮಾಡಿದಾಗ ಯಾವ ಭಕ್ತಿಗೀತೆ ಬೇಕು ಎಂಬುವುದನ್ನು ಕೇಳುತ್ತದೆ.
೬) ಅಲ್ಲಿ ಯಾವುದು ಬೇಕು ಎಂಬುವುದನ್ನು ಆಯ್ದುಕೊಳ್ಳಿ...ಆನಂದಿಸಿ...
ರಾಗ ಗೊತ್ತಿಲ್ಲ, ಏನು ಮಾಡೋಣಾ ಅಂತಿದ್ದೀರಾ..!
ಚಿಂತಿಸ್ಬೇಡಿ ಅದಕ್ಕಾಗಿ ನಾವು ಆ ಭಕ್ತಿಗೀತೆಗಳ ಕೆಳಗೆ ಕೆಲವೊಂದು ವೀಡಿಯೋ/ಆಡಿಯೋ ಲಿಂಕ್ ಗಳನ್ನು ಕೊಟ್ಟಿದ್ದೇವೆ...ನೀವು ಅದನ್ನು ಅಲ್ಲೇ ಪ್ಲೇ ಮಾಡಿ ಆನಂದಿಸಬಹುದು..ಧನ್ಯವಾದಗಳು,,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ