ಪ್ರಣಾಮ್ ಅಗರಬತ್ತಿಗಳು ಗಮನಿಸಿ: ನಮ್ಮ ಈ Product ಗೆ ಕರ್ನಾಟಕದಾದ್ಯಂತ Distributer ಗಳು ಬೇಕಾಗಿದ್ದಾರೆ.. ಆಸಕ್ತರು ಕಂಪನಿ Customer care no 9686019158 ಗೆ ಸಂಪರ್ಕಿಸಿ...

ಕಥೆ

ಕಥೆಗಳು

ನೀತಿ ಕಥೆಗಳು

  1. ಬದಲಾವಣೆ
  2. ಏನ್ ಗುರು ರ್ಯೋಕನ್ ಕಡಲ ತೀರದಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗೊಮ್ಮೆ ಈಗೊಮ್ಮೆ ಅಲೆಗಳು ಕಡಲ ತೀರವನ್ನು ಮುತ್ತಿಕ್ಕಿ ಹಿಂದಕ್ಕೆ ಸರಿಯುತ್ತದೆ. ಆಗ ನೂರಾರು ನಕ್ಷತ್ರ ಮೀನುಗಳು ಅಲೆಗಳೊಂದಿಗೆ ತೇಲಿ ಬಂದು ದಡದಲ್ಲೇ ಉಳಿದುಕೊಳ್ಳುತ್ತವೆ. ಸೂರ್ಯನ ಪ್ರಖರ ಕಿರಣಕ್ಕೆ ವಿಲವಿಲನೆ ಒದ್ದಾಡುತ್ತಿರುತ್ತವೆ. ಅದನ್ನು ಕಂಡ ರ್ಯೋಕನ್ ಮೀನುಗಳನ್ನು ಎತ್ತಿ ಸಮುದ್ರಕ್ಕೆ ಎಸೆಯುತ್ತಾರೆ. ರ್ಯೋಕನ್ ಮೀನುಗಳನ್ನು ಮತ್ತೆ ಮತ್ತೆ ಸಮುದ್ರಕ್ಕೆ ಎಸೆಯುತ್ತಿದ್ದುದನ್ನು ಮೀನುಗಾರನೊಬ್ಬ ನೋಡುತ್ತಾನೆ. ಮೀನುಗಾರ ಅವನ ಬಳಿ ಬಂದು, "ಹೀಗೇಕೆ ಮಾಡುತ್ತಿದ್ದೀಯಾ? ಪ್ರತಿಸಲ ಅಲೆಗಳು ಬಂದಾಗ ಈ ರೀತಿ ಮೀನುಗಳು ದಡದಲ್ಲಿ ಬಂದು ಬೀಳುತ್ತವೆ. ಅವೆಲ್ಲವನ್ನೂ ನಿನ್ನಿಂದ ನೀರಿಗೆಸೆದು ಬದುಕುವಂತೆ ಮಾಡುವುದಕ್ಕೆ ಸಾಧ್ಯವಿದೆಯಾ? ಎಂದು ಪ್ರಶಿಸುತ್ತಾನೆ. ಈ ರೀತಿ ಪ್ರಯತ್ನ ಮಾಡುವುದರಿಂದ ಏನು ಬದಲಾವಣೆ ಆಗುವುದಿಲ್ಲ" ಎನ್ನುತ್ತಾನೆ ಮೀನುಗಾರ. "ಆಗುವುದು ಬಿಡುವುದು ದೇವರಿಚ್ಛೆ. ನಮ್ಮ ಪ್ರಯತ್ನವನ್ನು ಮುಂದುವರಿಸೋಣ. ಅದರಿಂದ ಬದಲಾವಣೆ ಆಗೇ ಆಗುತ್ತದೆ" ಎನ್ನುತ್ತಾ ರ್ಯೋಕನ್ ಮತ್ತೊಂದು ಮೀನನ್ನು ನೀರಿಗೆಸೆಯುತ್ತಾರೆ.

    ನೀತಿ :

    ಒಳ್ಳೆಯ ಕೆಲಸ ಮಾಡುವುದಕ್ಕೆ ಯಾವತ್ತೂ ಹಿಂಜರಿಯಬಾರದು.

  3. ಲವ್ ಸ್ಟೋರಿ....
  4. ಒಬ್ಬಳು ಕುರುಡಿ 1 ಹುಡುಗನ್ನ ತುಂಬಾ ಲವ್ ಮಾಡ್ತ ಇರ್ತಾಳೆ.ಅವನು ಅವಳನ್ನು ಪ್ರೀತಿಸುತ್ತಾ ಇರ್ತಾನೆ. ಒಂದು ದಿನ ಯಾರೋ ಆ ಹುಡುಗಿಗೆ ಕಣ್ಣು ಧಾನ ಮಾಡ್ತಾರೆ .ಅವಳಿಗೆ ತುಂಬಾ ಸಂತೋಷ ಆಗುತ್ತೆ. ಮೊದಲು ನನ್ನ loverನ ನೋಡಬೇಕು ಅಂತ ಆಸೆಯಾಗುತ್ತೆ . loverನ ನೋಡ್ತಾಳೆ ಆದರೆ loverನ ನೋಡಿ ಅವಳಿಗೆ ಶಾಕ್ ಆಗುತ್ತೇ ಯಾಕಂದರೆ ಅವನು ಕುರುಡ ಆಗಿರ್ತಾನೆ.ಆಗ ಅವಳು ಅವನನ್ನ" reject " ಮಾಡ್ತಾಳೆ . ಆಗ ಹುಡುಗ ಒಂದು ಲೆಟರ್ ಕೊಟ್ಪು ಅವಳನ್ನ ಬಿಟ್ಟು ಹೋಗ್ತಾನೆ. ಅ ಲೆಟರ್ ನಲ್ಲಿ ಒಂದೇ ಒಂದು ವಾಕ್ಯ ಬರೆದಿರುತ್ತಾನೆ" take care about my eyes".....

    ನೀತಿ :

  5. ಮೋಸಗಾರ ಮೊಸಳೆ
  6. ಬೇಸಿಗೆಯಲ್ಲಿ ಸೂರ್ಯನ ಝುಳ ಭೂಮಿಗೆ ತಲುಪಿ ಭೂಮಿ ಬಿಸಿಲಿನ ಬೇಗೆಯಿಂದ ಕಂಗಾಲಾಗಿತ್ತು. ಆಗ ಒಬ್ಬ ಬ್ರಾಹ್ಮಣನು ನಡು ಹಗಲಿನಲ್ಲಿ ಸ್ನಾನ ಮಾಡಲೆಂದು ನದಿ ತೀರಕ್ಕೆ ಬಂದು ಸ್ನಾನ ಮಾಡಲು ಅಣಿಯಾದನು. ಆಗ ಅಲ್ಲಿ ಅವನು ಒಂದು ದೃಶ್ಯ ಕಂಡನು. ದಡದ ಮೇಲೆ ಮರಳಿನ ರಾಶಿಯಲ್ಲಿ ಒಂದು ಮೊಸಳೆ ಬಿಸಿಲಿಗೆ ಕಂಗಾಲಾಗಿ ಬಿದ್ದಿತ್ತು. ಅದನ್ನು ನೋಡಿದ ಬ್ರಾಹ್ಮಣ ಮರುಗುತ್ತ ಸ್ನಾನಕ್ಕೆ ಹೋದನು. ಸ್ನಾನ ಮುಗಿಸಿ ಹೊರಬಂದ ಬ್ರಾಹ್ಮಣನು ಆ ಮೊಸಳೆಯನ್ನು ನೋಡಿ ಕನಿಕರಗೊಂಡು ಅದರ ಸನಿಹಕ್ಕೆ ಹೋದನು. ಅದು ಪ್ರಾಣ ಬಿಡುವಂತೆ ತಳಮಳಿಸುತ್ತಿತ್ತು. ಅದರ ಸ್ಥಿತಿಯನ್ನು ಕಂಡು ಬ್ರಾಹ್ಮಣನಿಗೆ ಅದರ ಮೇಲೆ ಕನಿಕರ ಬಂತು. ಆಗ ಆ ಬ್ರಾಹ್ಮಣನು ಮೊಸಳೆಯನ್ನು ಇನ್ನೂ ಸಮೀಪಿಸಿ - "ನನ್ನಿಂದ ನಿನಗೇನಾದರೂ ಸಹಾಯವಾದೀತೆ?" ಎಂದು ಕೇಳಿದನು. ಮೊಸಳೆ ಅವನ ಮುಖವನ್ನು ದೈನ್ಯದಿಂದ ನೋಡುತ್ತ - "ಮಹಾಶಯ! ನಾನು ಸಾಯುವ ಸ್ಥಿತಿಯಲ್ಲಿದ್ದೇನೆ ನನ್ನ ಕೊನೆಯ ಆಸೆ ನಾನು ನದಿ ನೀರಿನಲ್ಲೇ ಗತಿಸಬೇಕೆಂಬುದು. ದಯವಿಟ್ಟು ನನ್ನನ್ನು ಹೇಗಾದರೂ ಮಾಡಿ ನದಿಗೆ ಸೇರಿಸು" ಎಂದಿತು. ಅದರ ಮಾತು ನಿಜವೆಂದು ತಿಳಿದ ಬ್ರಾಹ್ಮಣನು ಅದನ್ನು ಹೆಗಲ ಮೇಲೆ ಹೊತ್ತು ನದಿಯ ಬಳಿಗೆ ತಂದನು. ಮೊಸಳೆಗೆ ನದಿಯ ನೀರು ತಾಕಿದ್ದೆ ತಡ ಅದು ಬ್ರಾಹ್ಮಣನನ್ನು ತನ್ನ ಬಾಲದಿಂದ ಹೊಡೆದು ಕೆಳಗೆ ಬೀಳಿಸಿತು. ಬಾಯಿಂದ ಕಚ್ಚಿಕೊಂಡು ತಿನ್ನಲು ನೀರಿನೊಳಕ್ಕೆ ಹೊರಟೇ ಹೋಯಿತು.

    ನೀತಿ :

    ದುಷ್ಟರು ಎ೦ದಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ. ಆದ್ದರಿಂದ ದುಷ್ಟರ ಮಾತಿಗೆ ಮರುಳಾಗಬಾರದು.

  7. ಅನೀತಿಯ ಫಲ
  8. ಒಂದು ಹಳ್ಳಿಯಲ್ಲಿ ಒಬ್ಬ ಅಜ್ಜಿಯಿದ್ದಳು. ಅವಳು ಮನೆ ಕೆಲಸ ಮಾಡಲು ಇಬ್ಬರು ಹೆಣ್ಣಾಳುಗಳನ್ನಿಟ್ಟುಕೊಂಡಿದ್ದಳು. ಬೆಳಗಿನ ಜಾವ ಅಜ್ಜಿ ಮನೆಯಲ್ಲಿ ಸಾಕಿಕೊಂಡಿದ್ದ ಹುಂಜ ಕೂಗುತ್ತಲೇ ಆ ಹೆಣ್ಣಾಳುಗಳನ್ನು ಎಬ್ಬಿಸಿ ಕೆಲಸಕ್ಕೆ ಹಚ್ಚುತ್ತಿದ್ದಳು. ನಸುಕಿನಲ್ಲಿಯೇ ಆಳುಗಳು ಕೆಲಸವನ್ನು ಶುರುಮಾಡಬೇಕಾಗಿತ್ತು. ಆದರೆ ಅವರಿಗೆ ಅಷ್ಟು ಬೆಳಗಿನಲ್ಲೇ ಕೆಲಸ ಮಾಡುವ ಮನಸ್ಸಿರಲಿಲ್ಲ, ಇನ್ನೂ ಸ್ವಲ್ಪ ಹೊತ್ತು ಮಲಗಿರಲು ಆಸೆ. ಒಂದು ದಿನ ಇಬ್ಬರೂ ಒಟ್ಟಾಗಿ ಸೇರಿ - "ಈ ಮುದುಕಿ ಬೆಳಗಿನ ಜಾವ ಹುಂಜ ಕೂಗುತ್ತಲೇ ಎಬ್ಬಿಸಿ ಬಿಡುತ್ತಾಳೆ. ನಾವು ಆ ಹುಂಜವನ್ನೇ ಇಲ್ಲದಂತೆ ಮಾಡಿಬಿಟ್ಟರೆ ನಸುಕಿನಲ್ಲಿ ಏಳುವ ತೊಂದರೆಯೇ ತಪ್ಪಿ ಹೋಗುವುದು. ಆಗ ನಾವು ಹಾಯಾಗಿ ಸೂರ್ಯ ಮೂಡುವವರೆಗೂ ಮಲಗಿರಬಹುದು" ಎಂದು ಯೋಚಿಸಿಕೊಂಡರು. ಆ ಯೋಚನೆಯೂ ಮನದಲ್ಲಿ ಮೂಡಿದೊಡನೆ ಆ ಆಳುಗಳು ಮಾರನೆಯ ದಿನವೇ ಆ ಹುಂಜವನ್ನು ಕೊಂದುಬಿಟ್ಟರು. ಆಗವರ ಮನಸ್ಸಿಗೆ ನೆಮ್ಮದಿಯಾಯಿತು. ಆದರೆ ಅಜ್ಜಿಗೆ ವಿಪರೀತ ದುಃಖವಾಯಿತು, ಹೆಣ್ಣಾಳುಗಳಿಗೆ ಮನಸ್ಸಿನಲ್ಲಿ ಸಂತೋಷವಾಗಿದ್ದರೂ ತೋರಿಕೆಗೆ ಒಡತಿಯ ದುಃಖದಿಂದ ನೋವಾದವರಂತೆ ನಟಿಸಿದರು. ಅಂದು ರಾತ್ರಿ ಹಾಯಾಗಿ ನಿದ್ರೆ ಹೋದರು. ಆದರೆ, ರಾತ್ರಿ ಆಳುಗಳಿಗೆ ಅಂದುಕೊಂಡಂತೆ ನಿಮ್ಮದಿ ಮಾತ್ರ ಸಿಗಲಿಲ್ಲ. ಅದರ ಬದಲು ಇನ್ನಷ್ಟು ತೊಂದರೆ ಹೆಚ್ಚಾಯಿತು. ಏಕೆಂದರೆ ಆ ಅಜ್ಜಿ ಅವರನ್ನು ಮಧ್ಯರಾತ್ರಿಯಲ್ಲಿಯೇ ಎಬ್ಬಿಸಿ ಕೆಲಸಕ್ಕೆ ತೊಡಗಿಸಿದಳು. ಈಗ ಹುಂಜವಿಲ್ಲ, ಆದ್ದರಿಂದ ಸಮಯಕ್ಕೆ ಸರಿಯಾಗಿ ಏಳಲಾಗದು. ಆ ಕಾರಣದಿಂದ ಮೊದಲೇ ಎದ್ದು ಬಿಟ್ಟರೆ ಒಳ್ಳೆಯದೆಂದು ಅಜ್ಜಿಯ ಯೋಚನೆ. ಮನೆಯ ಒಡತಿಯೇ ಎದ್ದ ಮೇಲೆ ಆಳುಗಳು ಮಲಗಿರಲಾಗುವುದೇ? ಅವರು ಎದ್ದು ದುಡಿಯಬೇಕಾಗಿ ಬಂತು. ಇದರಿಂದಾಗಿ ಅವರು ಮೂರು ಗಂಟೆಗಳ ನಿದ್ರೆಗೂ ಮುಳಿವು ಬಂತು.

    ನೀತಿ :

    ದುಷ್ಟ ಯೋಚನೆಗಳಿಂದ ದುಷ್ಫಲವೇ ಸಿಗುವುದು. ಆದ್ದರಿಂದ ದುಷ್ಟಯೋಚನೆ ಮಾಡಬಾರದು.

  9. ನಾಯಿಯ ದುರಾಸೆ
  10. ನಾಯಿಗೆ ತುಂಬ ಹಸಿವಾಗಿತ್ತು. ಮನೆಯೊಂದರಲ್ಲಿ ರೊಟ್ಟಿಯನ್ನು ಕದ್ದುಕೊಂಡು ಓಡುತ್ತ ಓಡುತ್ತ ಹಳ್ಳದ ಹತ್ತಿರ ಬಂತು. ಇನ್ನೇನು ರೊಟ್ಟಿಯನ್ನು ತಿನ್ನಬೇಕು ಎಂದುಕೊಳ್ಳುತ್ತಿರುವಾಗ ಕಾಗೆಯೊಂದು ಅದರ ಸಮೀಪದಿಂದ ಹಾದು ಚಿಕ್ಕ ಗಿಡದ ಮೇಲೆ ಕೂತಿತು. ಅದರ ಬಾಯಲ್ಲಿ ಮಾಂಸದ ಚೂರಿತ್ತು. ಇದನ್ನು ಕಂಡ ನಾಯಿಗೆ ಬಾಯಲ್ಲಿ ನೀರೂರಿತು. ಕಾಗೆಯನ್ನು ಹೆದರಿಸಿ ಮಾಂಸವನ್ನು ಹೇಗಾದರೂ ಲಪಟಾಯಿಸಬೇಕೆಂದು ರೊಟ್ಟಿಯನ್ನು ಅಲ್ಲೇ ಬಿಟ್ಟು ಕಾಗೆ ಕುಳಿತಿದ್ದ ಗಿಡವನ್ನು ಸಮೀಪಿಸಿತು. "ಬೌ ಬೌ ..' ಎಂದು ಬೊಗಳುತ್ತ ಕಾಗೆಯ ಸಮೀಪ ಬರುತ್ತಿದ್ದಂತೆ ಕಾಗೆ ಮಾಂಸ ಸಮೇತ ದೂರ ಹಾರಿ ಹೋಯಿತು. ನಾಯಿ ಪೆಚ್ಚು ಮೋರೆ ಹಾಕಿಕೊಂಡು ರೊಟ್ಟಿಯನ್ನಾದರೂ ತಿನ್ನುವ ಎಂದು ಹಳ್ಳದ ಕಡೆ ಹೋಯಿತು. ಆಗ ಜೋರಾಗಿ ಬಿರುಗಾಳಿ ಬೀಸಿತು. ರೊಟ್ಟಿ ಹಳ್ಳಕ್ಕೆ ಬಿದ್ದು ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ನಾಯಿ ತನ್ನ ದುರಾಶೆಗೆ ಪಶ್ಚಾತಾಪಪಟ್ಟು ಆಹಾರಕ್ಕಾಗಿ ಮತ್ತೆ ಅಲೆಯತೊಡಗಿತು.

    ನೀತಿ :

    ಅತಿಯಾಸೆ ಗತಿಗೇಡು.

  11. ಕರ್ಮ
  12. ಒಂದೂರಲ್ಲಿ ಒಬ್ಬ ಪ್ರಜಾಪಾಲಕನಾದ ರಾಜನಿದ್ದ. ಅವನಿಗೆ ಮೂರು ಜನ ಮಂತ್ರಿಗಳಿದ್ದರು. ಈ ಮೂರು ಜನ ಮಂತ್ರಿಗಳಲ್ಲಿ, ಒಳ್ಳೆಯವರೂ ಮತ್ತು ಕುತಂತ್ರಿಗಳು ಇದ್ದರು. ಆದರೆ ... ರಾಜನ ಎದುರಲ್ಲಿ ಸಭ್ಯನಂತೆ ವರ್ತಿಸಿ, ಒಳಗಳೊಗೆ ರಾಜನ ಆಜ್ಞೆಯನ್ನು ಅವಲಕ್ಷಿಸುತ್ತಿದ್ ದರು. ಪ್ರಾಮಾಣಿಕನಿಗೆ ಬೆಲೆ ಇಲ್ಲವಾಗುತ್ತದೆ. ಇಂತಿರಲು ... ರಾಜ ಅದೊಂದು ದಿನ ತನ್ನ ಮೂರು ಮಂತ್ರಿಗಳನ್ನು ಬಳಿಗೆ ಕರೆಯುತ್ತಾನೆ. ಮೂರು ಜನರಿಗೆ ಒಂದೊಂದು ಗೋಣಿಯನ್ನು ಕೊಟ್ಟು, ಕಾಡಿಗೆ ಹೋಗಿ ನಾಳೆ ಸಂಜೆಯೊಳಗೆ ಕಾಡಿನಲ್ಲಿ ಸಿಗುವ ಅತ್ಯುತ್ತಮವಾದ ಹಣ್ಣುಗಳನ್ನು ಆಯ್ದು ತುಂಬಿಕೊಂಡು ಬರುವಂತೆ ಆಜ್ಞೆ ಮಾಡುತ್ತಾನೆ ... ಮೂರು ಮಂತ್ರಿಗಳಲ್ಲಿ ಒಬ್ಬ ರಾಜನ ಆಜ್ಞೆಯನ್ನು ನಿಯತ್ತಿನಿಂದ ಕಾಡು ಸುತ್ತಿ ಒಳ್ಳೆಯ ಮತ್ತು ತಿನ್ನಲು ಯೋಗ್ಯವಾದ ಹಣ್ಣುಗಳನ್ನು ಆಯ್ದು ತುಂಬಿಸಿಕೊಳ್ಳುತ್ತಾನೆ. ಎರಡನೆಯವನು ' ಅಯ್ಯೋ ರಾಜರು ಒಳಗೆಲ್ಲಿ ನೋಡುತ್ತಾರೆ?' ಮೇಲೆ ಸ್ವಲ್ಪ ಒಳ್ಳೆಯ ಹಣ್ಣುಗಳನ್ನು ತುಂಬಿಸಿ ಕೆಳಗೆ ಕೊಳೆತ ಹಣ್ಣುಗಳನ್ನು ತುಂಬಿಸಿಕೊಳ್ಳುತ್ತಾನೆ. ಇನ್ನು ಮೂರನೆಯವನು ' ಅಯ್ಯೋ ರಾಜ ನೋಡುವುದೇ ಇಲ್ಲ. ಯಾರು ಕಾಡು ಸುತ್ತಿ ಹಣ್ಣು ಆರಿಸಿ ತರೋದು ? ' ಎಂದು ತರಗೆಲೆ ಮತ್ತು ಕಸಕಡ್ಡಿ ತುಂಬಿಸಿಕೊಂಡು ಹೋಗುತ್ತಾನೆ. ಮಾರನೇ ದಿನ... ಮಂತ್ರಿಗಳು ಗೋಣಿಯ ಮೂಟೆಯನ್ನು ಅರಸನ ಮುಂದಿಡುತ್ತಾರೆ. ಅರಸ ಅದನ್ನು ಪರೀಕ್ಷಿಸುವುದಿಲ್ಲ. ಬದಲಾಗಿ ಭಟರನ್ನು ಕರೆದು ಹೇಳುತ್ತಾನೆ " ಈ ಮೂರು ಜನರನ್ನು ಜೈಲಿಗಟ್ಟಿ, ಅವರವರು ತಂದ ಹಣ್ಣಿನ ಮೂಟೆ ಅವರವರ ಬಳಿ ಇರಲಿ. ಮೂರು ತಿಂಗಳು ತಿನ್ನಲು ಏನನ್ನೂ ಕೊಡಬೇಡಿ." ಆಜ್ಞೆಯನ್ನು ಈಯ್ಯುತ್ತಾನೆ ಮೂರು ತಿಂಗಳ ನಂತರ ಬಾಗಿಲು ತೆರೆದಾಗ, ಪ್ರಾಮಾಣಿಕವಾಗಿ ಉತ್ತಮವಾದ ಹಣ್ಣುಗಳನ್ನು ತಂದವ ಆರೋಗ್ಯವಂತನಾಗಿ ಹೊರ ಬರುತ್ತಾನೆ. ಕೊಳೆತ ಹಣ್ಣುಗಳನ್ನು ಪೇರಿಸಿಟ್ಟ ಮಂತ್ರಿ ರೋಗಗ್ರಸ್ತನಾಗಿದ್ದ. ಇನ್ನು ತಿನ್ನಲು ಯೋಗ್ಯವಲ್ಲದ ವಸ್ತುಗಳನ್ನು ತಂದ ಮಂತ್ರಿ ಕೊನೆಯುಸಿರೆಳೆದಿದ್ದ.!! ಇದೆ #ಕರ್ಮ,

    ನೀತಿ :

    ಉತ್ತಮವಾದ ಕೆಲಸಕ್ಕೆ ಉತ್ತಮವಾದ ಪರಿಣಾಮ, ಕೆಟ್ಟ ಕೆಲಸದಿಂದ ಕೆಟ್ಟ ಪರಿಣಾಮ!!

  13. ಮನ ಕರಗುವ ಕಥೆ
  14. .. ಇಬ್ಬರು ಬಾಲ್ಯಸ್ನೇಹಿತರು.. ಒಟ್ಟಿಗೆ ಓದಿದವರು , ಒಟ್ಟಿಗೆ ಬೆಳೆದವರು.. ಒಬ್ಬ ಧನಿಕ , ಇನ್ನೊಬ್ಬ ಬಡವ..ಬಹಳ ಕಾಲದ ನಂತರ ಭೇಟಿಯಾಗುತ್ತಾರೆ.. ಕಷ್ಟ - ಸುಖ ಮಾತನಾಡುತ್ತ ದಾರಿಯಲ್ಲಿ ಸಾಗುತ್ತಿರುತ್ತಾರೆ.. ಧನಿಕ ಗೆಳೆಯ - "ಜೀವನದಲ್ಲಿ ನೀನೇನೂ ಬದಲಾಗಲೇ ಇಲ್ಲವಲ್ಲ ಗೆಳೆಯ.. ಅದೇ ತೆಳ್ಳಗಿನ ದೇಹ , ಅದೇ ನಗು , ಅದೇ ಬಡತನ.. ನನ್ನನ್ನು ನೋಡು.. ಎಷ್ಟು ಬದಲಾಗಿದ್ದೇನೆ.. ಜೀವನದಲ್ಲಿ ಎಲ್ಲವನ್ನೂ ಗಳಿಸಿದ್ದೇನೆ.. ಮನೆ , ಕಾರು , ಸಂಪತ್ತು ಎಲ್ಲ ನನ್ನ ಬಳಿ ಇವೆ.. ನಿನ್ನ ಜೀವನವೇಕೆ ಹೀಗಾಯ್ತು...? ಬಡವ ಗೆಳೆಯ ಹಠಾತ್ತಾಗಿ ನಿಂತ.. ಧನಿಕ ಗೆಳೆಯ - "ಏನಾಯ್ತು?" ಬಡವ ಗೆಳೆಯ - "ಏನೋ ಶಬ್ದ ಕೇಳಿಸಿತಲ್ಲ..?" ಧನಿಕ ಗೆಳೆಯ - " ಓ ಅದಾ...? ನನ್ನ ಜೇಬಿನಿಂದ ನಾಣ್ಯ ಬಿದ್ದಿರಬಹುದು ಎಂದೂ ಹುಡುಕಿದ ಐದು ರೂಪಾಯಿಯ ನಾಣ್ಯ ಕೆಳಗೆ ಬಿದ್ದಿತ್ತು. ಜೇಬಿಗೆ ಸೇರಿಸಿದ.. ಬಡವ ಗೆಳೆಯ ಅಲ್ಲಿಂದ ದೂರ ಹೋದ..ಏನನ್ನೋ ಹುಡುಕಿದ.. ದೊಡ್ಡ ಜೇಡದ ಬಲೆಯಲ್ಲೊಂದು" ಅಲ್ಲಿ ಹಕ್ಕಿಮರಿ ಸಿಕ್ಕಿ ಒದ್ದಾಡುತ್ತಿತ್ತು.. ಆತ ನಿಧಾನವಾಗಿ ಬಲೆಯಿಂದ ಹಕ್ಕಿಮರಿ ಬಿಡಿಸಿ , ಆಕಾಶಕ್ಕೆ ಹಾರಿಸಿದ.. ಧನಿಕಗೆಳೆಯ ಆಶ್ಚರ್ಯದಿಂದ "ಹಕ್ಕಿಯ ಧ್ವನಿ ನಿನಗೆ ಹೇಗೆ ಕೇಳಿಸಿತು..?" ಬಡವ ಗೆಳೆಯ ಮುಗುಳ್ನಗುತ್ತಾ - " ಗೆಳೆಯ...ಇದೇ ನಮ್ಮಿಬ್ಬರ ನಡುವೆ ಇರುವ ಅಂತರ.. ನಿನಗೆ ಹಣದ ಧ್ವನಿ ಕೇಳಿಸಿತು.. ನನಗೆ ಮನದ ಧ್ವನಿ ಕೇಳಿಸಿತು.. ನಿನ್ನ ಮನ ಹಣದಾಸೆಯ ಬಲೆಯಲ್ಲಿ ಸಿಲುಕಿಕೊಂಡಿದೆ , ನನ್ನ ಮನ ಸ್ವತಂತ್ರ್ಯವಾಗಿ ಸಂತೋಷದಿಂದ ವಿಹರಿಸುತ್ತಿದೆ.. ನೀನು ಹಣದಾಸೆಯಲ್ಲಿ ಮಾನವೀಯತೆಯನ್ನೇ ಮರೆತಿದ್ದೀಯಾ.. ನಾನು ಮನದಲ್ಲಿ ಈಗಲೂ ಮಾನವೀಯತೆಯನ್ನು ಹೊಂದಿದ್ದೇನೆ.. ಮನದಲ್ಲಿ ಹಾಗೂ ಮಾನವೀಯತೆಯಲ್ಲಿರುವ ಸಂತೋಷವನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವೇ..? ಈಗ ಹೇಳು ಗೆಳೆಯ.. ಯಾರು ಶ್ರೀಮಂತರು?" ಧನಿಕಗೆಳೆಯ ಏನನ್ನೂ ಉತ್ತರಿಸಲಾಗದೇ ಸುಮ್ಮನಾದ... ಹಣಗಳಿಕೆಯನ್ನೇ ಜೀವನದ ಪರಮಗುರಿಯನ್ನಾಗಿಸಿಕೊಂಡು , ಮಾನವೀಯತೆಯನ್ನು ಮರೆತಿರುವ ಮನುಕುಲಕ್ಕೆ ಈ ಕಥೆ ಮುಡಿಪು...

    ನೀತಿ :

  15. ಹಾವಿನ ಸಿಟ್ಟು
  16. ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ. ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗುತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗುತ್ತಿರುವಾಗ, ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೆ ಕೂಡ ಗಾಯವಾಗುತ್ತದೆ. ಇದರಿಂದ ಹಾವಿನ ಸಿಟ್ಟು ಮತ್ತಷ್ಟು ಹೆಚ್ಚಾಗುತ್ತದೆ. ಕೂಡಲೇ ಅದು ಆ ಗರಗಸಕ್ಕೆ ಗಟ್ಟಿಯಾಗಿ ಸುತ್ತಿಕೊಂಡು ತನ್ನ ಹಿಡಿತವನ್ನು ಬಲಪಡಿಸುತ್ತದೆ. ಮರುದಿನ ಬೆಳಿಗ್ಗೆ ಮರದ ಕೆಲಸದವನು ತನ್ನ ಅಂಗಡಿಯನ್ನು ತೆರೆದಾಗ ಅವನಿಗೆ ಗರಗಸದಲ್ಲಿ ಸುತ್ತಿಕೊಂಡು ಸತ್ತಿದ್ದ ಹಾವು ಕಾಣುತ್ತದೆ. ಆದರೆ ಹಾವು ಬೇರೆಯವರ ಆಕ್ರಮಣದಿಂದ ಸಾಯಲಿಲ್ಲ, ಬದಲಿಗೆ ತನ್ನದೇ ಆದ ಸಿಟ್ಟು ಮತ್ತು ಹಠದಿಂದ ಸತ್ತಿತ್ತು. ನಮಗೆ ಕೂಡ ಸಿಟ್ಟು ಬಂದಾಗ ನಾವು ಸಹಿತ ಆ ಹಾವಿನ ಹಾಗೆ, ಸಿಟ್ಟು ಮತ್ತು ಹಗೆಯಿಂದ ಎದುರಾಳಿಗೆ ನಷ್ಟ ಮಾಡಲು ಪ್ರಯತ್ನ ಪಡುತ್ತೇವೆ. ಆದರೆ ಸ್ವಲ್ಪ ಸಮಯದ ನಂತರ ಅದರಿಂದಾಗಿ ನಮಗೆ ಹೆಚ್ಚು ಹಾನಿಯಾದದ್ದು ಗಮನಕ್ಕೆ ಬರುತ್ತದೆ. ನಾವು ಸಂತೋಷದಿಂದ ಜೀವಿಸಲು ಕೆಲವೊಂದು ವಸ್ತು, ಜನರು, ಘಟನೆ ಹಾಗು ವಿಷಯಗಳನ್ನು ಕಡೆಗಣಿಸಬೇಕಾಗುತ್ತದೆ. ನಾವು ಪ್ರತಿಕ್ರಿಯೆ ತೋರಿಸುವ ಅಗತ್ಯತೆ ಇದ್ದಲ್ಲಿ ಮಾತ್ರ ಪ್ರತಿಕ್ರಿಯೆ ತೋರಿಸಬೇಕೆ ವಿನಹ ಎಲ್ಲದಕ್ಕೂ ಪ್ರತಿಕ್ರಿಯೆ ತೋರಿಸಲು ಹೋದಲ್ಲಿ ಅನವಶ್ಯಕವಾಗಿ ನಾವು ಹಾನಿಗೊಳಬೇಕಾಗುವ ಪ್ರಸಂಗವೂ ಬರಬಹುದು.

    ನೀತಿ :

  17. ನೀತಿ ಕಥೆ
  18. ಒಂದು ದಿನ ಒಬ್ಬ ಶ್ರೀಮಂತ ಮಾಧ್ಯಮದವರನ್ನ ಅವನ ಮನೆಗೆ ಬರಲು ಹೇಳಿದ. ಮಾಧ್ಯಮದವರು ಬಂದು ಸೇರಿದರು ಆಗ ಆ ಶ್ರೀಮಂತ ತನ್ನ ಹತ್ತಿರ ಇದ್ದ ಬಿಲಿಯನ್ ಡಾಲರ್ ಕಾರನ್ನು ನಾಳೆ ಗುಂಡಿಯಲ್ಲಿ ಹೂಳುವುದಾಗಿ ತಿಳಿಸುತ್ತಾನೆ. ಮಾಧ್ಯಮದವರು ಯಾಕೆ ಎಂದು ಕೇಳಿದಾಗ ನನ್ನ ನಂತರ ಇದನ್ನು ಉಪಯೋಗಿಸಲು ಯಾರು ಇಲ್ಲ ಅದಕ್ಕಾಗಿ ಎನ್ನುತ್ತಾರೆ. ಸರಿ ಈಗ ಹೊರಡಿ ನಾಳೆ ಬನ್ನಿ ಎಂದು ಹೇಳಿ ಎಲ್ಲರನ್ನೂ ಕಳುಹಿಸಿದ. ನಾಳೆ ಆಯಿತು ಮಾಧ್ಯಮದವರೆಲ್ಲ ಬಂದರು ಶ್ರೀಮಂತನ ಮನೆ ಮುಂದೆ ಒಂದು ಗುಂಡಿಯನ್ನು ತೆಗೆಸಲಾಗಿತ್ತು ಅದರ ಮುಂದೆ ಆ ಶ್ರೀಮಂತನ ಬಿಲಿಯನ್ ಡಾಲರ್ ಬೆಲೆ ಬಾಳುವ ಕಾರು ಕೂಡಾ ನೀಲ್ಲಿಸಲಾಗಿತ್ತು. ಆಗ ಮಾಧ್ಯಮಗಳ ಜೊತೆಗೆ ಬಂದಿದ್ದ ಜನರೆಲ್ಲಾ ಮಾತಾಡಲು ಶುರುಮಾಡಿದರು.. ಇವನಿಗೆ ಹುಚ್ಚು ಹಿಡಿದುಕೊಂಡಿದೆ ಅನಿಸುತ್ತೆ ಅಷ್ಟು ಬೆಲೆ ಬಾಳುವ ಕಾರು ತನಗೆ ಉಪಯೋಗ ಇಲ್ಲ ಅಂದರೆ ಮಾರಾಟ ಮಾಡಲಿ ಇಲ್ಲ ಅಂದರೆ ಯಾರಿಗಾದರೂ ದಾನ ಮಾಡಲಿ ಅಂತ ಮಾತನಾಡತೊಡಗಿದರು... ಆಗ ಇದನ್ನೆಲ್ಲ ಕೇಳಿದ ಶ್ರೀಮಂತ ಹೇಳುತ್ತಾನೆ ನಾನು ಈ ಕಾರನ್ನು ಮಣ್ಣಿನಲ್ಲಿ ಮುಚ್ಚಿಹಾಕಿದರೆ ಹುಚ್ಚುತನ ಅದೆ ದಾನ ಮಾಡಿದರೆ ಮಾನವೀಯತೆ ಅಲ್ಲವೇ ಎಂದ ಹಾಗ ಜನರೆಲ್ಲ ಹೌದು ಹೌದು ಎಂದರು... ಆಗ ಆ ಶ್ರೀಮಂತ ಹೇಳ್ತಾನೆ" ಹಾಗಾದರೆ ನಾನು ಮಾತ್ರ ಅಲ್ಲ ಇಲ್ಲಿ ಎಲ್ಲರೂ ಹುಚ್ಚರೆ ಯಾಕೆ ಗೊತ್ತಾ ಒಬ್ಬ ವ್ಯಕ್ತಿ ಮರಣದ ನಂತರ ಆ ವ್ಯಕ್ತಿಯ ಶವ ಹುಳುವ ಬದಲು ದೇಹ ದಾನ ಮಾಡಿದರೆ ಆ ವ್ಯಕ್ತಿಯ ಎಷ್ಟೋ ಅಂಗಗಳು ಉಪಯೋಗಕ್ಕೆ ಬರುತ್ತವೆ ಅದರಿಂದ ಎಷ್ಟೋ ಜೀವಗಳು ಬದುಕುತ್ತವೆ" ನಾನು ಇವತ್ತು ಈ ಕಾರು ಹೂಳಲು ನಿಮ್ಮನ್ನು ಇಲ್ಲಿ ಕರೆದಿಲ್ಲ.... ನಾನು ನಿಮ್ಮನ್ನು ಕರೆದು ಹೇಳಬಯಸಿದ ವಿಷಯ ನಿಮಗೆ ಅರ್ಥ ಆಗಿದೆ ಅಂದುಕೋಳ್ಳತ್ತೇನೆ ಅಂದ....!!

    ನೀತಿ :

  19. ಹರಕೆ
  20. ರಾಜಪುರವೆಂಬ ಊರು. ಒಮ್ಮೆ ಒಬ್ಬ ಸನ್ಯಾಸಿ ಆ ಊರಿಗೆ ಬಂದ. ಊರ ಜನರು ಭಯ ಭಕ್ತಿಯಿಂದ ಅವನನ್ನು ಬರಮಾಡಿಕೊಂಡು ಉಪಚರಿಸಿದರು. ಆದರಾತಿಥ್ಯ ನೀಡಿ ತಮ್ಮನ್ನು ಹರಸಲು ಬೇಡಿಕೊಂಡರು. ಸಂತೃಪ್ತಿನಾದ ಸನ್ಯಾಸಿ ಕೈ ಎತ್ತಿ, "ಮುದುಕರೇ ನೀವು ಮೊದಲು ಸತ್ತು ಹೋಗಿರಿ. ನಿಮ್ಮ ಸ್ಥಾನಕ್ಕೆ ಬಂದ ಯುವಕರು ನಂತರ ಸಾಯಲಿ. ನಿಮ್ಮ ಮಕ್ಕಳೂ ಮೊಮ್ಮಕ್ಕಳನ್ನು ಕಂಡು ಸಾಯುವಂತಾಗಲಿ" ಎಂದು ಹರಸಿ ಹೊರಟುಹೋದ. ನೆರೆದ ಜನರೆಲ್ಲ ಒಂದು ಕ್ಷಣ ಸ್ತಂಬೀಭೂತರಾದರೂ. ಇದೆಂತಹ ಆಶೀರ್ವಾದ? ಚೇತರಿಸಿಕೊಂಡ ಅನೇಕರು ಸನ್ಯಾಸಿಯ ವಿರುದ್ಧ ಧಿಕ್ಕಾರ ಕೂಗಿದರು. ಕೆಲವರು ಕತ್ತಿ ಹಿರಿದು ಅವನನ್ನು ಇರಿಯ ಹೊರಟರು. "ಏನೋ ಸೇವೆ ಸತ್ಕಾರಗಳಿಂದ ಸಂಪ್ರೀತನಾಗಿ ಊರ ಒಳಿತಿಗಾಗಿ ಹರಸುವನೆಂದು ತಿಳಿದರೆ ಅವನೋ ಎಲ್ಲರೂ ಸಾಯಲಿ ಎಂದು ಶಪಿಸುವುದೇ!" ಎಂದು ಗಲಾಟೆ ಜೋರಾಯ್ತು. ಆಗ ಆ ಊರಲ್ಲಿ ಅತೀ ವೃದ್ಧ ಹಾಗೂ ಹೆಚ್ಚು ತಿಳಿದವನೊಬ್ಬ ಎದ್ದು ನಿಂತು ಕೂಗಿದ. "ನಿಲ್ಲಿರಿ. ಕತ್ತಿ ಹಿಡಿದು ಹೊರಟವರೂ ಹೋಗದಿರಿ. ಘೋಷಣೆ ಕೂಗುತ್ತಿರುವವರೂ ಕೂಗದಿರಿ. ಗಲಾಟೆ ಗೌಜು ಮಾಡುತ್ತಿರುವವರೂ ಮಾಡದಿರಿ. ಆ ಸನ್ಯಾಸಿ ತಪ್ಪಾಗಿ ಹರಸಿಲ್ಲ. ಒಳಿತನ್ನೇ ಬಯಸಿ ಹರಸಿದ್ದಾನೆ". "ಸಾಯಲಿ ಎಂದು ಕೈ ಎತ್ತಿ ಶಪಿಸುವುದೋ ಹರಸುವುದೆಂದು ಅರ್ಥವೇನು? ಈ ಮುದುಕನಿಗೂ ಮುದಿತನದ ಹುಚ್ಚು ಹಿಡಿದಿರಬೇಕು. ನಡೆಯೀರೆಲ್ಲ. ಪ್ರತೀಕಾರ ತೀರಿಸಿಕೊಳ್ಳುವ" ಎಂದು ಕೆಲವು ಮಂದಿ ಸಿಟ್ಟಿನಿಂದ ಹರಿಹಾಯ್ದರು. ಅದಕಕೆ ವೃದ್ಧ. "ಶಾಂತಿ.. ಶಾಂತಿ.. ದಯವಿಟ್ಟು ಮೊದಲು ನನ್ನ ಮಾತು ಪೂರ್ತಿ ಕೇಳಿಸಿಕೊಳ್ಳಿ. ಮುದುಕರು ಮೊದಲು ಸಾಯಿರಿ ಅಂದರೆ ಹೇಗೋ ಅವರು ತಮ್ಮ ಪೂರ್ಣ ಜೀವಿತಾವಧಿ ಕಳೆದವರಾಗಿದ್ದಾರೆ. ಇನ್ನೂ ಅವರೆದುರೇ ಅವರ ಮಕ್ಕಳು ಮತ್ತು ಮೊಮ್ಮೋಕ್ಕಳು ಸತ್ತರೆ ಅವರಿಗೆ ಪುತ್ರ ಶೋಕಾಡಿಗಳು ಕಾಡುವುದಿಲ್ಲವೇ. ಹೀಗಾಗಿ ಇಹಲೋಕದ ಯಾತ್ರೆ ಮುಗಿಯುವಂತಾಗಲಿ ಎಂಬುದು ಅದರ ಅರ್ಥ. ಮುದುಕರ ಸ್ಥಾನಕ್ಕೆ ಬಂದ ಯುವಕರು ನಂತರ ಸಾಯಲಿ ಎಂದರೆ ಅವರು ತಮ್ಮ ಹಿರಿಯರ ಹಾಗೆ ಪೂರ್ಣಾಯಷ್ಠ ಬಾಳಿ ಬದುಕಿ ತದನಂತರವಷ್ಟೆ ಅಸುನೀಗಲಿ ಎಂದು. ನಾನಾತರ ಮಕ್ಕಳು ಅವರ ಮೊಮ್ಮಕ್ಕಳನ್ನು ಕಂಡು ಸಾಯಲಿ ಅಂದರೆ ಅವರು ತಮ್ಮ ತಂದೆ, ತಾತರಂತೆ ಮುದುಕರಾದ ಮೇಲೆ ಅಸುನೀಗಿದರೆ ಸಾಕು ಎಂದರ್ಥ. ಯಾರು ರೋಗರುಜಿನಾಡಿಗಳು ಬಂದು, ಅನ್ಯರ ಆಕ್ರಮಣ, ದಾಳಿ ತಿಂದು ಅರ್ಧಾಯುಷ್ಯದಲ್ಲೇ ಮೃತ್ಯು ಹೊಂದಾದಂತಾಗಲಿ ಎಂದು ಅಶ್ರ್ವಾದ ಮಾಡಿ ಹೋಗಿದ್ದಾನೆ" ಎಂದು ವಿವರಿಸಿದ. ಅರ್ಥ ತಿಳಿಯುತ್ತಿದ್ದಂತೆ ಎಲ್ಲರೂ ಸನ್ಯಾಸಿಯ ಗುಣಗಾನ ಮಾಡಿ ಜಯಕಾರದ ಘೋಷಣೆ ಕೂಗಿದರು. ಒಂದು ಊರಲ್ಲಿ ಒಬ್ಬ ರಾಜ ದಿನ ಬೆಳಿಗ್ಗೆ ಎದ್ದು ಸೂರ್ಯನನ್ನು ನೋಡುವುದು ರೂಡಿ ಹಾಗೆ ನೋಡಿದಾ ಅಂದಿನ ದಿನವೆಲ್ಲ ತನ್ನ ಜೀವನದಲ್ಲಿ ಒಳ್ಳೆಯದೆ ನಡೆಯುವುದು ಎಂಬುದು ಆ ರಾಜನ ನಂಬಿಕೆ ಅಂದುಕೊಂಡ ಹಾಗೆ ಎಲ್ಲವು ಒಳ್ಳೆಯದೆ ನಡೆಯುತಿತ್ತು ಹೀಗಿರುವಾಗ ಒಂದು ದಿನ ರಾಜ ಸೂರ್ಯ ನಮಸ್ಕಾರ ಮಾಡಲು ಹೊರಗೆ ಬಂದಾಗ ಒಬ್ಬ ಬಿಕ್ಷುಕ ಅಡ್ಡ ಬರುತ್ತಾನೆ ಆ ರಾಜ ಅಂದಿನ ದಿನ ಬಿಕ್ಷುಕ ನನ್ನು ನೋಡುತ್ತಾನೆ ಹೀಗೆ ನೋಡಿ ಆ ರಾಜ ಹಿಂತಿರುಗುವಾಗ ಕಾಲು ಜಾರಿ ಕೆಳಗೆ ಬೀಳುತ್ತಾನೆ ತಲೆಗೆ ಪೆಟ್ಟಾಗಿ ರಕ್ತ ಸುರಿಯುತ್ತದೆ ಹೀಗೆಲ್ಲ ಆಗುವುದೆಂದು ಆ ರಾಜ ಎಂದಿಗೂ ಉಹಿಸಿರಲಿಲ್ಲ ಈ ಅನಾಹುತಕ್ಕೆಲ್ಲ ಆ ಬಿಕ್ಷುಕನೇ ಕಾರಣ ಎಂದು ಆ ಬಿಕ್ಷುಕನನ್ನು ತಂದು ಗಲ್ಲಿಗೇರಿಸಲು ಆಗ್ನೆ ನೀಡುತ್ತಾನೆ ರಾಜನ ಆಗ್ನೆಯಂತೆಯೆ ಆ ಬಿಕ್ಷುಕನನ್ನು ಕರೆತಂದು ಗಲ್ಲಿಗೇರಿಸಲು ಸಿದ್ದತೆ ಮಾಡುತ್ತಾರೆ ಗಲ್ಲಿಗೇರಿಸೊ ಕೊನೆಯ ಸಮಯದಲ್ಲಿ ಆ ಬಿಕ್ಷುಕ ರಾಜನನ್ನು ನೋಡಿ ನಗುತ್ತಾನೆ ಇದು ಆ ರಾಜನಿಗೆ ಆಶ್ಚರ್ಯವನ್ನು ಮೂಡಿಸಿತು ಆ ರಾಜ ಬಿಕ್ಷುಕನನ್ನು ಕೇಳಿದ ಇಂದು ನಿನ್ನನ್ನು ಗಲ್ಲಿಗೇರಿಸುತಿದ್ದೇನೆ ನಿನಗೆ ಸ್ವಲ್ಪವಾದರೂ ದುಃಖ್ಖ ಆಗಲಿ ಬೇಜಾರು ಆಗಲಿ ಇದು ಯಾವುದು ನಿನ್ನ ಮುಖದಲ್ಲಿ ಕಾಣಿಸುತ್ತಿಲ್ಲವಲ್ಲ ಯಾಕೆ ಎಂದು ಪ್ರಶ್ನಿಸಿದನು ಅದಕ್ಕೆ ಆ ಬಿಕ್ಷುಕ ಹೇಳಿದ ಇಂದು ನೀವು ನನ್ನ ಮುಖ ನೋಡಿದ್ದರಿಂದ ನಿಮ್ಮ ತಲೆಗೆ ಮಾತ್ರ ಪೆಟ್ಟಾಯಿತು ಆದರೆ ನಾನು ನಿಮ್ಮ ಮುಖ ನೋಡಿದ್ದರಿಂದ ಇಂದು ನಾನು ಗಲ್ಲಿಗೇರುತಿದ್ದೇನೆ ಎಂದು ಹೇಳಿದನು ಅಂದು ಆ ಬಿಕ್ಷುಕನ ಮಾತು ಮೂಡನಂಬಿಕೆ ಇಂದ ಮುಚ್ಚಿದ ರಾಜನ ಕಣ್ಣು ತೆರೆಸಿತು.

    ನೀತಿ :

    ನೀವೆ ಹೇಳಿ.....

  21. ದುರಾಸೆಯ ಫಲ
  22. ಅಲ್ಲೊಬ್ಬ ವ್ಯಕ್ತಿ ಜೀವನ ಪೂರ್ತಿ ಕೆಲಸ ಮಾಡಿ ಸಾಕಷ್ಟು ಹಣ ಮಾಡಿದ್ದ. ಅವನು ಹಣದ 💸ವಿಷಯದಲ್ಲಿ ತುಂಬಾನೇ ಕಂಜೂಸ್ ಸಹ ಆಗಿದ್ದ. ಹಣದ ವಿಷಯ ಬಂದಾಗ ಅವನಿಗೆ ಬೇರೇನೂ ಕಾಣುತ್ತಿರಲಿಲ್ಲ👀. ಅವನು ಸಾಯೋ ಮೊದಲು ತನ್ನ ಹೆಂಡತಿ 👱ಮುಂದೆ ತನ್ನಾಸೆ ಹೇಳಿದ, ನಾನ್ಯಾವಾಗ ಸಾಯುತ್ತೇನೋ ಅವಾಗ ನನ್ನ ಎಲ್ಲಾ ಹಣವನ್ನು ನನ್ನ ಹೆಣವಿರೋ ಪೆಟ್ಟಿಗೆಯ ಒಳಗೆ ಹಾಕು ನಾನು ಸಾಯುವಾಗ ಹಣ ತೆಗೆದುಕೊಂಡು ಹೋಗಬೇಕು. ಅದಕ್ಕೆ ಹೆಂಡತಿಯು ಅವನಿಗೆ ಆಣೆಕೊಟ್ಟಳು ಹಾಗೆ ಮಾಡುತ್ತೇನೆ ಅಂತ. ಕೆಲವು ಸಮಯದಲ್ಲೇ ಅವನು ಸತ್ತು ಹೋದನು. ಅವನನ್ನು ಪೆಟ್ಟಿಗೆಯಲ್ಲಿ ಹಾಕಿದರು. ಹೆಂಡತಿಯು ಅಳುತ್ತ 😢ಕುಳಿತಿದ್ದಳು. ಅವಳ ಕುಟುಂಬದವರು ಸ್ನೇಹಿತೆಯರು👭 ಅವಳಜೊತೆ ಕುಳಿತಿದ್ದರು. ಎಲ್ಲಾ ಕಾರ್ಯ ಮುಗಿದಬಳಿಕ ಪೆಟ್ಟಿಗೆಯನ್ನು ಎತ್ತಲು ಶುರುಮಾಡಿದರು ಅವಾಗ ಅವನ ಹೆಂಡತಿಯು ನಿಲ್ಲಿ ಅಂತ ಹೇಳಿ ಒಳಗೆ ಹೋಗಿ ಒಂದು ಕಬ್ಬಿಣದ ಡಬ್ಬಿ ತಂದು ಗಂಡನ ಪೆಟ್ಟಿಗೆಯಲ್ಲಿ ಇಟ್ಟಳು . ಎಲ್ಲಾ ಕಾರ್ಯಗಳು ಮುಗಿದವು ಎಲ್ಲರೂ ಮನೆಗೆ ಹೋದರು. ಮರುದಿನ ಅವಳ ಸ್ನೇಹಿತೆ 🙇ಅವಳಲ್ಲಿ ಹೇಳಿದಳು , ನಿನಷ್ಟು ಪೆದ್ದು ಅಲ್ಲ ಅಂತ ಗೊತ್ತು ಹಣವನ್ನು ಪೆಟ್ಟಿಗೆಯಲ್ಲಿ ಇಡಲು.... ಅದಕ್ಕೆ ಅವಳೆಳಿದಳು, ಕೇಳು ನಾನೊಬ್ಬಳು ಗಂಡನನ್ನೇ ದೇವರೆಂದು ತಿಳಿದವಳು. ನಾನು ಅವರಿಗೆ ಆಣೆಯನ್ನು ಕೊಟ್ಟಿದ್ದೆ... ಅದಕ್ಕೆ ಸ್ನೇಹಿತೆ ಅಂದಳು, ಹಾಗಾದರೆ ನೀನು 💷ಹಣವೆನ್ನೆಲ್ಲ ಆ ಡಬ್ಬಿ ಒಳಗೆ ಹಾಕಿಬಿಟ್ಟಿಯಾ😨???? ಹಾ ಹೌದು ನಾನು ಹಾಗೆ ಮಾಡಿದೆ... ಕೇಳು, ನಾನು ಹಣವೆನ್ನೆಲ್ಲ ನನ್ನ ಅಕೌಂಟ್ ನಂಬರ್ ಗೆ ಹಾಕಿದೆ ಮತ್ತು ಗಂಡನ ಹೆಸರಿಗೆ ಒಂದು ಚೆಕ್, ಅದರಲ್ಲಿ ಎಲ್ಲಾ ಹಣವನ್ನು ಬರೆದುಬಿಟ್ಟೆ. ಮತ್ತು ಆ ಚೆಕ್ ಅನ್ನು ಅವರ ಪೆಟ್ಟಿಗೆಯಲ್ಲಿ ಹಾಕಿದೆ... ಇನ್ನು ಅವರಿಗೆ ಬಿಟ್ಟಿದ್ದು ಅದನ್ನು ಕ್ಯಾಶ್ ಮಾಡಿಕೊಳ್ಳುವುದು😕😑.. ಅವರಿಗೆ ಕ್ಯಾಶ್ ಮಾಡ್ಲಿಕ್ಕೆ ಆದ್ರೆ ಅವರು ಅದನ್ನು ಖರ್ಚು ಮಾಡಬಹುದು ಅದಕ್ಕೆ ನನ್ನ ಅಭ್ಯಂತರ ಏನು ಇಲ್ಲ....

    ನೀತಿ :

    ಅತಿಯಾಸೆ ಗತಿಗೇಡು.

  23. ಸುಖೀ ದಾಂಪತ್ಯದ ಗುಟ್ಟು


  24. ನಾನೊಮ್ಮೆ ಪಾಶ್ಚಾತ್ಯ ದೇಶದಲ್ಲಿದ್ದಾಗ ಒಬ್ಬರು... "ನಿಮಗೆ ಮದುವೆಯಾಗಿ ಎಷ್ಟು ವರ್ಷವಾಯಿತು?" ಎಂದು ಕೇಳಿದರು. ನಾನು "ಇಪ್ಪತ್ತೆಂಟು ವರ್ಷ ಎಂದೆ. ಆವರು... "ಒಬ್ಬಳೇ ಹೆಂಡತಿಯೊಂದಿಗೆ ಅಷ್ಟು ವರ್ಷ ಹೇಗಿದ್ದೀರಿ ?" ಎಂದು ಆಶ್ಚರ್ಯ ಪಟ್ಟರು. ನಾನು ಅವರಿಗೆ ಹೇಳಿದೆ... "ನನ್ನದೇನೂ ವಿಶೇಷವಲ್ಲ, ನನ್ನ ಅಜ್ಜ, ಅಜ್ಜಿ ದಂಪತಿಗಳಾಗಿ ಎಪ್ಪತ್ತು ವರ್ಷಗಳ ಕಾಲ ಇದ್ದರು" ಅವರಿಗೆ ನಂಬಲಾಗಲಿಲ್ಲ. ನನ್ನಜ್ಜ, ಅಜ್ಜಿ ಚೆನ್ನಾಗಿಯೇ ಬದುಕಿದರು. ಅಂದರೆ ಅವರಲ್ಲಿ ಜಗಳ, ಮನಸ್ತಾಪ , ವಿಚಾರ ಭೇದ ಇರಲಿಲ್ಲವೆಂದಲ್ಲ. ಒಂದೊಂದು ಬಾರಿ ಜಗಳವಾಡುತ್ತಿದ್ದರೆ ಏಳೇಳು ಜನ್ಮದಲ್ಲಿ ವೈರಿಗಳಾಗಿದ್ದರೇನೋ ಎನಿಸುತಿತ್ತು. ಆದರೆ ಕೆಲವು ಕ್ಷಣಗಳು ಮಾತ್ರ. ಊಟ ಮುಗಿದ ಮೇಲೆ ನನ್ನಜ್ಜ ವರ್ತಮಾನ ಪತ್ರಿಕೆ ಓದುವರು. ಆಗ ನಮ್ಮ ಅಜ್ಜಿ ಪಕ್ಕದಲ್ಲೇ ಕೂತು ಕೇಳಬೇಕು. ಆಕೆ ಅಲ್ಲಿಲ್ಲದಿದ್ದರೆ ಅವಳನ್ನು ಹುಡುಕಾಡಿ, ಕರೆದುಕೊಂಡು ಬಂದು ಕೂಡಿಸಿಕೊಳ್ಳುವರು. ಆಕೆಗೋ ಪೂರ್ತಿ ಕಿವುಡು. ಕೂಗಿದರೂ ಕೇಳಿಸುತ್ತಲಿರಲಿಲ್ಲ . ಆದರೆ ಅಜ್ಜ ಆಕೆಗೆ ಅಂದಿನ ರಾಜೆಕೀಯ, ದಿನದ ವಾರ್ತೆಗಳನ್ನೆಲ್ಲ ವರ್ಣಿಸಿ ಹೇಳುವರು. ಆಕೆ ನಡುನಡುವೆ ನಕ್ಕು, " ಹೌದೇ ಇಂದಿರಮ್ಮ ಹಾಗಂದಳೇ? ಮುರಾರಿ (ಮುರಾರ್ಜಿ) ಏನಂತಾರೆ ಅದಕ್ಕೆ ?" ಅವರು ಹೇಳುವುದೇನೋ, ಅವಳು ಕೇಳುವುದೇನೋ ? ಹೀಗೆ ಸುಮಾರು ಒಂದು ತಾಸು ತಪ್ಪದೇ ನಡೆಯುತ್ತಿತ್ತು. ಒಂದು ದಿನ ನಾನು ಅಜ್ಜನನ್ನು ಕೇಳಿದೆ... "ಅಜ್ಜ, ನೀನು ಯಾಕೆ ಅಜ್ಜಿಗೆ ಪೇಪರ್ ಓದಿ ಹೇಳುತ್ತೀ ? ಆಕೆಗೆ ಏನೂ ತಿಳಿಯುವುದೂ ಇಲ್ಲ, ಕೇಳಿಸುವುದೂ ಇಲ್ಲ." ಅಜ್ಜ ಹೇಳಿದ... "ನನಗೆ ಗೊತ್ತಿಲ್ಲೇನು ಆಕೆಗೆ ಕೇಳಿಸುವುದಿಲ್ಲವೆಂದು ? ಗಂಡಾ ತನಗೋಸ್ಕರ ಒಂದು ತಾಸು ಕುಳಿತು ಏನೋ ವಿಚಾರ ಹೇಳುತ್ತಾರೆ ಎಂಬ ತೃಪ್ತಿ ಆಕೆಗೆ. ಅದಕ್ಕೆ ಹೀಗೆ ಮಾಡುತ್ತೇನೆ" ನಾನು ಅಜ್ಜಿಯನ್ನು ಕೇಳೀದೆ, "ಅಜ್ಜಿ, ನಿನಗೆ ರಾಜಕಾರಣ ತಿಳಿಯುವುದಿಲ್ಲ, ಕೇಳಿಸುವುದೂ ಇಲ್ಲ, ಯಾಕೆ ಕೂತು ಕೇಳುತ್ತೀ ?" ಆಕೆ ಹೇಳಿದಳು... "ಹುಚ್ಚಪ್ಪಾ, ನನಗೇನು ತಿಳಿದೀತೋ ರಾಜಕಾರಣ ? ಯಾರಿಗೆ ಬೇಕೋ ಅದು? ನಾ ಯಾಕ ಸುಮ್ಮನೇ ಕೂತು ಕೇಳ್ತೀನ ಗೊತ್ತದ ಏನು? ನಾ ಕೇಳಿದರ ಅವರಿಗೊಂದು ಸಮಾಧಾನ, ಅವರಿಗೆ ಸಮಾಧಾನ ಆದರ ಅಷ್ಟೇ ಸಾಕು ನನಗ" ಎಷ್ಟು ಅದ್ಭುತ ಈ ಬದುಕುವ ರೀತಿ ? ಗಂಡನ ತೃಪ್ತಿಗೆಂದು ಹೆಂಡತಿ, ಹೆಂಡತಿಯ ಪ್ರೀತಿಗಾಗಿ ಪ್ರಯತ್ನಿಸುವ ಗಂಡ, ಅದೂ ಮದುವೆಯಾಗಿ ಐವತ್ತು ವರ್ಷಗಳ ನಂತರ. ಅವರ ದೀರ್ಘ ದಾಂಪತ್ಯದ ಗುಟ್ಟು ಇದು. ಬದುಕಿನ ಸಂಬಂಧಗಳು ತುಂಬ ನಾಜೂಕು. ಅವುಗಳನ್ನು ಭದ್ರ ಮಾಡುವ ಒಂದೇ ಸಾಧನ ತ್ಯಾಗ. ತ್ಯಾಗ ಬಹು ದೊಡ್ಡದಾಗಬೇಕಿಲ್ಲ. ಸಣ್ಣ ಪುಟ್ಟ ಹೊಂದಾಣಿಕೆಗಳು, ಪರಸ್ಪರ ಆಸಕ್ತಿಗಳನ್ನು ಗಮನಿಸಿ ಅವುಗಳಿಗೆ ಪ್ರಾಮುಖ್ಯತೆ ನೀಡಿದಾಗ ಸಂತೃಪ್ತಿ ತಾನಾಗಿ ಮೂಡುತ್ತದೆ. *ನಾನೇ ಹೆಚ್ಚು ನಾನೇ ಸದಾ ಗೆಲ್ಲಬೇಕು ಎಂಬ ಅಹಂಕಾರದಿಂದ ಸಂಬಂಧದ ಬೆಸುಗೆ ಬಿಚ್ಚಿ ಹೋಗುತ್ತದೆ.* *ಸುಖೀ ಸಂಸಾರದಲ್ಲಿ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದಿಲ್ಲ.* *ಮತ್ತೊಬ್ಬರ ಶಕ್ತಿಗಳನ್ನು ಮೆಚ್ಚಿಕೊಳ್ಳುತ್ತ ಅವರ ಕೊರತೆಗಳನ್ನು ಮರೆಯುತ್ತಾ ಸಾಗಿದಾಗ ನೂರು ವಸಂತಗಳು ಉರುಳಿದರೂ, ದಾಂಪತ್ಯ ಮದುವೆಯ ದಿನದ ಸುವಾಸನೆಯನ್ನು ಉಳಿಸಿಕೊಳ್ಳುತ್ತದೆ.* *ಬದುಕು ಸಾರ್ಥಕವಾಗುತ್ತದೆ.*

    ನೀತಿ :

  25. ಅಮ್ಮನ ಪ್ರೀತಿಗೆ ಸಮ ಯಾವುದಿದೆ...?


  26. ಅಮ್ಮ : ಒಂದೊಮ್ಮೆ ನನ್ನ ಕಣ್ಣುಗಳು ಹಾಳಾದರೆ ನೀನೇನು ಮಾಡುವೆ ? ಮಗ : ಅಮ್ಮ ನಾನು ನಿಮ್ಮನ್ನು ಸಿಟಿ ಗೆ ಕರೆದುಕೊಂಡು ಹೋಗಿ ಅಲ್ಲಿ ಟ್ರೀಟ್ಮೆಂಟ್ ಕೊಡಿಸುವೆ. ಅಮ್ಮ : ಆಗಲು ಕಣ್ಣು ಸರಿ ಹೋಗದಿದ್ರೆ ? ಮಗ : ಅಮ್ಮ ನಾನು ಎಷ್ಟು ಹಣ ಸಹ ಖರ್ಚು ಮಾಡುವೆ ಹೊರಗಿನ ದೇಶದಿಂದ ಡಾಕ್ಟರ್ ನ ಕರೆಸಿ ಅಥವಾ ಅಲ್ಲಿಗೆ ಕರೆದುಕೊಂಡು ಹೋಗಿ ಟ್ರೀಟ್ಮೆಂಟ್ ಕೊಡಿಸುವೆ. ಅಮ್ಮ ನಕ್ಕು ಬಿಟ್ಟರು...! ಮಗ : ಅಮ್ಮ ಒಂದೊಮ್ಮೆ ನನ್ನ ಕಣ್ಣುಗಳು ಹಾಳಾದರೆ ನೀವೇನು ಮಾಡುವಿರಿ..? ಅಮ್ಮ : ಮಗ, ನಾನು ನನ್ನ ಕಣ್ಣುಗಳನ್ನು ನಿನಗೆ ಕೊಡುವೆ....

    ನೀತಿ :

  27. ಸಿಹಿ ಸಂಸಾರವನ್ನು ಉಳಿಸಿದ್ದು ಒಂದು ಸಣ್ಣ ಚಮಚ ಸಕ್ಕರೆ!


  28. ಹೃದಯಸ್ಪರ್ಶಿಯಾದ ಪುಟ್ಟ ಘಟನೆಯೊಂದು ಇಲ್ಲಿದೆ. ಆರೇಳು ವರ್ಷ ವಯಸ್ಸಿನ ಒಬ್ಬನೇ ಮಗನಿದ್ದ ಆ ದಂಪತಿಗಳು ಎಲ್ಲರಂತೆಯೇ ಸಾಮಾನ್ಯ ಜನ. ಆಗೊಮ್ಮೆ ಈಗೊಮ್ಮೆ ಎಲ್ಲಾ ಗಂಡ-ಹೆಂಡತಿಯರಲ್ಲಿ ಆಗುವಂತೆ ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪಗಳು ಬರುತ್ತಿದ್ದವು. ಸಣ್ಣಪುಟ್ಟ ಜಗಳಗಳೂ ಆಗುತ್ತಿದ್ದವು. ಆದರೆ ಅವರು ಮಗನ ಮುಂದೆ ಮಾತ್ರ ಜಗಳವಾಡುತ್ತಿರಲಿಲ್ಲ. ಜಗಳದ ಪರಿಣಾಮ ಮಗನ ಮುಗ್ಧ ಮನಸ್ಸಿನ ಮೇಲೆ ಆಗಬಾರದೆಂಬ ಎಚ್ಚರಿಕೆಯಿತ್ತು. ಅವರಿಬ್ಬರಿಗೂ ತಮ್ಮೊಬ್ಬನೇ ಮಗನನ್ನು ಕಂಡರೆ ಪಂಚಪ್ರಾಣ! ಒಂದು ರಾತ್ರಿ ಅಪ್ಪ-ಅಮ್ಮ ಮತ್ತವರ ಮಗ ಊಟಕ್ಕೆ ಕುಳಿತಿದ್ದರು. ಎಲ್ಲವೂ ಸರಿಯಾಗಿಯೇ ಇತ್ತು. ಅಂದು ಆಕೆ ಆತನಿಗೆ ಬಹಳ ಇಷ್ಟವಾದ ಪಾಯಸವನ್ನು ಮಾಡಿದ್ದರು. ಆತ ಪಾಯಸವನ್ನು ರುಚಿ ನೋಡಿದಾಕ್ಷಣ “ಇದೆಂತಹ ಪಾಯಸ? ಸಿಹಿಯೇ ಇಲ್ಲ! ಇಷ್ಟು ವರ್ಷಗಳಾದರೂ ನಿನಗೆ ಪಾಯಸ ಮಾಡುವುದಕ್ಕೇ ಬರುವುದಿಲ್ಲ. ನಮ್ಮಮ್ಮ ಎಷ್ಟು ಚೆನ್ನಾಗಿ ಪಾಯಸ ಮಾಡುತ್ತಿದ್ದರು ಗೊತ್ತಾ?” ಎಂದರು. ಆಕೆ ತಕ್ಷಣ “ಹೌದ್ರೀ! ನಿಮ್ಮಷ್ಟೇ ಕೆಲಸ ನಾನೂ ಮಾಡುತ್ತೇನೆ. ನಿಮ್ಮಷ್ಟೇ ಸಂಬಳವನ್ನೂ ತರುತ್ತೇನೆ. ನಿಮ್ಮ ತಾಯಿ ಒಂದಕ್ಷರವನ್ನೂ ಓದಿರಲಿಲ್ಲ. ಒಂದು ರೂಪಾಯಿ ಸಂಪಾದನೆಯನ್ನೂ ಮಾಡುತ್ತಿರಲಿಲ್ಲ. ಆದರೂ ಅವರು ಮಾಡುತ್ತಿದ್ದ ಅಡುಗೆಯನ್ನು ಹೊಗಳುತ್ತೀರಿ. ನನ್ನ ಅಡುಗೆಯನ್ನು ತೆಗಳುತ್ತೀರಿ. ನಾನೂ ಅವರಂತೆಯೇ ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತಿರುತ್ತಿದ್ದರೆ ಅವರಿಗಿಂತ ಚೆನ್ನಾಗಿ ಅಡುಗೆ ಕಲಿಯುತ್ತಿದ್ದೆ” ಎಂದರು. ಆತ ತಕ್ಷಣ “ನಿನಗೆ ಅಡುಗೆ ಮಾಡುವುದಕ್ಕೆ ಬರುವುದಿಲ್ಲವೆಂದು ಒಪ್ಪಿಕೋ. ಆದರೆ ನಮ್ಮಮ್ಮನನ್ನು ಅನಕ್ಷರಸ್ಥೆ, ನಿರುದ್ಯೋಗಿ, ಎಂದೆಲ್ಲ ಹೀಗಳೆಯಬೇಡ. ನಿಮ್ಮಪ್ಪ-ಅಮ್ಮಂದಿರಲ್ಲಿ ನೂರೆಂಟು ತಪ್ಪುಗಳನ್ನು ನಾನೂ ಹುಡುಕಬಲ್ಲೆ” ಎಂದುಬಿಟ್ಟರು. ಹೀಗೆ ಅವರಿಬ್ಬರಲ್ಲಿ ಮಾತಿಗೆ ಮಾತು ಬೆಳೆಯುತ್ತಾ ಹೋಯಿತು. ಮಾತಿನ ರಭಸದಲ್ಲಿ ಮಗ, ತಮ್ಮಿಬ್ಬರ ಜಗಳವನ್ನು ನೋಡುತ್ತಿದ್ದಾನೆಂಬುದನ್ನು ಕೊಂಚ ಹೊತ್ತು ಮರೆತುಬಿಟ್ಟಿದ್ದರು. ಆದರೆ ತಮ್ಮಿಬ್ಬರ ಜಗಳವನ್ನು ಮಗ ಬಾಯಿಬಿಟ್ಟುಕೊಂಡು, ನೋವಿನಿಂದ ನೋಡುತ್ತಿರುವುದನ್ನು ಇಬ್ಬರೂ ಗಮನಿಸಿದಾಗ, ತಮ್ಮ ತಪ್ಪು ಅವರಿಗೆ ಅರಿವಾಯಿತು. ಆತ ತಕ್ಷಣ ಎದ್ದು ಹೆಂಡತಿಯ ಬಳಿ ಹೋಗಿ ಆಕೆಯ ಕೈಹಿಡಿದು “ಅಯ್ಯೋ! ನಾನೆಂತಹ ತಪ್ಪು ಮಾಡಿಬಿಟ್ಟೆ. ಕೋಪದ ಭರದಲ್ಲಿ ನಿನ್ನನ್ನು ಏನೇನೋ ಅಂದುಬಿಟ್ಟೆ. ನನ್ನ ವರ್ತನೆಯ ಬಗ್ಗೆ ನನಗೇ ನಾಚಿಕೆಯಾಗುತ್ತಿದೆ. ನನ್ನನ್ನು ಕ್ಷಮಿಸಿಬಿಡು” ಎಂದು ಹೇಳಿ ಆಕೆಯನ್ನು ಲಘುವಾಗಿ ಅಪ್ಪಿಕೊಂಡರು. ತನ್ನ ಗಂಡನಲ್ಲಾದ ದಿಢೀರ್ ಬದಲಾವಣೆಯನ್ನು ಕಂಡು ಆಕೆಯೂ ಬೆರಗಾದರು. ತಮ್ಮಿಬ್ಬರ ಜಗಳವನ್ನು ಮಗ ಗಮನಿಸುತ್ತಿದ್ದಾನೆಂಬ ಅರಿವು ಅವರಿಗೂ ಆಯಿತು. ಆಕೆಯೂ ತಕ್ಷಣ “ಇಲ್ಲಾರೀ. ನನ್ನದೇ ತಪ್ಪು. ನಾನು ಪಾಯಸ ಮಾಡುವಾಗ ಯಾವುದೋ ಯೋಚನೆಯಲ್ಲಿದ್ದೆ. ನನ್ನನ್ನು ಕ್ಷಮಿಸಿಬಿಡಿ” ಎಂದು ಹೇಳಿದರು. ಎದ್ದು ಹೋಗಿ ಒಂದು ಚಮಚ ಸಕ್ಕರೆಯನ್ನು ತಂದು ಪಾಯಸಕ್ಕೆ ಸೇರಿಸಿದರು. ಗಂಡನಿಗೆ ಕೊಟ್ಟರು. ಆತ ಅದನ್ನು ಸೇವಿಸಿ “ವಾಹ್! ಅದ್ಭುತವಾಗಿದೆ. ಒಂದು ಸಣ್ಣ ಚಮಚ ಸಕ್ಕರೆ ಇಲ್ಲದಿದ್ದುದಕ್ಕಾಗಿ ನಾವು ಇಷ್ಟು ದೊಡ್ಡ ಜಗಳವಾಡಿದೆವಲ್ಲಾ! ನನ್ನನ್ನು ಕ್ಷಮಿಸಿದ್ದೀಯಾ ತಾನೆ?” ಎಂದಾಗ, ಆಕೆಯೂ “ನೀವೂ ನನ್ನನ್ನು ಕ್ಷಮಿಸಿದ್ದೀರಿ ತಾನೇ?” ಎನ್ನುತ್ತಾ ಗಟ್ಟಿಯಾಗಿ ನಕ್ಕರು. ಆಗ ಮಗನೂ ಅವರ ನಗುವಿನಲ್ಲಿ ಭಾಗಿಯಾದ. ಅಂದು ರಾತ್ರಿ ಮಲಗುವ ಮುಂಚೆ ಅವರ ಪುಟ್ಟ ಮಗ ದೇವರ ಮನೆಗೆ ಹೋದ. ಕಣ್ಮುಚ್ಚಿಕೊಂಡು, ಕೈಮುಗಿದುಕೊಂಡು “ಓ ದೇವರೇ! ದೊಡ್ಡವನಾದ ಮೇಲೆ ಅಪ್ಪ-ಅಮ್ಮಂದಿರಂತೆ ನನ್ನನ್ನೂ ದೊಡ್ಡ ಮನುಷ್ಯನನ್ನಾಗಿ ಮಾಡಿದರೆ ಸಾಲದು. ಅವರಂತೆಯೇ ದೊಡ್ಡ ಮನಸ್ಸಿನವನನ್ನಾಗಿ ಮಾಡು” ಎಂದು ಕೇಳಿಕೊಂಡ! ಹಿಂದೆಯೇ ನಿಂತಿದ್ದ ಅಪ್ಪ-ಅಮ್ಮಂದಿರು ಮಗನ ಪ್ರಾರ್ಥನೆಯನ್ನು ಗಮನಿಸಿದರು. ಅವರೂ ಒಳಕ್ಕೆ ಬಂದು ಕಣ್ಣೀರಿಡುತ್ತಾ “ನಮ್ಮ ಮಗ ಅಂದುಕೊಳ್ಳುವಷ್ಟು ದೊಡ್ಡ ಮನುಷ್ಯರೂ, ದೊಡ್ಡ ಮನಸ್ಸಿನವರೂ ನಾವಾಗಬೇಕು” ಎಂದು ಕೇಳಿಕೊಂಡರಂತೆ! ನಮ್ಮ ಬದುಕಿನಲ್ಲೂ ಜಗಳ ಮಾಡುವ ಸಂದರ್ಭ ಬಂದಾಗ, ನಮ್ಮ ಜಗಳವನ್ನು ಒಂದು ಸಣ್ಣ ಚಮಚ ಬಗೆಹರಿಸಬಲ್ಲದೇ ಎಂಬುದನ್ನು ಯೋಚಿಸಬಹುದು! ದೊಡ್ಡ ಮನಸ್ಸಿನವರಾಗಲು ಪ್ರಯತ್ನಿಸಬಹುದು!

    ನೀತಿ :

ಪೌರಾಣಿಕ ಕಥೆಗಳು

  1. ಬನ್ನಿ ಬಂಗಾರ
  2. ಶಮೀವೃತ ಎಂಬ ಬಡ ಬಾಲಕನಿದ್ದ. ತಂದೆ ತಾಯಿಗಳಿಲ್ಲದ ಅನಾಥ, ಆದರೂ ಗುಣ ಸಂಪನ್ನ. ಓದಬೇಕೆಂದ. ಅವನ ಊರಿನ ಹತ್ತಿರ ಸಿಸು ಎಂಬ ಗುರುಕುಲವಿತ್ತು. ಅಲ್ಲಿ ಮಹಾನ ಎಂಬ ಗುರು ಇದ್ದ. ಶಮೀವೃತ ಕಠಿಣ ಪರಿಶ್ರಮಿ. ಗುರುಗಳ ಹತ್ತಿರ ಬಂದು ನಿಷ್ಠೆಯಿಂದ ಅಧ್ಯಯನ ಕೈಗೊಂಡ. ಇವನೊಂದಿಗೆ ಅದೇ ಪ್ರದೇಶದ ಮಹಾರಾಜರ ಮಗನಾದ ವೃಕ್ಷಿತನೆಂಬ ಯುವರಾಜನೂ ಅಲ್ಲಿಯೇ ವೇದಾಧ್ಯಯನ ಮಾಡುತ್ತಿದ್ದ. ಕಲಿಯುವಾಗ ಬಾಗಿಕೊಂಡಿರಬೇಕು, ತಿಂದುಣ್ಣದೇ ಅಕ್ಷ ರ ಪಡೆಯಬೇಕು ಎಂದು ಗುರುಗಳು ಹೇಳುವುದನ್ನು ಹಸಿವೆಯಾದರೂ ಶಮೀವೃತ ಪಾಲಿಸುತ್ತಿದ್ದ. ಆದರೆ ವೃಕ್ಷಿತ ಮಾತ್ರ, 'ಊಟವಿದ್ದರೆ ಸ್ಫ್ಪೂರ್ತಿ, ಪಾಠ ಪಠಣ ಎಲ್ಲ. ಅದೇ ಇಲ್ಲದಿದ್ದರೆ ವಿದ್ಯಾರ್ಥಿ ಜೀವಂತವಿದ್ದರೂ ಹೆಣದಂತೆ' ಎನ್ನುತ್ತಿದ್ದ. ಕೆಲವು ದಿನ ಕಳೆಯಲು ವಿದ್ಯಾಭ್ಯಾಸ ಮುಗಿಯಿತು. ಆಗ ಗುರುಗಳು, 'ನಾನು ನಿಮ್ಮ ಹತ್ತಿರ ಬಂದಾಗ ನನಗೆ ಬೇಕಾದ ಗುರುಕಾಣಿಕೆ ಕೊಡಿ' ಎಂದು ಹೇಳಿದರು. ಒಂದು ದಿನ ಗುರುಗಳು ವೃಕ್ಷಿತನ ಅರಮನೆಗೆ ಬರುತ್ತಾರೆ. ರಾಜನಾಗಿದ್ದ ವೃಕ್ಷಿತನು, ತಾನು ಕೊಟ್ಟಷ್ಟು ಕಾಣಿಕೆಯನ್ನು ಗುರುಗಳಿಗೆ ಇನ್ನು ಮುಂದೆ ಯಾರೂ ಕೊಟ್ಟಿರಬಾರದು, ಹಾಗೇ ತಾನು ಎಷ್ಟು ಶ್ರೇಷ್ಠ ವಿದ್ಯಾರ್ಥಿ ಎಂಬುದು ಗುರುಗಳಿಗೆ ತಿಳಿಯಬೇಕು ಎಂದು ಆನೆಯ ಮೇಲೆ ನಗನಾಣ್ಯ ವಜ್ರ-ಆಭರಣಗಳ ರಾಶಿಯನ್ನೇ ಹೇರಿ ಗುರುಗಳ ಹಿಂದೆ ಕಳಿಸಿದ. ಅಲ್ಲದೇ ಶಮೀವೃತ ಗುರುಗಳಿಗೆ ಏನೂ ಕೊಡಲಾಗಲಿಲ್ಲ ಎಂದು ನೊಂದುಕೊಳ್ಳುವುದನ್ನು ನೋಡಲೆಂದೇ ಗುರುಗಳ ಹಿಂದೆಯೇ ಗೊತ್ತಾಗದಂತೆ ಬಂದ. ಶಮಿವೃತನು ಗುರುಗಳನ್ನು ಹಣ್ಣು ಹಾಲುಗಳಿಂದ ಸತ್ಕರಿಸಿದ. ಅವರ ಯೋಗಕ್ಷೇಮ ವಿಚಾರಿಸಿದ. ಗುರುಗಳಿಗೆ ತನ್ನ ಹತ್ತಿರ ಕಾಣಿಕೆ ಕೊಡಲು ಏನೂ ಇಲ್ಲವೆಂದು ಗೊತ್ತಿದ್ದರೂ ತನ್ನ ಹತ್ತಿರವಿರುವ ಯಾವುದೇ ವಸ್ತು ಕೇಳಿದರೂ ಕೊಡುವುದಾಗಿ ಹೇಳಿದ. ಆಗ ಗುರುಗಳು ಅವನ ಗುಡಿಸಲಿನ ಹಿತ್ತಲಿನಲ್ಲಿದ್ದ ಹಸಿರು ಎಲೆಗಳಿಂದ ಸಮೃದ್ಧವಾಗಿದ್ದ ಒಂದು ವೃಕ್ಷ ವನ್ನೇ ಕೊಡಲು ಕೇಳಿದರು. 'ಗುರುವಿಗಿಂತ ಹಿರಿದು ಮರಣಕ್ಕಿಂತ ಕೊನೆಯದು ಯಾವುದೂ ಇಲ್ಲ' ಎಂದು ಆ ಮರವನ್ನೇ ಗುರುದಕ್ಷಿಣೆಯಾಗಿ ಕೊಡಲು ಗುರುವನ್ನು ಕರೆದ. ಆಶ್ಚರ್ಯವೆಂಬಂತೆ ಗುರುಗಳು ಮುಟ್ಟಿದ ತಕ್ಷ ಣ ಆ ಗಿಡದ ನಾಣ್ಯದ ಗಾತ್ರದ ಎಲೆಗಳೆಲ್ಲ ಬಂಗಾರದ ಎಲೆಗಳಾದವು. ಹರಿದು ಹರಿದು ಹಾಕಿದಂತೆ ಬಂಗಾರದ ನಾಣ್ಯದ ರಾಶಿಯೇ ಗುಡ್ಡದಂತೆ ಬಿದ್ದರೂ ಮರದ ಒಂದೆಲೆಯೂ ಬರಿದಾಗಲಿಲ್ಲ. ಕೊಟ್ಟೆನೆಂಬ ಅಹಂ ಇಲ್ಲದೆ ಪ್ರೀತಿಯಿಂದ ಕೊಟ್ಟ ಒಂದೆಲೆಯೂ ಬಂಗಾರಕ್ಕೆ ಸಮ ಎಂದು ಗುರುಗಳು ಹೊಗಳಿದರು. ಅಡಗಿಕೊಂಡ ವೃಕ್ಷಿತನನ್ನು ಕರೆದು, ಚಿನ್ನ ಎಲ್ಲೆಲ್ಲಿಯೂ ಸಿಗಬಹುದು. ಪ್ರೀತಿ ಸ್ನೇಹ ಸಂಬಂಧಗಳನ್ನು ಹೊನ್ನಿನಿಂದ ಗಳಿಸಲಾಗದು ಎಂದು ಗೆಳೆಯನಲ್ಲಿ ಕ್ಷಮೆಯಾಚಿಸಲು ತಿಳಿಸಿದರು. ಇಬ್ಬರೂ ಮರದ ಮಹಿಮೆಯಿಂದ ಒಂದಾದುದಕ್ಕೆ ಆ ಮರಕ್ಕೆ ಶಮೀವೃಕ್ಷ ಎಂದು ಕರೆದರು. ಅಂದಿನಿಂದ ಶಮೀವೃಕ್ಷ ದ ಎಲೆ ಹಂಚಿಕೊಂಡು ಬಂಗಾರದಂತೆ ಹೋಗೋಣವೆಂಬ ಮಾತು ಜನಜನಿತವಾಯಿತು. ಇಡೀ ನಾಡಿನ ತುಂಬ ಶಮೀವೃತನ ಹೆಸರು ಪ್ರಸಿದ್ದಿಯಾಯಿತು. ಬನ್ನಿ ಬಂಗಾರವಾಗೋಣ ಎಂಬ ಮಾತು ಉಳಿಯಿತು.

    ನೀತಿ :

ಜಾನಪದ ಕಥೆಗಳು

  1. ಒಂದು ಹಿಡಿ ಅಕ್ಕಿ ಮತ್ತು ಅತಿಥಿ ಸತ್ಕಾರ


  2. ಮನೆಗೊಬ್ಬ ಅತಿಥಿ ಬಂದರೆ ಅವನ ಜತೆ ಹೋಟೆಲ್ಲಿಗೆ ಹೋಗಿ ಹೊರಗಿನ ಊಟ ಉಂಡುಬಂದು, ಸ್ಟಾರ್ ಹೋಟೆಲಲ್ಲಿ ಊಟ ಕೊಡಿಸಿದೆ ಎನ್ನುವುದೇ ಅತಿಥಿ ಸತ್ಕಾರದ ಮಾನದಂಡವಾದ ಈ ಕಾಲದಲ್ಲಿ ಹಣ, ಸಮಯ ಎರಡನ್ನೂ ಉಳಿತಾಯ ಮಾಡುತ್ತಿದ್ದ ‘ಒಂದು ಹಿಡಿ ಅಕ್ಕಿ’ ಪದ್ಧತಿ ಸದ್ದಿಲ್ಲದೇ ಮಾಯವಾಗುತ್ತಿದೆ. ಕರೆಗಂಟೆಯ ಸದ್ದಿಗೆ ಬಾಗಿಲು ತೆರೆದರೆ ಮಂಗಳಕ್ಕ ನಿಂತಿದ್ದಳು. ಅರೆ! ಮೊನ್ನೆಯಷ್ಟೇ ಅದೆ ದೂರದ ಊರಿನಲ್ಲಿದ್ದ ತಮ್ಮನ ಮನೆಗೆಂದು ಹೋದವಳು ಇಷ್ಟು ಬೇಗ ಇಲ್ಲಿ! ‘ಏನಕ್ಕಾ, ತಮ್ಮನ ಮನೆಯ ಸಂಭ್ರಮಕ್ಕಿಂತ ಹೆಚ್ಚು ಭಾವನ ನೆನಪು ಕಾಡಿತಾ’ ಅಂತ ಛೇಡಿಸಿದೆ. ‘ಅಯ್ಯೋ ಆ ಕಥೆ ಏನು ಹೇಳ್ತೀಯಾ.. ಅವರ ಊರಲ್ಲಿರುವ ಎ ಹೋಟೆಲುಗಳನ್ನು ಮೂರೇ ದಿವಸದಲ್ಲಿ ಹತ್ತಿ ಇಳಿದದ್ದಾ ಯಿತು. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟದವರೆಗೆ ಎ ಹೋಟೆಲಿನ.. ತಮ್ಮನ ಹೆಂಡತಿಯ ಕೈರುಚಿ ಏನು ಅಂತ ಕೊನೆ ತನಕವೂ ನೋಡಲಾಗಲಿಲ್ಲ! ಅ ಕಣೆ, ಮನೆ ಇದ್ದುಕೊಂಡು ಹೋಟೆಲಿನಲ್ಲಿ ತಿನ್ನೋದು ಅಂದ್ರೆ ಎಷ್ಟು ಸಪ್ಪೆ ಅನ್ಸುತ್ತೆ ಗೊತ್ತಾ.. ಏನು ಆತ್ಮೀಯತೆ ಇರುತ್ತೆ ಅಲ್ಲಿ? ನಾವು ತಿಂದು ಏಳುವುದನ್ನೇ ಕಾದುಕೊಂಡು ಪಕ್ಕದಲ್ಲಿಯೇ ನಿಂತಿರುತ್ತಾರೆ. ಇನ್ನು ಅವರು ಕೊಡುವ ಬಿಲ್ಲು ಎತ್ತಲು ಶ್ರೀರಾಮಚಂದ್ರನಿಗೂ ಕಷ್ಟ.. ಒಂದು ಹೊತ್ತಿನ ಊಟದಲ್ಲಿ ಒಂದು ತಿಂಗಳಿನ ದಿನಸಿ ಬರುತ್ತೆ..’ ಹೀಗೆ ಮಾತಿನ ಜಾಡು ಸಾಗಿತ್ತು. ನನಗೆ ಅಜ್ಜಿ ನೆನಪಾದಳು. ರಜೆಯ ಇಡೀ ಎರಡು ತಿಂಗಳು ನಾವು ಅಜ್ಜಿಮನೆಯ ಕಾಯಂ ನಿವಾಸಿಗಳು. ಏನಾದರೊಂದು ಕೆಲಸದಲ್ಲಿ ಸದಾ ಮುಳುಗಿರುತ್ತಿದ್ದ ಅಜ್ಜಿಯ ದಿನಚರಿಯಲ್ಲಿ ವಿರಾಮದ ವೇಳೆಯೆಂದರೆ ಇರುಳು ದೀಪ ಆರಿಸಿದ ನಂತರವೇ. ಬೆಳಗ್ಗಿನ ಹಟ್ಟಿಕೆಲಸ, ಮನೆ ಮಂದಿಗೆ ತಿಂಡಿಫತೀರ್ಥದ ಸಮಾರಾಧನೆ ಆದ ನಂತರ ಮಧ್ಯಾಹ್ನದ ಅಡುಗೆಯ ತಯಾರಿ. ಅದರಲ್ಲಿ ಮೊದಲ ಕೆಲಸ ಎಂದರೆ ಅನ್ನ ಮಾಡಲು ನೀರಿಟ್ಟು ಅದಕ್ಕೆ ಅಕ್ಕಿ ಅಳೆದು ತೊಳೆದು ಹಾಕುವುದು. ತಿಂಡಿ ಆದ ನಂತರ ಮಂದವಾಗಿ ಉರಿಯುತ್ತಲೋ ಅಥವಾ ಕೆಂಡಗಳು ಮಾತ್ರ ಉಳಿದಿರುತ್ತಿದ್ದ ಒಲೆಯ ಬೆಂಕಿಗೆ ಇನ್ನೆರಡು ಸೌದೆಗಳನ್ನು ತಳ್ಳಿ, ಹೊಗೆ ಎಬ್ಬಿಸಿ, ಕಲಾಯಿ ಹಾಕಿದ ಕಂಚಿನ ಚೆರಿಗೆಗೆ ನೀರು ತುಂಬಿಸಿ ಒಲೆಗೇರಿಸುತ್ತಿದ್ದರು. ಉಗ್ರಾಣ ಎಂಬ ಕತ್ತಲ ಕೋಣೆಯಲ್ಲಿ ತಿಂಗಳ ಖರ್ಚಿಗಾಗುವಷ್ಟು ಸಾಮಾನು ಸರಂಜಾಮುಗಳ ದಾಸ್ತಾನು ಇರುತ್ತಿತ್ತು. ಅದರ ಬಾಗಿಲು ತೆಗೆಯಲು ಅಜ್ಜ ಮತ್ತು ಅಜ್ಜಿಗೆ ಮಾತ್ರ ಅವಕಾಶವಿದ್ದುದು. ಯಾಕೆಂದರೆ ನನ್ನ ಮತ್ತು ನನ್ನ ಅಣ್ಣಂದಿರ ಕೈಗೆ ಬಾಗಿಲ ಮೇಲಿದ್ದ ಚಿಲಕದ ಕುಣಿಕೆ ನಿಲುಕುತ್ತಿರಲಿಲ್ಲ ಅನ್ನೋದೆ ಇದರ ಪ್ರಮುಖ ಕಾರಣ. ಹಾಗಾಗಿ ಅದರ ಬಾಗಿಲು ತೆಗೆಯುವಾಗ ಮೊಮ್ಮಕ್ಕಳ ಹಿಂಡೇ ಒಳಗೆ ನುಗ್ಗಿಬಿಡುತ್ತಿತ್ತು. ಅಲ್ಲಿದ್ದ ಬೆಲ್ಲ, ಕೊಬ್ಬರಿಗಳ, ಹುರಿದ ಗೋಡಂಬಿಗಳ ಆಕರ್ಷಣೆ ಮೊದಲಿನದ್ದಾ ಗಿದ್ದರೆ, ಭತ್ತದ ಹುಲ್ಲಿನ ರಾಶಿಯಲ್ಲಿ ಹಣ್ಣಾಗಲೆಂದು ಇಡುತ್ತಿದ್ದ ಮಾವಿನಹಣ್ಣು, ಸಪೋಟಗಳ ಸೆಳೆತ ಮತ್ತಿನದ್ದಾ ಗಿರುತ್ತಿತ್ತು. ಅದನ್ನೆ ಮೊಮ್ಮಕ್ಕಳಿಗೆ ಹಂಚಿಕೊಟ್ಟು ಸಾಗಹಾಕಿದ ನಂತರ ಅಜ್ಜಿ ಅಕ್ಕಿಯ ಡಬ್ಬದ ಮುಚ್ಚಳ ತೆರೆದು ಸೇರಿನಲ್ಲಿ ಅಕ್ಕಿ ಅಳೆದು ಬೇರೊಂದು ಪಾತ್ರೆಗೆ ತುಂಬುತ್ತಿದ್ದರು. ಅದರ ಮುಚ್ಚಳ ಹಾಕುವ ಮುನ್ನ ಮತ್ತೆ ಒಂದು ಮುಷ್ಟಿಯಷ್ಟು ಹೆಚ್ಚಿಗೆ ಅಕ್ಕಿ ತೆಗೆದು ಹಾಕುತ್ತಾ ಅವರು ಹೇಳುತ್ತಿದ್ದ ಮಾತು ಒಂದೇಫ ‘ಪಕ್ಕನೆ ಊಟದ ಹೊತ್ತಿಗೆ ಯಾರಾದ್ರು ಬಂದ್ರೆ ಅನ್ನ ಇಲ್ಲ ಅಂತಾಗಬಾರದು’. ಅದ್ಯಾರಪ್ಪಾ ದಿನಾ ಬರೀ ಒಂದು ಮುಷ್ಟಿ ಅಕ್ಕಿಯ ಅನ್ನ ಉಣ್ಣಲು ಬರುವುದು ಎಂಬುದು ನನಗೆ ಬಗೆಹರಿಯದ ಗಂಟಾಗಿತ್ತು. ಪತ್ರ ವ್ಯವಹಾರ ಮಾತ್ರ ಇದ್ದ ಕಾಲವಾಗಿದ್ದ ಕಾರಣ, ನೆಂಟರು ಬರುವುದು ಹೆಚ್ಚಾಗಿ ಅನಿರೀಕ್ಷಿತವೇ ಆಗಿತ್ತು. ಇನ್ನು ಈಗಿನಂತೆ ಲೈಟರಿನ ಸ್ವಿಚ್ ಒತ್ತಿದೊಡನೆ ಹೊತ್ತಿಕೊಳ್ಳುವ ಗ್ಯಾಸಿನೊಲೆಗಳು ಆಗೆ ಎಲ್ಲೂ ಇಲ್ಲದ ಕಾರಣ ಒಲೆಗೆ ಬೆಂಕಿ ಹೊತ್ತಿಸುವುದೇ ಒಂದು ದೊಡ್ಡ ಕಾಯಕವಾಗುತ್ತಿತ್ತು. ಮಳೆಗಾಲವಾದರಂತೂ ಕೇಳುವುದೇ ಬೇಡ. ಸೋರುವ ಮಾಡಿನಡಿಯಲ್ಲಿಟ್ಟ ಒದ್ದಾ ಮುದ್ದಾ ಸೌದೆಗಳು ಹೊಗೆ ಕಾರಿ ಕಣ್ಣೀರುಕ್ಕಿಸಿಯೇ ಹೊತ್ತಿ ಉರಿಯುತ್ತಿದ್ದುದು. ಅದೆ ಆಗಲು ಸುಮಾರು ಹೊತ್ತೇ ಹಿಡಿಯುತ್ತಿದ್ದ ಕಾರಣ ಈ ಒಂದು ಮುಷ್ಟಿ ಹೆಚ್ಚು ಅಕ್ಕಿ ಹಲವು ಸಲ ಅಜ್ಜಿಯ ನೆಂಟರನ್ನು ಕಾಯ್ದದ್ದಿದೆಯಂತೆ. ದಿಢೀರನೆ ಬರುವ ಅತಿಥಿಗಳ ಹೊಟ್ಟೆ ತಂಪಾಗಿದ್ದು ಇದರಿಂದಲೇ ಅಂತೆ. ಕೆಲವೊಂದು ನೆಂಟರು ಮುಂಚಿತವಾಗಿಯೇ ತಿಳಿಸಿ ಬರುವವರೂ ಇದ್ದರು. ಅಂಥವರಿಗೆ ಪಾಯಸದೂಟ ಮಾಡುವ ಭಾಗ್ಯವೂ ಲಭ್ಯವಿತ್ತು. ಆದರೆ ಕಾಗದಗಳ ಬಟವಾಡೆ ಕ್ಲುಪ್ತ ಸಮಯಕ್ಕೆ ಆಗದೇ ನಡೆಯುತ್ತಿದ್ದ ಅನಾಹುತಗಳಿಗೇನೂ ಕಮ್ಮಿ ಇರಲಿಲ್ಲ. ಭರ್ಜರಿ ಮಳೆ ಬರುವ ಕಾಲದಲ್ಲಿ ತೋಟದ ಕೆಲಸಗಳಿಗೆ ಸ್ವಲ್ಪ ವಿಶ್ರಾಂತಿ ಅಂತ ರೈತರ ಅಂಬೋಣ. ಆಗೆಲ್ಲ ಪ್ರವಾಸ ಹೋಗುವುದೆಂದರೆ ನೆಂಟರ ಮನೆಯ ಭೇಟಿ ಅಥವಾ ದೇವಸ್ಥಾನಗಳ ದರ್ಶನ. ಹಟ್ಟಿಯಲ್ಲಿದ್ದ ಹಸುಗಳು ಮತ್ತು ತೋಟ ಕಾಯುವ ನಾಯಿಗಳು ಇರುವ ಹಳ್ಳಿಮನೆಗೆ ಬೀಗಹಾಕಿ ಹೋಗುವ ಸಂಪ್ರದಾಯ ಇರದ ಕಾಲವದು. ಹೀಗಿರುವಾಗ ಒಮ್ಮೆ ಅಜ್ಜನನ್ನು ಮನೆಯ ಉಳಿಸಿ ನನ್ನ ಅಜ್ಜಿ ಮತ್ತು ಚಿಕ್ಕಮ್ಮ ಇಬ್ಬರೂ ಸೆಖೆಯೂರಾದ ದಕ್ಷಿಣಕನ್ನಡ ಬಿಟ್ಟು ನಮ್ಮ ಮನೆಯಿದ್ದ ತಂಪಿನೂರು ಕೊಡಗಿಗೆ ಒಂದೆರಡು ದಿನ ಹೊರಡುವ ಸಿದ್ಧತೆ ನಡೆಸಿ ಅಮ್ಮನಿಗೆ ಪತ್ರ ಬರೆದು ಹಾಕಿದ್ದರಂತೆ. ಪತ್ರ ಸಿಗಲು ತಡವಾಗಿ ಅಮ್ಮನಿಗೆ ಈ ವಿಷಯ ತಿಳಿದಿರಲಿಲ್ಲ. ಇನ್ನೊಂದು ಊರಿನಲ್ಲಿ ಗೆಳತಿಯ ಮದುವೆಗೆ ಅಗತ್ಯವಾಗಿ ಹೋಗಲೇಬೇಕಾದ್ದರಿಂದ ಅಮ್ಮ ನಮ್ಮನ್ನು ಅಪ್ಪನ ಉಸ್ತುವಾರಿಯಲ್ಲಿ ಬಿಟ್ಟು ಮದುವೆಯ ಮುನ್ನಾದಿನ ಆ ಊರಿನ ಕಡೆ ಹೋಗಿದ್ದಳು. ಅಮ್ಮ ಹೋದ ಘಳಿಗೆಯಲ್ಲಿ ಶುರುವಾದ ಭರ್ಜರಿ ಮಳೆ ಬಿಟ್ಟೇ ಇರಲಿಲ್ಲ. ಮನೆಯ ಎದುರುಭಾಗದ ಹರಿಯುತ್ತಿದ್ದ ಕಾವೇರಿ ನದಿ ರಾತ್ರಿ ಬೆಳಗಾಗುವುದರ ಒಳಗೆ ಸಮುದ್ರವಾಗಿದ್ದಳು. ಬದಿಯ ಗದ್ದಾ ಗಿಳಿದು ಹೊರಗಿನೂರಿನ ಸಂಪರ್ಕಕ್ಕೆಂದೇ ಇರುವ ರಸ್ತೆಯ ಮೇಲೆ ಹರಿದು ಭಾಗಮಂಡಲವನ್ನು ದ್ವೀಪವಾಗಿಸಿದ್ದಳು. ಇಂತಹ ಘಟನೆಗಳು ಮಳೆಗಾಲದಲ್ಲಿ ಸರ್ವೇಸಾಮಾನ್ಯವಾದ ಕಾರಣ ನಮಗೇನೂ ಅಂತಹ ತಲೆಬಿಸಿಯಾಗಿರಲಿಲ್ಲ. ಇದ್ಯಾವುದರ ಸುಳಿವೇ ಇಲ್ಲದೆ ಮಧ್ಯಾಹ್ನದ ಬಸ್ಸಿನಲ್ಲಿ ಭಾಗಮಂಡಲಕ್ಕೆ ಬಂದು ತಲುಪಿದ್ದರು ಅಜ್ಜಿ ಮತ್ತು ಚಿಕ್ಕಮ್ಮ. ಬಸ್ಸು ಪೇಟೆಯ ಒಳಗೆ ಹೋಗಲು ಸಾಧ್ಯವಾಗದ ಕಾರಣ ಊರಿನಾಚೆಯೇ ನಿಂತಿತ್ತು. ಬಸ್ಸಿನಿಂದಿಳಿದ ಇವರಿಗೆ ಕಣ್ಣು ಕಟ್ಟಿ ಗೊಂಡಾರಣ್ಯದಲ್ಲಿ ಬಿಟ್ಟ ಅನುಭವ. ಎದುರಿಗೆ ಕಾವೇರಿಯ ಪ್ರವಾಹ. ಬಂದ ದಾರಿಗೆ ಸುಂಕವಿಲ್ಲದೆ ಮರಳಿ ಹೋಗುವುದೇ? ಅಥವಾ ಪ್ರವಾಹ ತಗ್ಗುವವರೆಗೆ ಕಾಯುವುದೇ? ಇಷ್ಟು ಹತ್ತಿರ ಬಂದ ಮೇಲೆ ಮಗಳ ಮನೆಗೆ ಹೋಗದೇ ಇರುವುದು ಹೇಗೆ? ನಿರ್ಧಾರ ಮಾಡುವಷ್ಟರಲ್ಲಿ ಬಸ್ಸಿನಿಂದಿಳಿದ ಇತರ ಪ್ರಯಾಣಿಕರು ಬಟ್ಟೆ ಮೇಲಕ್ಕೆ ಕಟ್ಟಿಕೊಂಡು ನೀರು ತುಂಬಿದ ರಸ್ತೆಯ ಮೇಲೆ ನಿಧಾನಕ್ಕೆ ಹೋಗುವುದು ಕಾಣಿಸಿತು. ಹತ್ತಿರದ ಅಂಗಡಿಯವರು ಗರಬಡಿದವರಂತೆ ನಿಂತಿದ್ದ ನನ್ನಜ್ಜಿ ಮತ್ತು ಚಿಕ್ಕಮ್ಮನನ್ನು ನೋಡಿ ಊರಿಗೆ ಹೊಸಬರು ಎಂದು ಅರ್ಥಮಾಡಿಕೊಂಡು, ‘ಯಾರ ಮನೆಗೆ ಹೋಗ್ಬೇಕು’ ಎಂದು ವಿಚಾರಿಸಿದರು. ಅಜ್ಜಿ ನನ್ನಪ್ಪನ ಹೆಸರು ಹೇಳಿದಾಕ್ಷಣ ಅಂಗಡಿಯವರು ‘ಹೋ.. ಡಾಕ್ಟ್ರ ಮನೆಗಾ.. ಹಾಗಿದ್ರೆ ನೀವು ಎರಡು ಕಡೆ ನೀರು ದಾಟ್ಬೇಕು. ನಿಲ್ಲಿ ಅವ್ರನ್ನು ಕರ್ಕೊಂಡ್ಬರ್ತೀನಿ. ಅಲ್ಲಿವರೆಗೆ ಕೂತಿರಿ’ ಎಂದು ಸ್ವತಃ ತಾವೇ ಅಪ್ಪನಿಗೆ ವಿಷಯ ತಿಳಿಸಲು ನೀರು ದಾಟಿದರು. ಅವರು ಮರಳಿ ಬರುವಾಗ ಅಪ್ಪನೂ ಜತೆಗಿದ್ದರು. ಅಜ್ಜಿಗೆ ಪರಿಚಿತ ಮುಖ ಕಂಡು ಹೋದಜೀವ ಮರಳಿ ಬಂದಂತಹ ಅನುಭವ. ಅಪ್ಪನ ಜತೆ ಅವರೂ ತಲೆಯ ಮೇಲೆ ಬ್ಯಾಗನ್ನೇರಿಸಿ ಸೊಂಟಮಟ್ಟದ ನೀರು ದಾಟಿ ಮನೆ ಕಡೆಗೆ ಹೆಜ್ಜೆ ಇಟ್ಟರು. ದಾರಿಯ ಅಮ್ಮ ಊರಿಗೆ ಹೋದ ಸುದ್ದಿಯೂ ತಿಳಿದು ಇನ್ನಷ್ಟು ಉತ್ಸಾಹವಿಹೀನರಾಗಿ ಒದ್ದಾ ಮುದ್ದಾ ಬಟ್ಟೆಯಲ್ಲಿ ನಡುಗುತ್ತಾ ಮನೆ ಸೇರಿದರು. ಬಟ್ಟೆ ಬದಲಿಸಿ ಬಂದವರಿಗೆ ಅಡುಗೆಯ ಸುಳಿವೂ ಇಲ್ಲದ ಅಡುಗೆಮನೆ ಕಂಡಿತ್ತು. ಅಪ್ಪ, ‘ಬಕಳಾಬಾತ್ ಮಾಡ್ತೇನೆ, ಅದು ತಿಂತೀರಲ್ವಾ?’ ಎಂದು ಕೇಳಿದರು. ವಾಂಗೀಬಾತಿನಂತೆ ಇದು ಯಾವುದೋ ಬಾತ್, ಬಿಸಿ ಬಿಸಿ ಹೊಟ್ಟೆಗಿಳಿದರೆ ನಡುಗುವ ಚಳಿಗೆ ಸಮಾಧಾನ ಎಂದುಕೊಂಡು ಅಜ್ಜಿ ತಲೆ ಅಲುಗಿಸಿದರು. ತಣ್ಣಗಿನ ಮೊಸರಿಗೆ ಒಂದಿಷ್ಟು ಉಪ್ಪು ಒಗ್ಗರಣೆ ಹಾಕಿ ಅದಕ್ಕೆ ಅವಲಕ್ಕಿ ಹಾಕಿ ಗೊಟಾಯಿಸಿ ತಟ್ಟೆಗೆ ಬಡಿಸಿದಾಗ ಅಜ್ಜಿಯ ಹಸಿವು ಅಳಿಯನ ಈ ನಳಪಾಕವನ್ನು ನೋಡಿಯೇ ಇಳಿದುಹೋಗಿತ್ತು. ಅಜ್ಜಿ ಅಪ್ಪನನ್ನು ಹೊರಗಟ್ಟಿ ತಾನೇ ಸೌಟು ಹಿಡಿದು ಅಡುಗೆ ಮುಗಿಸಿ ಬಿಸಿಬಿಸಿಯಾಗಿ ಊಟ ಬಡಿಸಿದರು. ಮರುದಿನ ಅಮ್ಮ ಮನೆ ಸೇರುವಲ್ಲಿಯವರೆಗೆ ಅಜ್ಜಿ ಚಿಕ್ಕಮ್ಮಂದಿರದ್ದೇ ಕೆಲಸ. ಇದ್ಯಾವುದರ ಅರಿವಿಲ್ಲದ ಅಮ್ಮ ಬೀಗದ ಕೈಯನ್ನು ತಡಕಾಡುತ್ತಾ ಮನೆಯ ಸಮೀಪ ಬಂದಾಗ ತೆರೆದೇ ಇದ್ದ ಮನೆಬಾಗಿಲು ಸ್ವಾಗತಿಸಿತ್ತು. ಅಚ್ಚರಿಯಿಂದ ಕಾಲಿಟ್ಟಾಗ ಅಕ್ಕಿ ಅಳೆಯುತ್ತಾ ಮತ್ತೊಂದು ಹಿಡಿ ಹೆಚ್ಚು ಅಕ್ಕಿ ಹಾಕುತ್ತಿರುವ ಅಜ್ಜಿ ಕಾಣಿಸಿದ್ದರಂತೆ. ಮನೆಗೊಬ್ಬ ಅತಿಥಿ ಬಂದರೆ ಅವನ ಜತೆ ಹೋಟೆಲ್ಲಿಗೆ ಹೋಗಿ ಹೊರಗಿನ ಊಟ ಉಂಡುಬಂದು, ಸ್ಟಾರ್ ಹೋಟೆಲಲ್ಲಿ ಊಟ ಕೊಡಿಸಿದೆ ಎನ್ನುವುದೇ ಅತಿಥಿ ಸತ್ಕಾರದ ಮಾನದಂಡವಾದ ಈ ಕಾಲದಲ್ಲಿ ಹಣ, ಸಮಯ ಎರಡನ್ನೂ ಉಳಿತಾಯ ಮಾಡುತ್ತಿದ್ದ ‘ಒಂದು ಹಿಡಿ ಅಕ್ಕಿ’ ಸದ್ದಿಲ್ಲದೇ ಅನಾವಶ್ಯಕ ದಂಡ ಎಂಬ ಹಣೆಪಟ್ಟಿ ಹಚ್ಚಿಕೊಂಡು ಹಿಂದೆ ಸರಿಯುತ್ತಿದೆ. ಯೋಚಿಸಿ... ಹಿಡಿ ಅಕ್ಕಿ ತೊಳೆದುಹಾಕಲು ಸಮಯವಿನ್ನೂ ಮಿಂಚಿಲ್ಲ. ಕೃಪೆ : ವಾಟ್ಸ ಆಪ್.

    ನೀತಿ :

ಐತಿಹಾಸಿಕ ಕಥೆಗಳು

  1. ಇದೊಂದು ಸ್ಪೂರ್ತಿದಾಯಕ ಕಥೆ


  2. ಹೇಗೆ ಸೊಷಿಯಲ್ ಮಿಡಿಯಾದಲ್ಲಿ ಹೆಚ್ಚು ನೆಗೆಟಿವ್ ವಿಚಾರಗಳು ಹರಿದಾಡುತ್ತವೆಯೋ ಮನಸ್ಸಿನಲ್ಲಿ ಕೂಡಾ ಹಾಗೆಯೇ. ಆದರೆ ಆಗೀಗ ಬಂದು ಹೋಗುವ ಪಾಸಿಟಿವ್ ವಿಚಾರಗಳು ಅದೆಷ್ಟು ಬಲವನ್ನು ಕೊಡುತ್ತವೆ ಅಲ್ಲವೇ? ಫ್ರಾನ್ಸಿನ ಈ ಮುಸ್ಲಿಂ ಮಹಿಳೆ ಜೀವನದಲ್ಲಿ ಏನಾದರೂ ಮಾಡಿ ತೋರಿಸಬೇಕು ಎನ್ನುವವರಿಗೆ ಅದೆಷ್ಟು ಪ್ರೇರಣೆ! ಇವಳ ಹೆಸರು Najat Vallaud-Belkacem. ಇಂದು ಇವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ. ಶಿಕ್ಷಣ ಇಲಾಖೆಗೆ ಮಂತ್ರಿಯಾಗಿ ಬಂದ ಮೊದಲ ಮಹಿಳೆಯಂತೆ. ಎಲ್ಲಾ ಹೌದು, ವಿಶೇಷ ಏನು? ಅದೇಕೆ ಪ್ರೇರಣೆ? ಇವಳ ತಂದೆ ತಾಯಿ ಆಗರ್ಭ ಶ್ರೀಮಂತರಲ್ಲ, ಕಡು ಬಡವರು. ತಂದೆ ಕನ್ಸ್ಟ್ರಕ್ಷನ್ ಕೆಲಸದ ಒಬ್ಬ ಕೆಲಸಗಾರ. ಮನೆಗೆ ನೆರವಾಗಲು ನಜತ್ ಚಿಕ್ಕಂದಿನಿಂದಲಿ ಕುರಿ ಕಾಯುವ ಕೆಲಸ ಮಾಡುತ್ತಿದ್ದಳಂತೆ. ನಂತರ ಕುಟುಂಬ ಹೊಟ್ಟೆ ಪಾಡಿಗೆ ಫ್ರಾನ್ಸಿಗೆ ವಲಸೆ ಬಂದಾಗ ಆಕೆಗೆ ಇನ್ನೂ ಚಿಕ್ಕ ವಯಸ್ಸು. ಅದು ಎಷ್ಟು ಪರಿಶ್ರಮದಿಂದ ಕಲಿತಳೋ ಅವಳಿಗೇ ಗೊತ್ತು. ಯಾವುದೇ ಸಹಾಯವಿಲ್ಲದೇ ಸ್ವಪ್ರಯತ್ನದಿಂದ ಫ್ರೆಂಚ್ ಕಲಿತು, ಪ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕಲ್ ಸೈನ್ಸ್’ನಿಂದ ಪದವಿ ಪಡೆದಳು. ನಂತರದಲ್ಲಿ ಸೋಷಿಯಲಿಸ್ಟ್ ಪಾರ್ಟಿಗೆ ಸೇರಿ ತನ್ನ ರಾಜಕೀಯ ಜೀವನ ಶುರು ಮಾಡಿದಳು. ಇಂದು ಅವಳಿಗೆ ಬರೀ ಮೂವತ್ತೆಂಟು ವರ್ಷ, ಅವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ! ಅವಳ ಜಾತಿ, ಬಡತನ, ಶೋಷಣೆ ಎಷ್ಟು ಎದುರಾದರೂ ಸೋಲಲಿಲ್ಲ. ಅವಳ ಒಂದು ಮಾತು ಬಹಳ ಚೆನ್ನಾಗಿದೆ. ನಜತ್ ಹೇಳುತ್ತಾರೆ, "ಯುವಜನತೆ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಭವಿಷ್ಯದ ಬಗ್ಗೆ ಚಿಂತೆ ಮಾಡುವುದಕ್ಕಿಂತ, ಅದರ ಭಾಗವಾಗಿ ಬದಲಾಯಿಸಬೇಕು. ಸುಮ್ಮನೆ ವೀಕ್ಷಕನಾಗಿ ಹತಾಷೆ ಪಡುವುದರಲ್ಲಿ ಅರ್ಥವಿಲ್ಲ". ಕುರಿ ಕಾಯುವವಳು ವಲಸೆಗಾರರಾಗಿ ಬಂದು, ಬಡತನದಲ್ಲಿ ಬೆಳೆದು, ಆ ದೇಶ - ಭಾಷೆಯನ್ನು ಕಲಿತು, ಸಮಾಜವನ್ನು ತನ್ನದಾಗಿಸಿಕೊಂಡು ಅದೇ ದೇಶದಲ್ಲಿ ಮಂತ್ರಿಯಾಗುವುದು ಸಹಜ ಸಾಧನೆಯಲ್ಲ. ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಎಂತಹ ಒಳ್ಳೆಯ ಉದಾಹರಣೆ. Najat Vallaud-Belkacem ನಮಗೆಲ್ಲರಿಗೂ ಮಾದರಿ

    ನೀತಿ :

  3. ಸ್ವಾಮಿ ವಿವೇಕಾನಂದ
  4. ಅಮೇರಿಕದೋಳೊಬ್ಬಳು ಪ್ರೊಪೋಸ್ ಮಾಡಿದಾಗ ಸ್ವಾಮಿ ವಿವೇಕಾನಂದ ನಡ್ಕೊಂಡ ರೀತಿ . ಒಂದ್ಸಲಿ ಸ್ವಾಮಿ ವಿವೇಕಾನಂದ ಹಿಂದೂ ಧರ್ಮದ ಬಗ್ಗೆ ಭಾಷಣ ಮಾಡಕ್ಕೆ ಅಮೇರಿಕಕ್ಕೆ ಹೋಗಿದ್ರಂತೆ. ಅವರ ಬುದ್ಧಿವಂತಿಕೆ ನೋಡಿ ನಿಬ್ಬೆರಗಾದ ಅಮೇರಿಕನ್ ಹೆಂಗಸೊಬ್ಬಳಿಗೆ ಒಂದು ವಿಚಿತ್ರವಾದ ಆಸೆ ಶುರುವಾಯಿತಂತೆ. ಹೋಗಿ ಕೇಳೇ ಬಿಟ್ಳಂತೆ, ‘ನನ್ನ ಮದುವೆ ಆಗ್ತೀರಾ?’ ಅಂತ. ಆಗ ವಿವೇಕಾನಂದರು ‘ಈ ಯೋಚನೆ ಯಾಕೆ ಬಂತು?’ ಅಂದ್ರಂತೆ. ಅದಕ್ಕೆ ಆಕೆ, ‘ನಿಮ್ಮ ಬುದ್ಧಿವಂತಿಕೆ ನೋಡಿ ನಾನು ಮೂಕವಿಸ್ಮಿತಳಾಗಿಬಿಟ್ಟಿದೀನಿ. ನನಗೆ ನಿಮ್ಮ ಥರಾನೇ ಒಂದು ಮಗು ಬೇಕು, ಕೊಡ್ತೀರಾ? ನನ್ನ ಮದುವೆ ಆಗ್ತೀರಾ?’ ಅಂದಳಂತೆ. ಆಗ ವಿವೇಕಾನಂದರು ಥಟ್ಟಂತ ಕೊಟ್ಟ ಉತ್ತರ ಹೀಗಿತ್ತಂತೆ: ‘ನಿಮ್ಮ ಆಸೆ ನನಗೆ ಅರ್ಥ ಆಯಿತು. ಆದರೆ ಅಂಥ ಒಂದು ಮಗೂನ ಹೆರೋದು... ಅದು ಬುದ್ಧಿವಂತವಾಗಿದೆಯೋ ಇಲ್ಲವೋ ಅಂತ ಅರ್ಥ ಮಾಡ್ಕೊಳೋದು... ಇದೆಲ್ಲ ಬಹಳ ದೊಡ್ಡ ಪ್ರಕ್ರಿಯೆ... ತುಂಬಾ ಸಮಯ ತೊಗೊಳೋ ಕೆಲಸ... ಕೊನೆಗೆ ಬೇಕಾದ ಫಲ ಸಿಗದೇನೂ ಇರಬಹುದು. ಆದ್ದರಿಂದ ಅದಕ್ಕಿಂತ ಒಳ್ಳೇ ಆಯ್ಕೆ ಕೊಡ್ತೀನಿ, ಕೇಳಿ: ನಿಮಗೆ ನನ್ನ ಥರ ಇರೋ ಬುದ್ಧಿವಂತ ಮಗು ಬೇಕು ತಾನೇ? ನಾನೇ ಇದೀನಲ್ಲ, ನನ್ನೇ ನಿಮ್ಮ ಮಗುವಾಗಿ ಸ್ವೀಕರಿಸಿಕೊಂಡು ಬಿಡಿ... ನನ್ನ ತಾಯಿಗೆ ಸಮಾನ ನೀವು... ಇದರಿಂದ ನಿಮ್ಮ ಆಸೆ ಈಡೇರಿ ನೆಮ್ಮದಿ ಸಿಗುತ್ತದೆ...’ ಉತ್ತರ ಕೇಳಿ ಆಕೆ ದಂಗಂತೆ! ಈ ಮೇಲಿನ ‘ಘಟನೆ’ ನಿಜವಾದ ಘಟನೆನೋ ಅಲ್ಲವೋ ಅನ್ನೋದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಇದು ಹಲವಾರು ಪುಸ್ತಕಗಳಲ್ಲಿ ಮುದ್ರಣ ಆಗಿದೆ. ನಿಜ ಅಲ್ಲದೆ ಹೋದರೂ ಘಟನೆಯಲ್ಲಿ ಬರೋ ವ್ಯಕ್ತಿಗೆ ವಿವೇಕಾನಂದರ ಅದ್ಭುತವಾದ ವ್ಯಕ್ತಿತ್ವವಂತೂ ಇದ್ದಂತಿದೆ. ಯಾಕೆ ಅಂತೀರಾ? 30-09-1893ನೇ ದಿವಸ ಬಾಸ್ಟನ್ ಈವನಿಂಗ್ ಟ್ರಾನ್ಸ್ಕ್ರಿಪ್ಟ್ ಅನೋ ಪೇಪರಲ್ಲಿ ತಮ್ಮ ಮದುವೇ ಪ್ಲಾನ್ ಬಗ್ಗೆ ಕೇಳಿದಾಗ ಅವರು ಕೊಟ್ಟ ಈ ಉತ್ತರ ಅಚ್ಚಾಗಿದೆ: ‘ಪ್ರತಿಯೊಬ್ಬ ಹೆಂಗಸಿನಲ್ಲೂ ನನಗೆ ಆ ದಿವ್ಯ ತಾಯಿ ಕಾಣುವಾಗ ನಾನೇಕೆ ಮದುವೆ ಆಗಲಿ? ನಾನು ಈ ತ್ಯಾಗಗಳನ್ನೆಲ್ಲ ಯಾಕೆ ಮಾಡುತ್ತಿದ್ದೇನೆ? ಭವಬಂಧನದಿಂದ ಪಾರಾಗಿ, ಎಲ್ಲಾ ಸಂಗಗಳಿಂದಲೂ ಮುಕ್ತನಾಗಿ, ಪುನರ್ಜನ್ಮ ಬಾರದಂತೆ ಮುಕ್ತಿ ಹೊಂದುವುದಕ್ಕೆ. ಸತ್ತ ಕೂಡಲೆ ದೇವರಲ್ಲಿ ಒಂದಾಗುವ ಆಸೆ ನನ್ನದು. ಬುದ್ಧನಾಗುವ ಆಸೆ ನನ್ನದು.’ (ಮೂಲ) ಇಂದ್ರಿಯನಿಗ್ರಹದಲ್ಲಿ ಇಷ್ಟು ಪಳಗಿರುವ ವ್ಯಕ್ತೀನೇ, ಇಂತಹ ಅದ್ಭುತವಾದ ಮುಮುಕ್ಷುವೊಬ್ಬನೇ ಆ ಅಮೇರಿಕದವಳಿಗೆ ಅಂಥ ಉತ್ತರ ಕೊಡಕ್ಕೆ ಸಾಧ್ಯ ಅನ್ನೋದರಲ್ಲಿ ಎರಡು ಮಾತಿಲ್ಲ.

    ನೀತಿ :

  5. ನಮಗೆ ಎಷ್ಟು ನಷ್ಟವಾದರೂ ಚಿಂತೆಯಿಲ್ಲ


  6. ಈ ಘಟನೆ ನಡೆದಿದ್ದು ಬಂಗಾಲದ ಬಾರಿಸಾಲಿನಲ್ಲಿ. ಲಾರ್ಡ್ ಕರ್ಜನ್ ಬಂಗಾಲವನ್ನು ವಿಭಜಿಸಿದ್ದ ದಿನಗಳು. ಈ ವಿಭಜನೆಯ ವಿರುದ್ಧ ದೇಶದ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದವು. ಬಾರಿಸಾಲಿನ ಲೋಕಪ್ರಿಯ ನಾಯಕ ಅಶ್ವಿನಿಕುಮಾರ ಸತ್ತರು ವಿದೇಶಿ ವಸ್ತುಗಳನ್ನು ಖರೀದಿಸದಂತೆ ಮತ್ತು ಮಾರದಂತೆ ಕರೆ ಕೊಟ್ಟಿದ್ದರು. ಈ ವಿಷಯ ಅಲ್ಲಿಯ ಆಂಗ್ಲ ಕಲೆಕ್ಟರನಿಗೆ ತಿಳಿಯಿತು. ದತ್ತಾರವರ ಈ ಯೋಜನೆ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಏಕೆಂದರೆ ವ್ಯಾಪಾರಿಗಳು ಲಾಭಕ್ಕಾಗಿ ವಿದೇಶಿ ವಸ್ತುಗಳನ್ನು ಮಾರಿಯೇ ಮಾರುತ್ತಾರೆ ಎಂದು ಯೋಚಿಸಿದ್ದ. ಒಂದು ದಿನ ಮ್ಯಾಂಚಿಸ್ಟರ್ ಬಟ್ಟೆ ಖರಿದಿಸಲು ಪತ್ನಿಯೊಂದಿಗೆ ಬಜಾರಿಗೆ ಬಂದ. ಆದರೆ ಯಾವ ಅಂಗಡಿಯಲ್ಲೂ ಮ್ಯಾಂಚಿಸ್ಟರ್ ಬಟ್ಟೆಯೇ ಸಿಗುತ್ತಿಲ್ಲ! ಎಲ್ಲವೂ ಸ್ವದೇಶಿ ಚಳುವಳಿಯ ಪರೀಣಾಮ!! ಕೊನೆಗೆ ಸಿಟ್ಟಿಗೆದ್ದು ಕಲೆಕ್ಟರ್ ಒಂದು ಪ್ರಸಿದ್ದ ಅಂಗಡಿಯ ಮಾಲೀಕನನ್ನು ಹಿಡಿದುಕೊಂಡು ಕೇಳಿದ "ನೀವೇಕೆ ಮ್ಯಾಂಚಿಸ್ಟರ್ ಬಟ್ಟೆಯನ್ನು ತರಿಸುತ್ತಿಲ್ಲ?" "ನಾವೇನೊ ತರಿಸಿದ್ದೆವು. ಆದರೆ...? " ಆದರೇನು ಎಲ್ಲಾ ಬಟ್ಟೆಯೂ ಮಾರಾಟವಾಯಿತೆ?" "ಇಲ್ಲ ಹಾಗೇನಿಲ್ಲ ಆ ಬಟ್ಟೆ ನಮ್ಮ ಉಗ್ರಾಣದಲ್ಲಿ ಹಾಗೇಯೇ ಬಿದ್ದಿದೆ. ನಾವು ಮಾರುತ್ತಿಲ್ಲವಷ್ಟೆ." "ಏಕೆ ಮಾರುತ್ತಿಲ್ಲ? ಮಾಲನ್ನು ಹಾಗೆಯೇ ಇಟ್ಟು ಕೊಂಡರೆ ನಿಮಗೆ ನಷ್ಟವಲ್ಲವೇ?" "ನಮಗೆ ಎಷ್ಟು ನಷ್ಟವಾದರೂ ಚಿಂತೆಯಿಲ್ಲ. ನಾವು ನಿಮ್ಮ ಬಟ್ಟೆಯನ್ನು ಮಾರಲಾರೆವು. ಏಕೆಂದರೆ ಬಂಗಾರದಂತಹ ನಮ್ಮ ಬಂಗಾಲವನ್ನು ನೀವು ತುಂಡು ಮಾಡಿದ್ದೀರಿ . ನಿಮ್ಮ ಈ ಕೃತ್ಯದ ವಿರುದ್ಧ ನಾವು ವ್ಯಾಪಾರಿಗಳೂ ವಿದೇಸದಿ ವಿರುದ್ಧದ ಆಂದೋಲನದಲ್ಲಿ ಭಾಗಿಯಾಗಿದ್ದೇವೆ. ನಮ್ಮ ಬಂಗಾಲ ಒಂಒಂದಾಗುವ ತನಕ ನಮ್ಮ ಗೋದಾಮಿನಿಂದ ವಿದೇಶಿ ಬಟ್ಟೆ ಹೊರಗೆ ಬಾರದು" ಕಲೆಕ್ಟರ್ ತೆಪ್ಪಗೆ ಬಟ್ಟೆ ಖರಿದಿಸದೆ ಮನೆಗೆ ತೆರಳಿದ. ನಂತರ ಹಲವಾರು ದಿನ ಈ ಭಹಿಷ್ಕಾರ ಮುಂದುವರೆಯಿತು. ಬಾರಿಸಾಲಿನ ವ್ಯಾಪಾರಿಗಳು ತಮ್ಮ ನಷ್ಟದ ಬಗ್ಗೆ ಯೋಚಿಸದೇ ಚಳುವಳಿಯನ್ನು ಬಲಪಡಿಸಿದರು. ಪರಿಣಾಮ ಬಂಗಾಲದ ವಿಭಜನೆ ರದ್ದಾಯಿತು. ಸಂಘಟಿತ ಹೋರಾಟ, ಬದ್ಧತೆಯ ಕಾರಣ ಆಂಗ್ಲ ಸರ್ಕಾರ ಭಾರತೀಯರ ಮುಂದೆ ತಲೆ ಬಾಗಬೇಕಾಯಿತು.

    ನೀತಿ :

  7. ಭಾರತದಲ್ಲಿ ಬ್ರಿಟಿಷ್ ರ ಆಳುವಿಕೆ ಇದ್ದಾಗ ಬ0ಗಾಲ ದೇಶದಲ್ಲಿ ನಡೆದ ಒ0ದು ಸತ್ಯ ಘಟನೆ


  8. ಅಲ್ಲಿ ಕೊಲ್ಕತ್ತಾ ಪಟ್ಟಣಕ್ಕೆ ತಲುಪುವ ದೊಡ್ಡ ರೈಲು ಮಾರ್ಗ ಹಾದಿದೆ. ಮಾರ್ಗ ಮಧ್ಯ ಇರುವ ಚಿಕ್ಕ ನದಿಗೆ ಸೇತುವೆಯನ್ನು ಕಟ್ಟಲಾಗಿದೆ. ಆ ಸೇತುವೆ ಸಮೀಪ ನದಿಯ ದಡದಲ್ಲಿ ಬಡವರ ಒ0ದು ಗುಡಿಸಲು. ಅದರಲ್ಲಿ ಒಬ್ಬ ತಾಯಿ ಮಗಳು ವಾಸವಾಗಿದ್ದರು.ಅದು ಅರಣ್ಯ ಪ್ರದೇಶ.ಸಮೀಪದಲ್ಲಿ ಯಾವ ಗ್ರಾಮವೂ ಇರಲಿಲ್ಲ. ಒ0ದು ರಾತ್ರಿ ಧಾರಾಕಾರ ಮಳೆ.ಒ0ದೆರಡು ತಾಸಿನ ನ0ತರ ಮಳೆ ಕಡಿಮೆಯಾಯ್ತು .ಅಷ್ಟೊತ್ತಿಗೆ ಗುಡಿಸಲೆಲ್ಲಾ ನೀರಾಯ್ತು .ಇರುವ ಒ0ದೆರಡು ಹಾಸಿಗೆ ಹೊದಿಕೆಗಳೂ ನೆನೆದವು.ಮಲಗುವಷ್ಟೂ ಒಣಗಿದ ಸ್ಥಳವಿರಲಿಲ್ಲ.ಮಧ್ಯದಲ್ಲಿ ಒ0ದು ಒಲೆಯನ್ನು ಹೊತ್ತಿಸಿ ಅದರ ಸುತ್ತ ತಾಯಿ ಮಗಳು ಕೂತಲ್ಲೇ ತೂಕಡಿಸುತ್ತಿದ್ದರು.ಇದ್ದಕ್ಕಿದ್ದ0ತೆ ಹೊರಗೆ ಭಯ0ಕರ ಸದ್ದಾಯಿತು. *ಇದೇನಿದು* ಎ0ದು ಮಗಳು ಹೊರಗೆ ಬ0ದು ನೋಡಿದಳು.ಮಿ0ಚಿನ ಬೆಳಕಿನಲ್ಲಿ ನದಿಗೆ ಅಡ್ಡಲಾಗಿದ್ದ ಸೇತುವೆ ಕುಸಿದು ಬಿದ್ದದ್ದು ಕ0ಡಿತು ! ಮಗಳು ತಾಯಿಗೆ ಹೇಳಿದಳು, ಅಮ್ಮಾ ಇಷ್ಟರಲ್ಲೇ ಸಾವಿರಾರು ಜನರನ್ನು ತುಂಬಿಕೊ0ಡು ರೈಲು ಬರಲಿದೆ. ಈ ರಾತ್ರಿ ಅವರಿಗೆ ಸೇತುವೆ ಕುಸಿತದ್ದು ಕಾಣದೇ ಹೋದರೆ ಎ0ಥ ಭಯ0ಕರ ಅಪಘಾತವಾಗುತ್ತೆ ! ಇದನ್ನು ಹೇಗಾದರೂ ಮಾಡಿ ತಪ್ಪಿಸಲೇಬೇಕು. ತಾಯಿ ಹೇಳಿದಳು, ಹೌದು ಮಗಳೇ ನಾವೇನು ಮಾಡಬಲ್ಲೆವು ? ಒ0ದು ಕಟ್ಟಿಗೆಗೆ ಬಟ್ಟೆಯನ್ನು ದೀವಟಿಗೆ ಮಾಡಿ ತೋರಿಸಬಹುದಲ್ಲಾ ! ಅ0ದಳು ಮಗಳು. ಸರಿ ಮಗಳೇ , ಒಣಗಿದ ಬಟ್ಟೆ ಎಲ್ಲಿದೆ ? ಎ0ದಳು ತಾಯಿ. ಅಮ್ಮಾ ನನ್ನ ಮೈಮೇಲಿರುವ ಬಟ್ಟೆಯು ಒಣದಾಗಿಯೇ ಇದೆಯಲ್ಲಾ ! ಎ0ದಳು ಮಗಳು ಅವಳ ಹೃದಯ ಸಿರಿಗೆ ತಾಯಿ ತಕ್ಷಣ ಒಪ್ಪಿದಳು.ಮಗಳು ತನ್ನ ಮೈಮೇಲಿದ್ದ ಮಾನದ ಬಟ್ಟೆಯನ್ನು ಒ0ದು ಕಟ್ಟಿಗೆಗೆ ಕಟ್ಟಿ ಉರಿಸಿದಳು.ಆ ದೀವಟಿಗೆಯನ್ನು ಕೈಯಲ್ಲಿ ಹಿಡಿದು ತಾಯಿ ಮಗಳು ಕೂಡಿ ಕಾಣದ ಬ0ಧುಗಳ ಪ್ರಾಣವನ್ನು ಉಳಿಸಲು ರೈಲಿಗೆ ಎದುರಾಗಿ ದಾರಿಯನ್ನು ಹಿಡಿದು ನಡೆದರು. ರೈಲು ಬರುವುದು ಒ0ದೆರಡು ನಿಮಿಷ ಉಳಿದಿತ್ತು.ಅಷ್ಟರಲ್ಲೇ ಕೈಯೊಳಗಿನ ದೀವಟಿಗೆ ನ0ದುವ0ತಾಯ್ತು .ತತ್ ಕ್ಷಣ ತಾಯಿ ತನ್ನ ಬಟ್ಟೆಯನ್ನೂ ದೀವಟಿಗೆಗೆ ಕಟ್ಟಿ ಉರಿಸಿ ಕೈಯಲ್ಲಿ ಹಿಡಿದು ಬೀಸಿದಳು. ಚಾಲಕ ರೈಲು ನಿಲ್ಲಿಸಿದ. ಸೇತುವೆ ಬಿದ್ದು ಹೋಗಿರುವುದನ್ನು ನೋಡಿ ತಾಯಿ ಮಗಳ ತ್ಯಾಗಕ್ಕೆ ತಲೆಬಾಗಿದ.ರೈಲಿನಲ್ಲಿದ್ದ ಸಾವಿರ-ಸಾವಿರ ಜನರು ಆ ತಾಯಿ ಮಗಳಿಗೆ ಬಟ್ಟೆಯನ್ನು ಉಡಿಸಿ ಗೌರವಿಸಿದರು.ಹಾಡಿ ಹರಸಿದರು.ಆಗಿನ ಆ0ಗ್ಲ ಅಧಿಕಾರಿಗಳೂ ಆ ತಾಯಿ ಮಗಳನ್ನು ಸ0ತಸದಿ0ದ ಸತ್ಕರಿಸಿದರು.. ಹೊಟ್ಟೆಗೆ ಹಿಟ್ಟು, ಮೈಗೆ ಬಟ್ಟೆ ಇಲ್ಲದಿದ್ದರೂ ಎ0ಥಾ ಹೃದಯವ0ತರು ಈ ನಮ್ಮ ದೇಶದಲ್ಲಿ ಬದುಕಿದರು !!!! ಅದೇ ದೇಶದಲ್ಲಿ ನಾವೂ ಬದುಕಿದ್ದೇವೆ ಎನ್ನುವುದೇ ಒ0ದು ಹೆಮ್ಮೆಯ ವಿಷಯ !!!! ಆ ತಾಯಿ ಮಗಳ ತ್ಯಾಗದ ಚಿತ್ರ ನಮಗೆ ಆದರ್ಶವಾದಲ್ಲಿ ಭಾರತ ಎಷ್ಟು ಭವ್ಯವಾದೀತು ?!!!!!

    ನೀತಿ :

  9. ಅಹಂಭಾವ
  10. ‘ಫಿಲಿಬ್’ ನು ಮೆಸೆಡೋನಿಯಾ ರಾಜ್ಯದ ದೊರೆ ಆಗಿದ್ದ. ಅವನು ಅಲೆಗ್ಜಾಂಡರ್ ನ ತಂದೆ. ಅಥೆನ್ಸ್ ಪಟ್ಟಣದ ಸುತ್ತಮುತ್ತ ಸುವಿಸ್ತಾರ ರಾಜ್ಯ ಕಟ್ಟಿದ್ದ. ಅಪಾರ ಸಿರಿ ಸಂಪದವಿತ್ತು ಯಾವುದಕ್ಕೂ ಏನೂ ಕೊರತೆ ಇರಲಿಲ್ಲ. ಮಹಾಶೂರ, ವೀರ, ಧೀರನೆಂಬ ಬಿರುದಾಂಕಿತನಾಗಿದ್ದ. ಅಂಥ ಫಿಲಿಬ್ ದೊರೆ ತಾನು ಮಲಗುವ ಕೋಣೆಯ ಮೇಲೆ ಒಂದು ಫಲಕ ಹಾಕಿದ್ದ. “ನೆನಪಿರಲಿ; ನೀನು ಮನುಷ್ಯ ಮಾತ್ರ!” ಎಂದು ಅದರ ಮೇಲೆ ಬರೆಯಲಾಗಿತ್ತು. ಪ್ರತಿನಿತ್ಯ ಮಲಗುವಾಗ ಫಿಲಿಬ್ ದೊರೆ ಅದನ್ನು ಓದಿ, ಸ್ವಲ್ಪ ಹೊತ್ತು ಅದರ ಮೇಲೆ ಚಿಂತನೆ ಮಾಡಿ ಮಲಗುತ್ತಿದ್ದ. ಒಂದು ದಿನ ಮಗ ಅಲೆಗ್ಜಾಂಡರ್ ಕೇಳಿದ; “ತಂದೆಯೇ, ನೀವು ಬರೆಯಿಸಿರುವ ಈ ಫಲಕದ ಉದ್ದೇಶವೇನು?” ಫಿಲಿಬ್ ಹೇಳಿದ “ನಾನು ಎಲ್ಲರಿಗಿಂತ ವಿಶೇಷನೆಂಬ ಅಹಂಭಾವ ಮೂಡದಿರಲಿ” ಎಂಬುದೇ ಅದರ ಉದ್ದೇಶ.

    ನೀತಿ :

ನಿಗೂಢ ಕಥೆಗಳು

  1. ಅವಳ ಸಮಾಧಿ
  2. ಜನ ಏಕೆ ಈ ತರ ನನ್ನ ನೋಡ್ತಾ ಇದಾರೆ ಅಂತ ಗೊತ್ತಾಗ್ತಾನೇ ಇಲ್ಲ. ಹೌದು ನಾನೇನೋ ತಪ್ಪು ಮಾಡಿದಿನಿ ಅನ್ನೋತರ ನನ್ನ ನೋಡ್ತಿದಾರೆ, ನಾನಿಲ್ಲಿ ಸ್ಮಶಾನದಲ್ಲಿ ಒಂಟಿಯಾಗಿ ನಿಂತಿದ್ದೇನೆ, ನನ್ನ ಕಣ್ಣೀರ ಜೊತೆ ಮಳೆಹನಿಗಳೂ ಸಹ ಒಂದಾಗಿ ಕಣ್ಣೀರು ಸುರಿಸುತ್ತಿವೆ, ಅವಳ ಸಮಾಧಿ ಮುಂದೆ ನಿಂತ ನನಗೆ ದುಃಖ ನಿಲ್ಲುತ್ತಿಲ್ಲ, ಈ ಜನರಿಗೆ ನನ್ನ ಬಗ್ಗೆ ಅನುಕಂಪವೋ ವ್ಯಂಗ್ಯವೋ ತಿಳಿಯುತ್ತಿಲ್ಲ. ಕಣ್ಣು ಬಿಟ್ಟಂತೆಯೇ ನನ್ನ ಕಡೆ ತಾತ್ಸಾರದಿಂದ ನೋಡುತ್ತ ಊರಕಡೆ ತೆರಳುತ್ತಿದ್ದಾರೆ. 'ಜನರೆಲ್ಲಾ ಕೇಳುತ್ತಿದ್ದರು ನಿನಗೂ ಅವಳಿಗೂ ಏನು ಸಂಬಂಧ. ?' ಎಂದು ಅವರಿಗೇನು ಗೊತ್ತು ಹೆಸರೇ ಇಲ್ಲದ ಸಂಬಂಧಗಳು ನೂರೆಂಟಿವೆ ಎಂದು? ಅವರಾರಿಗೂ ನಾನು ಅವಳ ಮನೆಗೆ ಹೋಗುವುದು ಇಷ್ಟ ಇರಲಿಲ್ಲ, ಹಲವಾರು ಜನರ ಬಾಯಲ್ಲಿ ನಮ್ಮ ಬಗ್ಗೆ ತರಾವರಿ ಕಥೆಗಳು ಹುಟ್ಟಿಕೊಂಡಿವೆ.ಅವಳು ಈಗ ಇದ್ದಿದ್ದರೆ ಏನೆಂದುಕೊಳ್ಳುತ್ತಿದ್ದಳೋ? ಅವಳೀಗ ಚಿರ ನಿದ್ರೆಗೆ ಜಾರಿದ್ದಾಳೆ, ಬಹುಷಃ ಅವಳ ಸಾವಿಗೆ ನಾನೂ ಕೂಡ ಕಾರಣವಾಗಿದ್ದೆ. !. ಮೊನ್ನೆ ಸಂಜೆ ನನಗೆ ತುಂಬಾ ಜ್ವರ ಎದ್ದೇಳಲೂ ಸಹ ಆಗದಂತಹ ಕೈಕಾಲು ನೋವು, ನಾನವಳ ಮನೆಯ ಹಾಸಿಗೆಯಲ್ಲಿದ್ದೆ. ರಾತ್ರಿ ಎಂಟು ಗಂಟೆಯಾದರೂ ಅವಳ ಸುಳಿವಿಲ್ಲ. ಬಹುಷಃ ಡಾಕ್ಟರ್ ರನ್ನು ಕರೆತರಲು ಹೋಗಿರಬಹುದು, ಹೊರಗೆ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು, ಬೆಳಕಾದರೂ ಅವಳು ಬರಲಿಲ್ಲ. ಆದರೆ ಸುದ್ದಿ ಬಂತು ಅವಳು ಸಿಡಿಲ ಹೊಡೆತಕ್ಕೆ ಸಿಕ್ಕಿ ಸತ್ತಳೆಂದು.ನಿಂತ ನೆಲವೇ ಕುಸಿದುಹೋದ ಅನುಭವ ನನಗೆ. ಅವಳ ಅಂತ್ಯ ಸಂಸ್ಕಾರಕ್ಕೆ ಬಂದ ಜನ ಸಾವಿರಾರು ಬಗೆ ಬಗೆಯಾಗಿ ನಮ್ಮ ಆಡಿಕೊಂಡರು ಅವಳನ್ನು ಸಮಾಧಿ ಮಾಡಿದ ಬಳಿಕ ಎಲ್ಲರೂ ಹೋದರೂ ನನಗೆ ಅಲ್ಲಿಂದ ಹೊರಡಲು ಮನಸ್ಸಾಗಲಿಲ್ಲ. ಅವಳ ಅಗಲಿಕೆಯ ನೋವಿನಿಂದ ಹೊರ ಬಾ ಎಂದು ಸಂತೈಸುವಂತೆ ಮಳೆ ಬೀಳುತ್ತಿದೆ. ಸ್ಮಶಾನದಲ್ಲಿ ನನ್ನ ಹೊರತುಪಡಿಸಿ ಯಾರೂ ಇಲ್ಲ , ರಾತ್ರಿಯಾಗುತ್ತಾ ಮಳೆ ಹೆಚ್ಚಾಯಿತು.ಆ ಮಂದ ಬೆಳಕಿನಲಿ ಭಾರವಾದ ಹೆಜ್ಜೆಗಳನ್ನಿಡುತ್ತ ಸ್ಮಶಾನದ ಗೇಟ್ ಬಳಿಯತ್ತ ನಡೆಯುತ್ತಿದ್ದೆ. ಅರೇ ಅದೇನಾಶ್ಚರ್ಯ !! ಯಾವುದೋ ಸಮಾಧಿಯೊಳಗಿದ್ದ ದೇಹವೊಂದು ಮೇಲೆ ಬಂದು ತನ್ನ ಸಮಾಧಿ ಮೇಲೆನೋ ಬರೆಯುತ್ತಿತ್ತು. ಹೌದು ಸ್ಪಷ್ಟವಾಗಿ ಕಾಣಿಸುತ್ತಿದೆ "ವ್ಯವಹಾರದಲ್ಲಿ ನಷ್ಟವಾಗಿ ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡು ಸತ್ತೆ " ಎಂದು ಬರೆಯಿತು, ನಾನು ಸುತ್ತಾ ಕಣ್ಣಾಡಿಸಿದೆ ಪ್ರತಿಯೊಂದು ಸಮಾಧಿಯಿಂದ ದೇಹಗಳು ಹೊರ ಬಂದು ತನ್ನ ಸಾವಿನ ಕಾರಣವನ್ನು ಬರೆಯುತ್ತಿದ್ದವು. ನನಗೆ ತಕ್ಷಣ ಅವಳ ನೆನಪಾಯಿತು, ಅವಳಿರುವ ಸಮಾಧಿಯ ಕಡೆ ಓಡಿದೆ. ಹೌದು ಅವಳ ದೇಹ ಕೂಡ ಎದ್ದು ತನ್ನ ಸಾವಿನ ಕಾರಣವನ್ನು ಬರೆಯುತ್ತಿತ್ತು. "ನನ್ನ ಪ್ರೀತಿಸುವ ಹುಡುಗನಿಗೆ ಮೋಸಮಾಡಿ ಬೇರೊಬ್ಬನನ್ನು 'ಸೇರಿ' ಹಿಂತಿರುಗಿ ಬರುವಾಗ ಸಿಡಿಲುಬಡಿದು ಸತ್ತೆ" ಎಂದು ಅದು ಬರೆಯಿತು. ಅದನ್ನು ಓದಿ ಮುಗಿಸಿದ ಮೇಲೆ ನನಗಲ್ಲಿ ನಿಲ್ಲಲಾಗಲಿಲ್ಲ........

    ನೀತಿ :

ಮಕ್ಕಳ ಕಥೆಗಳು

  1. ಪುಟ್ಟ ಹುಡುಗಿಯ ಜಾಣತನ


  2. ಮಾಲೂರು ಎಂಬ ಪುಟ್ಟ ಊರಿನಲ್ಲಿ ಪ್ರಗತಿ ಎಂಬ ಪುಟ್ಟ ಹುಡುಗಿ ಇದ್ದಳು. ತರಗತಿಯಲ್ಲಿ ಓದು, ಆಟೋಟ ಸ್ಪರ್ಧೆಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದಳು. ಆದರೆ ಅವಳಿಗೆ ಒಂದು ಬೇಸರದ ಸಂಗತಿಯೇನೆಂದರೆ ಅವಳ ಅಪ್ಪ, ಅಮ್ಮ ಪ್ರತಿದಿನ ಒಂದಲ್ಲ ಒಂದು ಕಾರಣ ತೆಗೆದು ಅಕ್ಕ ಪಕ್ಕದವರಿಗೆಲ್ಲ ಕೇಳಿಸುವ ಹಾಗೆ ಜಗಳವಾಡುತ್ತಿದ್ದರು. ಅದು ಅವಳನ್ನು ಗೆಳತಿಯರ ಮುಂದೆ ತಲೆತಗ್ಗಿಸುವಂತೆ ಮಾಡುತ್ತಿತ್ತು. ಮನೆಯಲ್ಲಿರುವುದಕ್ಕೂ ಕಿರಿಕಿರಿಯಾಗಿ ತೊಂದರೆಯಾಗುತ್ತಿತ್ತು. ಇದರಿಂದ ನೊಂದ ಪ್ರಗತಿ ತನಗೆ ತಿಂಡಿ, ಊಟ ಏನೂ ಬೇಡವೆಂದು ಅಮ್ಮನ ಬಳಿ ಹಠ ಹಿಡಿದಳು. ಅಮ್ಮ ಮುದ್ದು ಮಾಡುತ್ತಾ, ‘ನೀನು ಜಾಣ ಮರಿ ಅಲ್ವ, ಹಠ ಮಾಡಬಾರದು ಪುಟ್ಟ’ ಎನ್ನುತ್ತಾ ಅವಳಿಗಿಷ್ಟವಾದ ತಿಂಡಿಯನ್ನು ತಿನ್ನಿಸಲು ಮುಂದಾದರು. ಪ್ರಗತಿ ಬೇಡವೆಂದಾಗ ಅಮ್ಮ, ‘ಏನಾಯಿತು ನನ್ನ ಮುದ್ದು ಮರಿಗೆ?’ ಎಂದು ಮುದ್ದಿಸುತ್ತಾ ಪ್ರಶ್ನಿಸಿದರು. ಅದಕ್ಕೆ, ‘ಅಪ್ಪ -ನೀನು ಸದಾ ಜಗಳ ಕಾಯುತ್ತೀರಿ. ಪಕ್ಕದ ಮನೆ ಆಂಟಿ, ಅಂಕಲ್ ಮತ್ತೆ ನನ್ನ ಫ್ರೆಂಡ್ಸ್ ಎಲ್ಲಾ ಆಡಿಕೊಳ್ಳುತ್ತಾರೆ. ನಿನ್ನಮ್ಮ ಜಗಳಗಂಟಿ, ನಿಮ್ಮಪ್ಪ ಕೋಪಿಷ್ಟ ಎನ್ನುತ್ತಾರೆ. ಇದರಿಂದ ನನಗೆಷ್ಟು ನೋವಾಗುತ್ತೆ ಗೊತ್ತಾ?’ ಎಂದಳು. ತಾಯಿ ಕಂಗಳಲ್ಲಿ ನೀರು ತುಂಬಿಕೊಂಡು, ‘ಹೌದು ಪುಟ್ಟ, ಆದರೆ ನಿಮ್ಮಪ್ಪ ಸಣ್ಣ ಪುಟ್ಟದ್ದಕ್ಕೆಲ್ಲ ರೇಗುತ್ತಾರೆ. ಶಾರ್ಟ್ ಟೆಂಪರ್. ನಾನು ಸಹ ಎಷ್ಟು ದಿನ ಎಂದು ಸಹಿಸಿಕೊಳ್ಳಲಿ. ನನಗೂ ತಾಳ್ಮೆಗೆಟ್ಟು ಕೋಪ ಉಕ್ಕುತ್ತದೆ. ನನ್ನ ತಾಳ್ಮೆಗೂ ಒಂದು ಮಿತಿಯಿದೆಯಲ್ಲವೆ?’ ಎಂದರು. ಅರ್ಥವಾದವಳಂತೆ ಪ್ರಗತಿ, ‘ಸಾರಿ ಮಮ್ಮಿ’ ಎಂದಳು ಕಣ್ಣೀರು ಒರೆಸುತ್ತಾ. ಅಪ್ಪನ ಬಳಿ ಕೇಳಿದಾಗ ಅವರು ಅದೇ ಉತ್ತರ ನೀಡಿ ನುಣುಚಿಕೊಂಡರು. ಸ್ವಲ್ಪ ದಿನದ ನಂತರ ಅಪ್ಪನ ಬಳಿ, ‘ಪಪ್ಪಾ, ನನಗೆ ಆಟವಾಡಲು ಒಂದು ನಾಯಿ ಮರಿ ತನ್ನಿ ಪ್ಲೀಸ್’ ಎಂದು ಗೋಗರೆದಳು. ಮರುದಿನ ಸಂಜೆ ಒಂದು ಶ್ವೇತವರ್ಣದ ಬಹು ಸುಂದರವಾದ ಮುದ್ದಾದ ನಾಯಿ ಮರಿಯೊಂದಿಗೆ ಬಂದ ಪಪ್ಪನಿಗೆ ಮುತ್ತು ನೀಡಿ ಅದನ್ನೆತ್ತಿಕೊಂಡು ಆಟವಾಡಲು ಹೋದಳು. ಆದರೆ ಬರಬರುತ್ತಾ ಅದನ್ನು ತುಂಬಾ ಕೀಟಲೆ ಮಾಡಿ, ಗೋಳಾಡಿಸುತ್ತಿದ್ದಳು. ಊಟ ಮಾಡುತ್ತಿದ್ದರೆ ಅದರ ಊಟ ಕಿತ್ತುಕೊಳ್ಳುತ್ತಿದ್ದಳು. ಇದರಿಂದ ಅದಕ್ಕೆ ಹಿಂಸೆಯಾಗುತ್ತಿತ್ತು. ಇದನ್ನು ಗಮನಿಸಿದ ಅಪ್ಪ, ಹಾಗೆಲ್ಲಾ ಮಾಡಬಾರದೆಂಬ ಎಚ್ಚರಿಕೆಯನ್ನೂ ನೀಡಿದರು. ಆದರೂ ಬುದಿಟಛಿ ಮಾತಿಗೆ ಜಗ್ಗದೆ ಮತ್ತದೇ ತಪ್ಪನ್ನೆಸಗುತ್ತಿದ್ದಳು. ಇದರಿಂದ ಬೇಸತ್ತ ನಾಯಿಮರಿ ಅವಳ ಬಲಗೈಯನ್ನು ಬಲವಾಗಿ ಕಚ್ಚಿತು. ಅಳುತ್ತಾ ಬಂದು ನಾಯಿಮರಿ ಕಚ್ಚಿದ ವಿಷಯವನ್ನು ಅಪ್ಪ ಅಮ್ಮನಿಗೆ ತಿಳಿಸಿದಳು. ಗಾಬರಿಗೊಂಡ ಅಮ್ಮ ಮತ್ತು ಅಪ್ಪ ಪ್ರಗತಿಯನ್ನೂ ನಾಯಿಮರಿಯನ್ನೂ ವೈದ್ಯರ ಬಳಿ ಕರೆದೊಯ್ದರು. ನಾಯಿಮರಿ ಮತ್ತು ಅವಳನ್ನು ಸಂಪೂರ್ಣವಾಗಿ ಪರೀಕ್ಷಿಸಿದ ವೈದ್ಯರು, ‘ಅದಿನ್ನೂ ಪುಟ್ಟ ಮರಿ, ಹಲ್ಲುಗಳ ಗುರುತೇನೂ ಇಲ್ಲ. ಹೆದರುವ ಅವಶ್ಯಕತೆಯಿಲ್ಲ’ ಎಂದು ಔಷಧಿನೀಡಿ ಕಳುಹಿಸಿದರು. ಪ್ರಗತಿ ಮನೆಗೆ ಬಂದವಳೇ ಮತ್ತೆ ಅದನ್ನು ಕೀಟಲೆ ಮಾಡಲು ಶುರುಮಾಡಿದಳು. ಇದರಿಂದ ಸಿಟ್ಟಿಗೆದ್ದ ಅಪ್ಪ ಬೈದು ನಾಲ್ಕು ಪೆಟ್ಟು ಕೊಟ್ಟರು. ‘ಅದರ ಪಾಡಿಗೆ ಅದನ್ನು ಬಿಡು, ನಾವು ಸದಾ ಕೀಟಲೇ ಮಾಡಿದರೆ ಅಲ್ಲವೇ ರೊಚ್ಚಿಗೆದ್ದು ಕಚ್ಚುವುದು?’ ಎಂದರು. ‘ಹೌದಾ ಪಪ್ಪಾ, ಮತ್ತೆ ನೀನು- ಅಮ್ಮಾ ಸದಾ ಯಾವಾಗಲು ಜಗಳ ಕಾಯುತ್ತೀರಿ. ನೀನು ಸಣ್ಣ ಪುಟ್ಟ ವಿಷಯಕ್ಕೂ ರೇಗುತ್ತಿ. ಅವಳಿಗೂ ತಾಳ್ಮೆಗೆಡುವುದಿಲ್ಲವೆ? ಅದಕ್ಕೆ ಹಾಗೆ ವರ್ತಿಸುತ್ತಾಳೆ ಅಲ್ಲವೇ’ ಎಂದು ತನಗಾಗುವ ಅವಮಾನ ಮತ್ತು ತೊಂದರೆಗಳನ್ನು ವಿವರಿಸಿದಳು. ‘ಪ್ರಾಣಿಗಳಿಗೆ ಪ್ರೀತಿ ಕೊಟ್ಟರೆ ಅವು ಪ್ರೀತಿ ನೀಡುತ್ತವೆ ಅಲ್ಲವೇ? ಅದಕ್ಕೆ ನಾನು ತೊಂದರೆ ಕೊಡದಿದ್ದರೆ ಅದೇಕೆ ನನ್ನನ್ನು ಕಚ್ಚುತ್ತಿತು? ಹಾಗೆಯೆ ಅಮ್ಮನೂ ಸಹ’ ಎಂದು ತನ್ನ ಅಭಿಪ್ರಾಯ ವ್ಯಕ್ತ ಪಡಿಸಿದಾಗ. ಹತ್ತು ನಿಮಿಷದ ನಂತರ ಯೋಚಿಸಿದ ಅಪ್ಪ, ‘ಹೌದು ಮಗು, ನೀನು ಹೇಳಿದ್ದು ನಿಜ. ಪ್ರೀತಿ ಕೊಟ್ಟರೆ ನಮಗೆ ಪ್ರೀತಿಯೇ ಬಳುವಳಿಯಾಗುತ್ತದೆ. ಮತ್ತಿನ್ನೆಂದೂ ಜಗಳವಾಡೋಲ್ಲ’ ಎಂದರು. ಪ್ರಗತಿ ಖುಷಿಯಿಂದ ಮುಖವರಳಿಸಿ, ‘ನಿಜವಾಗ್ಲೂ, ಪ್ರಾಮಿಸ್?’ ಎಂದಳು ಅಮ್ಮನ ಮುಖ ನೋಡುತ್ತಾ. ಅಪ್ಪ, ‘ಹೌದು ಪುಟ್ಟಾ’ ಎನ್ನುತ್ತಾ ಮುಂದೆ ಬಾಗಿ ಪ್ರಗತಿಯ ಪುಟ್ಟ ಕೈಗಳಿಗೆ ಮುತ್ತ ನೀಡಿದರು. ನಂತರ ಅಮ್ಮನೂ ಬಂದು ಅವರಿಬ್ಬರ ಕೈ ಮೇಲೆ ತನ್ನ ಕೈಯಿಟ್ಟು ‘ನಾನು ಸಹ ಇನ್ಮುಂದೆ ಬದಲಾಗುತ್ತೇನೆ, ವಾದ ಮಾಡುವುದಿಲ್ಲ’ ಎಂದು ಪ್ರಾಮಿಸ್ ಮಾಡಿದರು. ಅಲ್ಲಿಗೆ ಬಂದ ನಾಯಿಮರಿ ತನ್ನ ಇರವನ್ನು ಸೂಚಿಸಲು ಕುಯ್ ಕುಯ್ ಎಂದಿತು ಬಾಲ ಅಲ್ಲಾಡಿಸುತ್ತಾ. ಪ್ರಗತಿ ಅದನ್ನು ಮೆಲ್ಲನೆ ಎತ್ತಿಕೊಂಡು ಮುದ್ದಿಸಿದಳು.

    ನೀತಿ :

  3. ಪುಟ್ಟನ ಬೆಕ್ಕು
  4. ಒಂದು ಊರಿನಲ್ಲಿ ಪುಟ್ಟು ಎನ್ನುವ ಹುಡುಗನಿದ್ದನು. ಅವನಿಗೆ ಬೆಕ್ಕು ನಾಯಿಗಳೆಂದರೆ ತುಂಬಾ ಇಷ್ಟ. ಪುಟ್ಟನ ಮನೆಯಲ್ಲಿ ಇಲಿಗಳ ಕಾಟ ತುಂಬಾ ಜೋರಾಗಿಬಿಟ್ಟಿತ್ತು. ಮನೆಯಲ್ಲಿದ್ದ ದವಸಧಾನ್ಯಗಳನ್ನು ತಿನ್ನುವುದು, ಬಟ್ಟೆಗಳನ್ನೆಲ್ಲ ಕಡಿಯುವುದು, ಅಡಿಗೆ ಮನೆಯಲ್ಲಿದ್ದ ತೆಂಗಿನ ಕಾಯಿಗಳನ್ನು ತಿನ್ನುವುದು ಇವೆಲ್ಲ ಹೆಚ್ಚಾಗಿಬಿಟ್ಟಿದ್ದವು. ಇಲಿಗೇನಾದರೂ ಬೋಂಡಾ ಮಾಡಿ ಅದರಲ್ಲಿ ಮದ್ದು ತುಂಬಿ ಇಡೋಣವೆಂದರೆ ಆಮೇಲೆ ನಾಯಿಯೋ ಅಥವಾ ಪಕ್ಕದ ಮನೆಯ ಬೆಕ್ಕೋ ಬಂದು ತಿಂದರೆ.. ಸುಮ್ಮನೆ ಅವರು ಪ್ರೀತಿಯಿಂದ ಸಾಕಿದ ಪ್ರಾಣಿಯನ್ನು ನಾವು ಸಾಯಿಸಿ ಅವರಿಗೆ ಬೇಸರ ಮಾಡುವುದೇಕೆ.. ಎನಿಸಿ ಅದರ ವಿಚಾರವನ್ನು ಬಿಟ್ಟಿದ್ದರು. ಇಲಿಯ ಕಾಟ ತಪ್ಪಿಸಲು ಸರಿಯಾದ ಮಾರ್ಗವೆಂದು ಬೆಕ್ಕಿನ ಮರಿಯನ್ನು ತಂದು ಸಾಕಿದರು. ಪುಟ್ಟನಿಗಂತೂ ಖುಷಿಯೋ ಖುಷಿ. ದಿನಾಲೂ ಮನೆಯಲ್ಲಿ ಇದ್ದ ಸಮಯದಲ್ಲೆಲ್ಲ ಬೆಕ್ಕಿನ ಜೊತೆಯೇ ಆಟ. ಓದುವಾಗಲೂ, ಊಟ ತಿಂಡಿಯ ವೇಳೆಯಲ್ಲೂ ಬೆಕ್ಕಿನ ಮರಿ ಅವನ ಹತ್ತಿರವೇ ಇರುತ್ತಿತ್ತು. ರಾತ್ರಿ ಮಲಗುವಾಗಲಂತೂ ತನ್ನ ಹಾಸಿಗೆಯಲ್ಲೇ ಮಲಗಿಸಿಕೊಂಡು ನಿದ್ದೆ ಮಾಡಿಸುತ್ತಿದ್ದ. ಪುಟ್ಟನಿಗೋ ಆ ಬೆಕ್ಕಿನ ಮರಿಯನ್ನು ಚೆನ್ನಾಗಿ ಸಾಕಬೇಕು. ಅದು ದಷ್ಟಪುಷ್ಟವಾಗಿ ಬೆಳೆಯಬೇಕು.. ಆಮೇಲೆ ತನ್ನ ಗೆಳೆಯರಿಗೆಲ್ಲ ಅದನ್ನು ತೋರಿಸಬೇಕು, ಪೋಟೋ ತೆಗೆದು ಫೇಸ್ಬುಕ್ನಲ್ಲಿ ಹಾಕಬೇಕು ಎಂದು ಏನೆಲ್ಲಾ ಆಸೆಗಳು. ಪ್ರತಿದಿನವೂ ಅವನೇ ಹಾಲು- ಅನ್ನ ಹಾಕುವುದು. ಅದಕ್ಕೆಂದೇ ಸುಂದರವಾದ ಪ್ಲೇಟನ್ನು ಪೇಟೆಯಿಂದ ತಂದಿದ್ದ. ಬೆಕ್ಕಿನ ಮರಿಗೆಂದೇ ಸ್ಪೆಷಲ್ ಬಿಸ್ಕಿಟ್ಗಳನ್ನೂ ತಂದಿಟ್ಟಿದ್ದ. ಈ ಬೆಕ್ಕೋ ತಾಸು ತಾಸಿಗೆ ಮಿಯಾಂ.. ಮಿಯಾಂ.. ಎಂದು ಕರೆದು ಹಾಲು ಹಾಕಿಸಿಕೊಳ್ಳುತ್ತಿತ್ತು. ಪುಟ್ಟನಿಲ್ಲದಿದ್ದರೆ ಅಮ್ಮನ ಹತ್ತಿರ ಹೇಳಿ ಹೋಗುತ್ತಿದ್ದ. ಪುಟ್ಟ ಬಂದ ಕೂಡಲೇ ಬಿಸ್ಕಿಟ್ ಡಬ್ಬದ ಬಳಿ ಹೋಗಿ ಜಂಪ್ ಮಾಡಿ ತೋರಿಸಿ ಹಾಕು ಎನ್ನುತ್ತಿತ್ತು. ಪುಟ್ಟನಿಗೆ ಬೆಕ್ಕಿನ ಈ ರೀತಿ ತುಂಬಾ ಮಜಾ ಕೊಡುತ್ತಿತ್ತು. ಆತನ ಬಳಿ ಮತ್ತೆ ಮತ್ತೆ ಅದನ್ನೇ ಕೇಳಿ ತಿನ್ನುತ್ತಿತ್ತು. ಇದು ಪ್ರತಿದಿನವೂ ಹಾಲು, ಬಿಸ್ಕಿಟ್ಟು ಎಂದು ಮೇಲಿಂದ ಮೇಲೆ ತಿನ್ನುವುದು ಮಲಗುವುದು ಮಾಡುತ್ತಿತ್ತು. ಹೀಗೇ ತಿಂದೂ ತಿಂದು ದಪ್ಪ ದಪ್ಪವಾಗಿ ಸುಂದರವಾಗಿ ಬೆಳೆದಿತ್ತು. ಆದರೆ ಅದು ಬೆಳೆದು ದೊಡ್ಡದಾದರೂ ಒಂದು ದಿನವೂ ಇಲಿ ಹಿಡಿಯುವ ಪ್ರಯತ್ನ ವನ್ನು ಮಾಡಲೇ ಇಲ್ಲ. ಬಂದವರೆಲ್ಲ ಎಷ್ಟು ಚೆನ್ನಾಗಿದೆ ನಿಮ್ಮ ಮನೆಯ ಬೆಕ್ಕು.. ಎಂದು ಮುದ್ದು ಮಾಡಿ ಹೊಗಳಿ ಹೋಗುತ್ತಿದ್ದರು. ಆದರೆ ಪುಟ್ಟನ ಅಮ್ಮ ಮಾತ್ರ 'ಅದೇನು ಬೆಕ್ಕಿನ ಮರಿ ಸಾಕಿದ್ದು ಚೆಂದಕ್ಕಾ.. ಇಲಿಗಳ ಕಾಟ ಹಾಗೇ ಇದೆ. ಇನ್ನೊಂದು ದಿನ ಆ ಇಲಿಗಳೆಲ್ಲಾ ಸೇರಿ ನಮ್ಮನ್ನೂ ಒಯ್ಯುತ್ವೆ' ಎಂದು ಹುಸಿ ಕೋಪ ತೋರಿಸಿ ಬೈಯ್ಯುತ್ತಿದ್ದರು. ಅಲ್ಲದೇ ಈ ಬೆಕ್ಕಿನ ಎದುರೇ ಇಲಿಗಳು ಹರಿದಾಡುತ್ತಿದ್ದರೂ ಬೆಕ್ಕು ಇಲಿಗಳಿಗೆ ಹೆದರಿ ಓಡುತ್ತಿತ್ತು. ಬೆಕ್ಕು ಇಲಿಗಳನ್ನು ಹಿಡಿಯುವುದು ಹಿಂದಿನಿಂದಲೂ ರೂಢಿಯಲ್ಲಿ ಬಂದಿದ್ದು. ಅದರ ಮೂಲ ಸ್ವಭಾವವೇ ಇಲಿಗಳ ಬೇಟೆಯಾಡಿ ತಿನ್ನುವುದು. ಆದರೆ ಈ ಬೆಕ್ಕು ಒಂದು ದಿನವೂ ಇಲಿಯನ್ನು ಬೇಟೆಯಾಡುವ ಪ್ರಯತ್ನವನ್ನೂ ಮಾಡುವುದಿಲ್ಲವಲ್ಲ.. ಎಂದು ಅನುಮಾನ ಮಾಡಿದರು. ಒಂದು ದಿನ ಪುಟ್ಟನ ಅಜ್ಜ ಅವರ ಮನೆಗೆ ಬಂದಿದ್ದರು. ಅವರು ಪುಟ್ಟನ ಬೆಕ್ಕು ಬೇಕಾದಷ್ಟು ತಿಂದುಂಡು ಆಮೇಲೆ ಸೋಫಾದ ಮೇಲೆ ಮಲಗುವುದನ್ನು ನೋಡಿದರು. ಎಲ್ಲವೂ ಕುಂತಲ್ಲೇ ಸಿಕ್ಕಿದರೆ ನಾವು ಯಾವುದಕ್ಕೂ ಪ್ರಯತ್ನವನ್ನೇ ಮಾಡುವುದಿಲ್ಲ. ಹಾಗೇ ಈ ಬೆಕ್ಕಿನ ಮರಿಯೂ ಕೂಡ ಎಂದೆನಿಸಿ ಅವರು ಪುಟ್ಟನನ್ನು ಕರೆದು 'ಪುಟ್ಟಾ, ನಿನ್ನ ಬೆಕ್ಕಿನ ಮರಿಗೆ ಹೀಗೇ ಆಗಾಗ ಆಹಾರ ಕೊಡುವುದರಿಂದ ಆಲಸ್ಯ ಬೆಳೆದು ಬೇಟೆಯಾಡುವ ಪ್ರಯತ್ನವನ್ನೇ ಮಾಡಲಾರದು. ಅದಕ್ಕೇ ಬೆಕ್ಕಿನ ಮರಿಗೆ ದಿನಾಲು ಮೂರು ವೇಳೆ ಮಾತ್ರ ಆಹಾರ ಕೊಡುವ ರೂಢಿ ಮಾಡಿಸು. ಆಗ ಅದು ಇಲಿಗಳನ್ನು ಬೇಟೆಯಾಡುವುದನ್ನು ಕಲಿಯುತ್ತದೆ' ಎಂದರು. ಅಂದಿನಿಂದ ಪುಟ್ಟು ಎಲ್ಲಾ ವೇಳೆಯಲ್ಲಿ ತಿಂಡಿ ಹಾಕುವುದನ್ನು ಬಿಟ್ಟನು. ಮಾರನೇ ದಿನವೇ ಪುಟ್ಟನ ಬೆಕ್ಕು ಇಲಿ ಹಿಡಿಯುವುದನ್ನು ಕಲಿಯುವುದಕ್ಕೆ ಶುರು ಮಾಡಿತು. ಮನುಷ್ಯರಿಗಾಗಲಿ ಪ್ರಾಣಿಗಳಿಗಾಗಲಿ ಕುಳಿತಲ್ಲೇ ಎಲ್ಲಾ ತಂದು ಕೊಟ್ಟರೆ ಅವು ದುಡಿಯುವ ಪ್ರಯತ್ನವನ್ನು ಮಾಡುವುದಿಲ್ಲ. ಆಲಸ್ಯ ರೂಢಿಸಿಕೊಳ್ಳುತ್ತವೆ.

    ನೀತಿ :

3 ಕಾಮೆಂಟ್‌ಗಳು: